ಕಲಬುರಗಿಯಲ್ಲಿ ಇಬ್ಬರು ಚಾಲಕರ ಸಜೀವ ದಹನ: ಘಟನಾ ಸ್ಥಳಕ್ಕೆ ಎಸ್‍ಪಿ ಭೇಟಿ

0
183

ಕಲಬುರಗಿ: ಶಹಾಬಾದ ತಾಲೂಕಿನ ತೊನಸನಳ್ಳಿ (ಎಸ್) ಗ್ರಾಮದ ಬಳಿ ಭಾನುವಾರ ಸಂಜೆ ಲಾರಿ, ಮಿನಿ ಲಾರಿ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ವಾಹನಗಳ ಚಾಲಕರು ಸಜೀವ ದಹನರಾದ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಸೋಮವಾರ ಭೇಟಿ ಪರಿಶೀಲಿಸಿದರು.

ಚಿಕ್ಕೋಡಿಯಿಂದ ಹೈದ್ರಾಬಾದಗೆ ಹೊರಟಿದ್ದ ಸಕ್ಕರೆ ತುಂಬಿದ ಲಾರಿ, ಕಲಬುರಗಿ ತಾಲೂಕಿನ ನಂದೂರ ಇಂಡಸ್ಟ್ರಿ ಭಾಗದಿಂದ ಮಧ್ಯವನ್ನು ತುಂಬಿಕೊಂಡು ಕೊಪ್ಪಳಕ್ಕೆ ಹೋಗುತ್ತಿದ್ದ ಮಿನಿ ಲಾರಿ, ವೇಗದಿಂದ ಬಂದಿದ್ದರಿಂದ ಮುಖಾಮುಖಿ ಡಿಕ್ಕಿಯಾಗಿ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೆಂಕಿಯಿಂದ ಎರಡು ವಾಹನಗಳ ಚಾಲಕರು ಸಜೀವ ದಹನರಾಗಿದ್ದರು.

Contact Your\'s Advertisement; 9902492681

ಘಟನಾ ಸ್ಥಳದಲ್ಲಿ ಸುಟ್ಟು ಕರಕಲಾದ ವಾಹನಗಳು, ಸಕ್ಕರೆ ಸುಟ್ಟು ರಸ್ತೆಯ ಮೇಲೆ ಜಿಗುಟುತನವಾದುದನ್ನು ಕಂಡು ಸ್ಥಳದಲ್ಲಿದ್ದ ಗ್ರಾಪಂ ಮಾಜಿ ಅಧ್ಯಕ್ಷರಾದ ಶಿವಲಿಂಗಪ್ಪ ಗೊಳೇದ್, ಬಸವರಾಜ.ಜಿ. ಗೊಳೇದ್ ಅವರನ್ನು ಗ್ರಾಪಂ ಪಿಡಿಓ ಅವರ ಮೂಲಕ ರಸ್ತೆ ಸ್ವಚ್ಛಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂದರು.

ಅಲ್ಲದೇ ಈ ಘಟನೆ ಹೇಗಾಯಿತು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ.ಜಿ.ಗೊಳೇದ್ ಅವರನ್ನು ಕೇಳಿದರು. ಅದೇನು ಗೊತ್ತಿಲ್ಲ.ಊರಿಗೆ ಹೋಗಿದ್ದೆ. ಒಮ್ಮೆಲೆ ವಾಹನಗಳ ಡಿಕ್ಕಿ ಸಂಭವಿಸಿ ಬೆಂಕಿ ಹತ್ತಿದ್ದನ್ನ್ದು ಗ್ರಾಮಸ್ಥರು ನನಗೆ ತಿಳಿಸಿದರು.ನಾನು ಪೊಲೀಸ್ ಇಲಾಖೆಗೆ ಹಾಗೂ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದೆನೆ ಎಂದರು.

ನಂತರ ಘಟನೆಯ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಡಿವ್ಯೆಎಸ್‍ಪಿ ಉಮೇಶ ಚೌಕಿಮಠ, ಪಿಐ ಸಂತೋಷ ಹಳ್ಳೂರ, ಗ್ರಾಪಂ ಸದಸ್ಯ ಸಿದ್ದು ಸಜ್ಜನ್,ಅಣವೀರ ಗೊಳೇದ್,ಜಗದೀಶ, ಆನಂದ ಅಣಕೇರಿ,ಕಾಶಿಂಸಾಬ ಚಿನ್ನಾಕರ್,ರಮೇಶ ಹುಗ್ಗಿ, ವಿಶಾಲ ಸೇರಿದಂತೆ ಪೊಲೀಸ್ ಸಿಬ್ಬಂದಿ ವರ್ಗದವರು ಸ್ಥಳದಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here