ಶಹಾಬಾದ: ನಗರದಲ್ಲಿ ಬುಧವಾರ ಬಿಜೆಪಿ ಮಂಡಲದಿಂದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾದ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆಯನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ನರಿಬೋಳ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಯ ಮೂಲ ಶಕ್ತಿ ಇರುವುದು ಬೂತ್ ಮಟ್ಟದಲ್ಲಿ .ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ ಪಕ್ಷದ ಬೂತ್ ಅಧ್ಯಕ್ಷ ಎಂದರೆ ಪಕ್ಷದ ಆಧಾರ ಸ್ತಂಭವಿದ್ದಂತೆ. ಈ ಒಂದು ಕಾರ್ಯ ಪದ್ದತಿ ಇರುವುದು ಭಾರÀತೀಯ ಜನತಾ ಪಕ್ಷದಲ್ಲಿ ಮಾತ್ರ.ಬಿಜೆಪಿ ಭೂತ್ ಸಮಿತಿಯು ಬೂತ್ಗಟ್ಟಿಯಾದರೆ ದೇಶವೆ ಗಟ್ಟಿ ಯಾದಂತೆ ಎಂಬುದೇ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್μÁ ರವರ ದ್ಯೇಯವಾಗಿದೆ ಎಂದು ಹೇಳಿದರು.
ಬೂತ್ ಕಮೀಟಿಯ ಜವಾಬ್ದಾರಿ ಎಂದರೆ ಬರಿ ಚುನಾವಣೆ ಮಾಡುವುದಲ್ಲ ಅದ್ಯಕ್ಷರಾದವರು ಕಾರ್ಯಕರ್ತರನ್ನು ಗುರುತಿಸಿ ಗ್ರಾಮದ ಸಮಸ್ಯೆ ಗಳನ್ನು ಬಗೆಹರಿಸಲು ಗ್ರಾಮದ ಹಿರಿಯರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರದ ಸೌಲಭ್ಯಗಳನ್ನು ಹಾಗೂ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮತದಾರರನ್ನು ಕಾರ್ಯಕರ್ತರನ್ನನಾಗಿ ಪರಿವರ್ತಿಸುವ ಕೆಲಸ ಆಗಬೇಕಾಗಿದೆ ಎಂದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಬೂತ್ ಮಟ್ಟದ ಅದ್ಯಕ್ಷರು ,ಕಾರ್ಯಕರ್ತರು ಪಕ್ಷದ ಜೀವಾಳವಿದ್ದಂತೆ. ಮುಂಬರುವ ಜಿಪಂ ತಾಪಂ ಚುನಾವಣೆಗಳನ್ನು ಪಕ್ಷ ಗಂಭಿರವಾಗಿ ಪರಿಗಣಿಸಿದೆ. ಇದು ಬೂತ್ ಸಮಿತಿ ಸಶಕ್ತ ವಾಗಿ ಕಾರ್ಯನಿರ್ವಹಣೆ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿ ಜಿಲ್ಲಾ ಪಂಚಾಯತ್‍ನಲ್ಲಿ ಈ ಬಾರಿ ಅಧಿಕಾರದ ಗದ್ದುಗೆಯನ್ನು ಹಿಡಿಯಬಹುದು ಎಂದರು. ಮಂಡಲ ಅಧ್ಯಕ್ಷರಾದ ಅಣವೀರ ಇಂಗಿನಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗಪ್ಪ ಕೋಳ್ಳಿ ರವರು ಸಂಘಟನೆ ಕುರಿತು ಮಾತನಾಡಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನ್ನಾಪೂರ, ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ,ಸುಭಾಷ ಜಾಪೂರ,ಕನಕಪ್ಪ ದಂಡಗುಲಕರ, ಸಂಜಯ ವಿಟ್ಕರ,ಚಂದ್ರಕಾಂತ ಗೊಬ್ಬೂರಕರ,ಬಸವರಾಜ ತರನಳ್ಳಿ,ಜಯಶ್ರೀ ಸೂಡಿ,ಬಸವರಾಜ ಬಿರಾದಾರ,ಭೀಮರಾವ ಸಾಳೂಂಕೆ,ದಿನೇಶ ಗೌಳಿ,ರಾಜು ಕುಂಬಾರ,ವೇದಿಕೆ ಮೇಲಿದ್ದರು.
ಶಶಿಕಲಾ ಸಜ್ಜನ,ಶಿವಶರಣ ಕರಣಗಿ,ನೀಲಗಂಗಮ್ಮ ಗಂಟ್ಲಿ,ಜಯಶ್ರೀ ಗೌಳಿ,ರತ್ನ ಬಿರಾದಾರ,ಅಣ್ಣಪ್ಪ ದಸ್ತಾಪೂರ,ನಿಂಗಪ್ಪ ಹುಳಗೋಳಕರ,ನಾಗರಾಜ ಮೇಲಗಿರಿ,ಸೂರ್ಯಕಾಂತ ವಾರದ,ಯಲ್ಲಪ್ಪ ದಂಡಗುಳಕರ,ಶರಣು ವಸ್ತ್ರದ,ರಾಮು ಕುಸಾಳೆ,ಹಣಮಂತ ಖೇತ್ರೆ,ನಾರಾಯಣ ಕಂದಕೂರ,ದತ್ತು ಘಂಟಿ,ತಿಮ್ಮಣ ಕುರ್ಡೆಕರ,ಬಸವರಾಜ ಹುಗ್ಗಿ, ನಗರಸಭೆ ಸದಸ್ಯರಾದ ತಿಮ್ಮಾಬಾಯಿ ಕುಸಾಳೆ,ಪಾರ್ವತಿ ಪವರ,ಸುಧಾ ನಿಕ್ಕಮ,ಜಗದೇವ ಸುಭೆದಾರ,ಶಿವಾಜಿ ರೆಡ್ಡಿ,ದತ್ತಾ ಫಂಡ,ಭೀಮಯ್ಯ ಗುತ್ತೆದಾರ ಉಪಸ್ಥಿತರಿದ್ದರು.
ಸಿದ್ರಾಮ ಕುಸಾಳೆ ನಿರೂಪಿಸಿದರು, ಮೋಹನ ಗಂಟ್ಲಿ ಪ್ರಾರ್ಥಿಸಿದರು, ಸದಾನಂದ ಕುಂಬಾರ ವಂದಿಸಿದರು.