# ಉತ್ತಮವಾಗಿ ಉಪಮೇಯಗಳ ನಿರೂಪಣೆಯಿಂದ ವಚನಗಳನ್ನು ನಿರೂಪಿದ ಕೋಲಶಾಂತಯ್ಯನೂ..!–
ವೀರಶೈವ ಅಮರ ಗಣಾಧೀಶ್ವರರ ಪಂಕ್ತಿಯಲ್ಲಿ ಒಬ್ಬನಾಗಿದ್ದ ಈತ ಹಿರಿಯ ಶರಣ ಹಾಗೂ ವಚನಕಾರನಾಗಿದ್ದನು. ಅವನೇ ಕೋಲಶಾಂತಯ್ಯನೆಂಬ ಶಿವಶರಣನು.
ಬಸವಣ್ಣ, ಬಿಜ್ಜಳರ ಸಮಕಾಲೀನ. ಬಿಜ್ಜಳನಲ್ಲಿ ಕಟ್ಟಿಗೆ ಅಥವಾ ಕೋಲನ್ನು ಹಿಡಿವ ಕಾಯಕವನ್ನು ನಡೆಸುತ್ತಿದ್ದುದರಿಂದ ಈತನ ಹೆಸರಿನ ಹಿಂದೆ ಕೋಲು ವಿಶೇಷಣವಾಗಿ ಬಂದಿರಬಹುದೆಂದೂ ಹೇಳಬಹುದು.
ವಿವಿಧ ಸಾಹಿತ್ಯ ಮೂಲಗಳಿಂದ ತಿಳಿದು ಬರುವಂತೆ ಈತ `ಚಿತ್ರದ ಜಂಗಮವನಿದವನನಿದ ಆಗಿದ್ದ ಈತ ಪವಾಡದ ವ್ಯಕ್ತಿಯಾಗಿ ತನ್ನ ಮಹಿಮೆಯನ್ನು ಮೆರೆದಿದ್ದಾನೆ.
ವಚನ ರಚನೆಯಿಂದ ವಚನ ಸಾಹಿತ್ಯದಲ್ಲಿಯೂ ಹಿರಿಯ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾನೆ.
ಈಗ ದೊರೆತಿರುವಂತೆ ಈತನ ವಚನಗಳ ಸಂಖ್ಯೆ 100 ರ ಸಂಖ್ಯೆಯಲ್ಲಿ ಇರಬಹುದು. ಇವುಗಳಲ್ಲಿ 64 ಸಾಮಾನ್ಯ ವಚನಗಳಾಗಿವೆ, 36 ಬೆಡಗಿನ ವಚನಗಳು ಎಂದು ಬಲ್ಲವರು ಹೇಳುತ್ತಾರೆ.
ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗಸಂಗ ಎಂಬುದೇ ಈತನ ವಚನಾಂಕಿತವು. ಎಲ್ಲ ವಚನಕಾರರಂತೆ ಈತನೂ ಷಟ್ಸ್ಥಲ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ.
ಭಕ್ತನಾದವನ ಜಡೆಮುಡಿಗಳು ಎಂತೇ ಇರಲಿ ಆತನ ನಡೆನುಡಿ ಸಿದ್ಧಾಂತವಾದರೆ ಸಾಕು. ಅವನಿಗೆ ಅವಸೋಂಕು ಬಂದರೂ ಭಾವ ಶುದ್ಧವಾಗಿರಬೇಕು ಎಂಬವೇ ಮೊದಲಾದ ವಿವಿಧ ನೀತಿಗಳನ್ನು ಹಲವಾರು ಉತ್ತಮ ಉಪಮೆಗಳ ಮೂಲಕ ನಿರೂಪಿಸಿದ್ದಾನೆ ಕೋಲಶಾಂತಯ್ಯನೆಂಬ ಶಿವಶರಣ ವಚನಕಾರ.
ವೇಸಿಯ ಸಂಗ ದ್ರವ್ಯದ ಕೇಡು, ದಾಸಿಯ ಸಂಗ ಮಾನಹಾನಿಗೆ ಮೊದಲು; ಆಂದಣಗಿತ್ತಿಯ ಮಾತು ಬಂದಿಕಾರ ಜಗಳದಂತೆ, ಕಂಡವರಲ್ಲಿ ತಂದು ಮಾಡುವವನ ಮಾಟ ಸಾಕಿ ಕೊಂದಿಹನ ದಯದಂತೆ; ಮಾಡಿ ಆಡಲೇತಕ್ಕೆ, ಸಲಹಿಕೊಲಲೇತಕ್ಕೆ, ಬಿತ್ತಿ ಕೀಳಲೇತಕ್ಕೆ, ಕಟ್ಟಿ ಒಡೆಯಲೇಕೆ? ಮಾಡಿ ಮಾಡಿ ಮನಗುಂದುವ ನೀಡಿ ನೀಡಿ ನಿಜಗುಂದುವಣ ಬೇಡ ಎಂದೂ ಹೇಳುವ ಈತನ ನೀತಿ ನಿರೂಪಣೆಯ ಶೈಲಿ ಉತ್ತಮ ಮಟ್ಟದ್ದಾಗಿದೆ..!
ಹೀಗಿರುವ ಕೋಲಶಾಂತಯ್ಯನೆಂಬ ಶಿವಶರಣ ವಚನಕಾರ ಬಹು ಪ್ರಸಿದ್ಧ ವಚನಗಳನ್ನು ರಚಿಸಿದವನು..!ಇದಿಷ್ಟೇ ಈ ಕೋಲಶಾಂತಯ್ಯನೆಂಬ ಶಿವಶರಣ ವಚನಕಾರನ ಬಗೆಗೆ ನಮಗೆ ಗೊತ್ತಿರುವಂತದ್ದಾದೆ.