ಭೂಸೇನಾ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಾಸಕ ಗುತ್ತೇದಾರ ಒತ್ತಾಯ

0
35

ಆಳಂದ: ತಾಂಡಾ ಅಭಿವೃದ್ಧಿ ನಿಗಮದಿಂದ (ಕೆಆರ್‍ಐಡಿಎಲ್), ಕ್ಷೇತ್ರಕ್ಕೆ ಮಂಜೂರಾದ 3.50ಕೋಟಿ ರೂಪಾಯಿ ಕಾಮಗಾರಿ ಮಾಡದೆ ಹಣ ಲೂಟಿಮಾಡಿದ್ದಾರೆ. ಸಂಬಂಧಿತ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಧಿಕಾರಿಗಳು ಕಾಮಗಾರಿ ಮಾಡದೆ ಬೋಗಸ್ ಬಿಲ್ ಸೃಷ್ಟಿಸಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ಲೂಟಿ ಮಾಡಿ ಸರ್ಕಾರಕ್ಕೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರಿಗೆ ಮೋಸಮಾಡಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ, ಕ್ರಿಮಿನಲ್ ಪ್ರಕರಣ ದಾಖಲಿಸಿ ಸರ್ಕಾರದ ಹಣವನ್ನು ವಸೂಲಿಮಾಡಿಕೊಂಡು ಅವರ ಮೇಲೆ ಕಾಅನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಕ್ಷೇತ್ರಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ್ಲ ಬಂದ ಅನುದಾನದಲ್ಲಿ ಯಾವುದೇ ಮೂಲಸೌಕರ್ಯಗಳನ್ನು ಮಾಡದೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಲಾಡಚಿಂಚೋಳಿ ತಾಂಡಾ ಗ್ರಾಮದ ಸಂಪರ್ಕ ರಸ್ತೆಗೆ 48.78 ಲಕ್ಷ, ಹೀಗೆ ಧುತ್ತರಗಾಂವ ತಾಂಡಾ, ನಿಂಬರಗಾ ತಾಂಡಾ, ಧರಿ ತಾಂಡಾ, ದಣ್ಣೂರ ತಾಂಡಾ, ಕೊರಳ್ಳಿ ಹೀಗೆ ಒಟ್ಟು ಕಾಮಗಾರಿ 3.50 ಕೋಟಿ ಮೊತ್ತವದಲ್ಲಿ ಪರಿಶಿಷ್ಟ ಜಾರಿ ಮತ್ತು ಪಂಗಡದ ಜನರಿಗೆ ಮೂಲಸೌರ್ಕಗಳನ್ನು ಒದಗಿಸಿ ಅವರಿಗೆ ಮುಖ್ಯವಾಹಿನಿಗೆ ತರಲು ಸರ್ಕಾರಗಳು ಹರಸಹಾಸ ಪಟ್ಟು ಅನುದಾನ ಒದಗಿಸಿದರೂ ಸಹ ಇಂಥ ಭ್ರಷ್ಟ ಅಧಿಕಾರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ.

ಅಧಿಕಾರಿ ಎಸ್.ಎಂ. ನಾಯಕ, ಮತ್ತು ಎಸ್.ಬಿ.ನಾಗೂರೆ ಅಧಿಕಾರಿಗಳು ಒಂದೇ ಅವಧಿಯಲ್ಲಿ ಕಳೆದ ಜೂನ್ ನಿವೃತ್ತಿಯಾಗಿದ್ದಾರೆ. ನಿವೃತ್ತಿ ಅಂಚಿನಲ್ಲಿ ಅವ್ಯವಹಾರ ಮಾಡಿ ನುಣುಚಿಕೊಳ್ಳಲು ಸಂಚುರೂಪಿಸಿ ಕರ್ತವ್ಯ ಮರೆತ್ತಿದ್ದಾರೆ.

ಅಲ್ಲದೆ ಇನ್ನೂ ಕೆಲವು ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಅವರ ಮೇಲೆ ಕ್ರಮ ಜರುಗಿಸಿ ಅನುದಾನವನ್ನು ವಸೂಲಿ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here