ಯಡ್ರಾಮಿ: ಜೆಇ ಶಾಂತಗೌಡ ಬಿರಾದಾರ ಮನೆ ಮೇಲೆ ಎಸಿಬಿ ದಾಳಿ

0
138

ಯಡ್ರಾಮಿ: ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಜೆಇ ಶಾಂತಗೌಡ ಬಿರಾದಾರ ಮನೆˌ ಕಚೇರಿಯ ಮೇಲೆ ಬುಧುವಾರ ಬೆಳ್ಳಿಗ್ಗೆ ಎಸಿಬಿ ದಾಳಿ ನಡೆದಿದೆ.

ಜೆಇ ಶಾಂತಗೌಡ ಬಿರಾದಾರ ಅವರಿಗೆ ಸೇರಿದ ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಮನೆˌ ಕಚೇರಿ ಮತ್ತು ಯಡ್ರಾಮಿ ತಾಲ್ಲೂಕಿನ ಹಂಗರಗಾ(ಬಿ) ಗ್ರಾಮದಲ್ಲಿರುವ ಪ್ರೀತಿ ಸ್ಮಾರಕ ತೋಟದ ಮನೆಯ ಮೇಲೆ ದಾಳಿ ನಡೆಸಲಾಗಿದೆ.

Contact Your\'s Advertisement; 9902492681

ಆದಾಯ ಮೀರಿ ಆಸ್ತಿಗಳಿಕೆಯ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಕಲಬುರಗಿ ನಗರದ ಮನೆ ಮತ್ತು ಹಂಗರಗಾ(ಬಿ) ಮನೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಸರಕಾರದ ಸೌಲಭ್ಯಗಳುˌ ಸಿಸಿ ರಸ್ತೆ ಸೇರಿದಂತೆ ಹಲವು ಸೌಲಭ್ಯಗಳು ತಮ್ಮ ಮನೆˌ ತೋಟಗಳಿಗೆ ಮಾಡಿಸಿಕೊಂಡಿದ್ದಲ್ಲದೆˌ ಪರಿಶಿಷ್ಟ ಜಾ ತಿˌ ಪಂಗಡಗಳಿಗೆ (SCP/TSP) ಮೀಸಲಾದ ಹಣವನ್ನ ಇತರೆ ಕಡೆಗಳಲ್ಲಿ ಮಾಡಿ ಅಪಾರ ಪ್ರಮಾಣದ ಹಣ ಮಾಡಿರುವ ಆರೋಪವು ಇವರ ಮೇಲಿದೆ.

ಎಸಿಬಿ ಅಧಿಕಾರಿಗಳು ಸ್ಥಳದಲ್ಲಿದ್ದು ದಾಖಲೆ ಪರಿಶೀಲಿಸುವ ಕಾರ್ಯ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here