ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾದ ನೂತನ ಉಚಿತ

0
15

ಕಲಬುರಗಿ: ಗಂಜ್ ಪ್ರದೇಶದಲ್ಲಿರುವ ನಗರೇಶ್ವರ ಶಾಲಾ ಸಭಾಂಗಣದಲ್ಲಿ ಮಹಾತ್ಮ ಗಾಂಧಿಜಿ ಗ್ರಾಹಕರ ಹಿತರಕ್ಷಣಾ ವೇದಿಕೆ ಹಾಗೂ ಶ್ರೀ ಶರಬಯ್ಯ ಗಾದಾ ಕನ್ಯಾ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾದ ನೂತನ ಉಚಿತ ಕಾನೂನು ಅರಿವು ಮತ್ತು ನೆರವು ಕೇಂದ್ರದ ಉದ್ಘಾಟನೆಯನ್ನು ಗೌರವಾನ್ವಿತ ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಗದೀಶ ವಿ ಎನ್ ಅವರು ನೆರವೇರಿದಸಿದರು.

ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿಜಿ ಗ್ರಾಹಕರ ಹಿತರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ವೈಜನಾಥ ಎಸ್.ಝಳಕಿ ಅವರು ತಮ್ಮ ಜನ್ಮದಿನದ ನಿಮಿತ್ಯ ನೇತ್ರಗಳನ್ನು ದಾನ ಮಾಡಿ ನ್ಯಾಯಾಧೀಶರ ಮುಖಾಂತರ ಆರೋಗ್ಯ ಇಲಾಖೆ ಅಧಿಕಾರಿಗೆ ನೇತ್ರದಾನ ಪತ್ರ ಹಸ್ತಾಂತರಿಸಿದರು.

Contact Your\'s Advertisement; 9902492681

ಗೌರವಾನ್ವಿತ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಶ್ರೀಮತಿ ಸೂರ್ಯಪ್ರಭಾ ಎಚ್.ಡಿ, ಅವರು ಮಾತನಾಡಿ ಬಾಲ್ಯ ವಿವಾಹ ತಡೆಯುವ ಕಾಯ್ದೆಯ ಕುರಿತು ವಿದ್ಯಾರ್ಥಿನಿಯರಿಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಶಾಂತ ಚೌಗಲೆ, ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ರಾಜಕುಮಾರ ಕಡಗಂಚಿ, ವೇದಿಕೆಯ ಸದಸ್ಯರಾದ ಶ್ರೀಮಂತರಾವ ಎಸ್, ಲಕ್ಷ್ಮೀಕಾಂತ ಪಾಟೀಲ, ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀನಿವಾಸ ಮರಿ ಹಾಗೂ ವಿದ್ಯಾರ್ಥಿಗಳು, ಶಾಲಾ ಸಿಬಂದ್ದಿವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here