ಬೆಳೆ ಹಾನಿ ವಿಮಾ ಪರಿಹಾರದ ಕೊನೆಯಾಗದ ರೈತರ ಗೋಳಾಟ

0
17
  • ಜಗದೀಶ ಕೋರೆ ನಿರಗುಡಿ

ಆಳಂದ: ಪ್ರಸಕ್ತ ಮುಂಗಾರಿನ ಬಿತ್ತನೆಯಿಂದ ಆರಂಭವಾದ ಅತಿವೃಷ್ಟಿ ಅನಾವೃಷ್ಟಿಗೆ ಬೆಳೆ ಕೈಗೆ ಬಾರದೆ ನಷ್ಟವಾಗಿದ್ದು, ಇದಕ್ಕೆ ಸರ್ಕಾರದ ಪರಿಹಾರ ದೊರೆಯುವುದೆಂಬ ನಿರೀಕ್ಷೆಯಲ್ಲಿ ಅನ್ನದಾತರು ಎದುರು ನೋಡುತ್ತಿದ್ದಾರೆ.

ರೈತರ ಸುಮಾರು ೧೦ ಎಕರೆ ಅದಕ್ಕೂ ಹೆಚ್ಚು ಬೆಳೆ ಹಾಳಾದರು ಪರಿಹಾರ ಮಾತ್ರ ಬರೀ ೫ ಎಕರೆಗೆ ನೀಡಲಾಗುತ್ತಿದೆ. ಅದು ಸಹ ಸಕಾಲಕ್ಕೆ ಬರದೆ ಕಂಗಲಾಗಿಸಿದೆ.

Contact Your\'s Advertisement; 9902492681

ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಬಿತ್ತನೆಯಾದ ೯೭೪೬೬ ಹೆಕ್ಟೇರ್ ಪೈಕಿ ಅಕ್ಟೋಬರ್ ವರೆಗೆ ೪೨೯೯೪ ಹೆಕ್ಟೇರ್ ಬೆಳೆ ಹಾನಿಯಾದರೆ, ಅಕ್ಟೋಬರನಿಂದ ನವೆಂಬರ ತಿಂಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರೋಗ ಬಾಧೆಗೆ ಸಿಲುಕಿ ಬಾಕಿ ಉಳಿದಿದ್ದ ೫೪೪೨೨ ಹೆಕ್ಟೇರ್ ತೊಗರಿಯು ಗೊಡ್ಡುಬಿದ್ದು ಕೈಗೆ ಬಾರದಂದಾಗಿ ಶೇ ೭೦ ರಷ್ಟು ಹಾನಿಯಾಗಿದ್ದು, ಹೀಗೆ ಬಿತ್ತನೆಯಾದ ಒಟ್ಟು ೯೭೪೬೬ ಹೆಕ್ಟೇರ್ ಬೆಳೆ ಎರಡು ಅವಧಿಯಲ್ಲಿ ಹಾನಿಯಾಗಿ ರೈತರ ಗಾಯದ ಮೇಲೆ ಬರೆ ಎಳೆದುಕೊಂಡಿದೆ. ೨ನೇ ಅವಧಿಯಲ್ಲಿ ಹಾನಿಯಾದ ಸರ್ಕಾರಿ ಸಮೀಕ್ಷೆಯಲ್ಲಿ ೫೪೪೨೨ ಹೆಕ್ಟೇರ್ ದಾಖಲೆಯಾಗದೆ ಹೊರಗುಳಿದುಕೊಂಡಿದೆ.

ಬೆಳೆಗಳಿಗೆ ಬೇಕೆಂದಾಗ ಬಾರದ ಮಳೆ, ಬೇಡವಾದಾಗ ಅತಿಯಾಗಿ ಸುರಿದಿದ್ದು, ಇದರಿಂದ ಹಳ್ಳ ಕೊಳ್ಳಗಳು ತುಂಬಿ ಹರಿದವು. ಹೊಲ, ಗದ್ದೆಗಳಲ್ಲಿ ಪ್ರವಾಹ ನೀರು ಹೊಕ್ಕು ಬೆಳೆ ಹಾನಿಯಾಗಿದೆ. ಹಾನಿಯ ಕುರಿತು ಕೃಷಿ ಕಂದಾಯ, ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆ ವರದಿಯೂ ವಿಳಂಬವಾಗಿಯಾದರು ಸಿದ್ಧವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಆದರೆ ಇನ್ನೂ ಸರ್ಕಾರದ ನಿರೀಕ್ಷಿತ ಪರಿಹಾರ ಬಂದಿಲ್ಲ. ಮೇಲಾಗಿ ಫಸಲು ಭೀಮಾ ಯೋಜನೆಯಲ್ಲಿ ಬೆಳೆ ವಿಮಾ ಕಂತು ಪಾವತಿಸಿದ ರೈತರಿಗೂ ವಿಮಾ ಪರಿಹಾರ ಬಾರದೆ ಇರುವುದು ನುಂಗದ ತುತ್ತಾಗಿ ಪರಿಣಮಿಸಿದೆ. ಚುನಾವಣೆ ಆರೋಪ ಪ್ರತ್ಯಾರೋಪದಲ್ಲೇ ಮಗ್ನವಾಗಿರುವ ಆಡಳಿತ ಮತ್ತು ಪ್ರತಿಪಕ್ಷದ ಚುನಾಯಿತ ಜನ ಪ್ರತಿನಿಧಿಗಳು ಮತ್ತು ಚುನಾವಣೆ ನೀತಿ ಸಂಹಿತೆ ಸಭೆ, ಸಮಾರಂಭಗಳಲ್ಲೇ ಕುಂಟ ನೆಪದಲ್ಲೇ ಕಾಲ ಕಳೆಯುತ್ತಿರುವ ಅಧಿಕಾರಿಗಳಿಗೆ ರೈತರ, ಕೂಲಿ ಕಾರ್ಮಿಕರ ಸೇರಿ ಜನ ಸಾಮಾನ್ಯರ ಗೋಳು ಹೀಗೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕುಂದು ಕೊರತೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬರತೊಡಗಿದೆ. ಆರಂಂಭದಲ್ಲಿ ಹಾನಿಯ ಪರಿಹಾರದ ಧ್ವನಿ ಎತ್ತಿದ್ದ ನಾಯಕರುಗಳು, ಈಗ ಬಹುತೇಕ ಮೌನತಾಳಿದ್ದು, ಮತ್ತೊಂದಡೆ ಪರಿಹಾರ ಕೈ ಬಾರದೆ ಇರುವುದು ರೈತರ ಲೆಕ್ಕ ಬುಡಮೇಲಾಗಿಸಿದೆ.

ಸದ್ಯ ಮುಂದಿನ ಕೃಷಿ ಚಟುವಟಿಕೆಗೆ ಕೈಯಲ್ಲಿ ಹಣವಿಲ್ಲದೆ ರೈತ ಸಮೂದಾಯಕ ಸಂಕಷ್ಟದಿಂದ ಕಾಲ ಕಳೆಯುವಂತಾಗಿದೆ. ಅಳಿದುಳಿದ ಸೋಯಾಭಿನ್, ಹೆಸರು, ಉದ್ದು ಬೆಳೆಯ ರಾಶಿಮಾಡಿಕೊಂಡು ಮಾರುಕಟ್ಟೆಗೆ ಹೋದವರಿಗೆ ನಿರೀಕ್ಷಿತ ಬೆಲೆ ಬಾರದೆ ಕೈಸುಟ್ಟುಕೊಂಡಿದ್ದಾರೆ.

ಸರ್ಕಾರ ಗರಿಷ್ಠ್ಠ ೨ ಹೆಕ್ಟೇರ್ ಮಾತ್ರ (೫ಎಕರೆ), ಪರಿಹಾರ ಘೋಷಿಸಿದೆ. ಆದರೆ ಬಹುತೇಕ ಅನೇಕರ ಜಮೀನು ಹೊಂದಿದವರ ದುಪ್ಪಟ್ಟು ಹಾನಿಯಾಗಿದೆ. ಸರ್ಕಾರದ ಹಾನಿಯ ಲೆಕ್ಕ ಹೆಚ್ಚಾದರು ಸಹ ಹಾನಿಯಾದಷ್ಟ ನೀಡುವ ಬದಲು ಬರೀ ೨ ಹೆಕ್ಟೇರ್‌ಗೆ ಮಾತ್ರ ಪರಿಹಾರ ಸಮೀತಗೊಳಿಸಿದೆ. ಅದು ಸಹ ಸಕಾಲಕ್ಕೆ ದೊರೆಯದೆ ಎದುರು ನೋಡುವಂತೆ ಮಾಡಿದೆ.

ಅಗಷ್ಟ ತಿಂಗಳಿಂದ ಬೆಳೆ ಹಾನಿಯ ಸಮೀಕ್ಷೆ ಮುಂದುವರೆದು ಒಟ್ಟು ಹಿಂಗಾರಿನ ಬಿತ್ತನೆಯಾದ ೧೨೭೭೧೭ ಹೆಕ್ಟೇರ್ ಪೈಕಿ ೪೨೯೯೪ ಹೆಕ್ಟೇರ್ ಖುಷ್ಕಿ ತೊಗರಿ, ಕಬ್ಬು, ಉದ್ದು, ಹೆಸರು, ಸೋಯಾಭಿನ್ ಹೀಗೆ ಇನ್ನಿತರ ಬೆಳೆ ಹಾನಿಯ ಅಂದಾಜಿಸಲಾಗಿದೆ. ಅಲ್ಲದೆ, ತೋಟಗಾರಿಕೆ ಸುಮಾರು ೫೦೦ ಹೆಕ್ಟೇರ್‌ನಲ್ಲಿ ಬಾಳೆ, ಪಪಾಯಿ, ತರಕಾರಿ ಇನ್ನಿತರ ಬೆಳೆ ಹಾನಿಯಾಗಿ ಒಟ್ಟು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾದ ಕುರಿತು ಅಧಿಕಾರಿಗಳು ತಿಳಿಸಿದ್ದಾರೆ.

ತೋಗರಿ ಒಟ್ಟು ಬಿತ್ತನೆ ಖುಷ್ಕಿ ೯೭೪೬೬ ಹೆಕ್ಟೇರ್ ಮತ್ತು ನೀರಾವರಿ ೫೦೦ ಹೆಕ್ಟೇರ್ ಬಿತ್ತನೆ ಕೈಗೊಳ್ಳಲಾಗಿದೆ. ಆರಂಭದಲ್ಲಿ ತೊಗರಿ ಉತ್ತಮ ಫಸಲು ನೀಡುವ ನಿರೀಕ್ಷೆ ಹೊಂದಿದ್ದ ರೈತರಿಗೆ ಅತಿಯಾದ ಮಳೆಯಿಂದ ಖುಷ್ಕಿ ೪೨೯೯೪ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ.

ಬಾಕಿ ಉಳಿದ ೫೪೪೨೨ ಹೆಕ್ಟೇರ್ ತೊಗರಿ ಬೆಳೆಯುವ ಸಹ ರೋಗಬಾಧೆ ಆವರಿಸಿಕೊಂಡು ಬರಡಾಗಿ ಮತ್ತು ಗೊಡ್ಡಾಗಿ ನಿಂತುಕೊಂಡು ಹಾನಿಯಾಗಿದೆ. ಅಳಿದುಳಿದ ತೊಗರ ಶೇ ೩೦ರಷ್ಟು ಫಲ ಕೈಗೆಬಂದರು ಸಹ ಕೃಷಿ ವೆಚ್ಚಕ್ಕೆ ಸರಿದೊಗಿ ಬರಿಗೈಯಿಂದಲೆ ಮನೆ ಸೇರುವಂತಾದ ರೈತರ ದಯನೀಯ ಪರಿಸ್ಥಿತಿಗೆ ಸರ್ಕಾರ ಮತ್ತು ಅಧಿಕಾರಿಗಳು ಜನ ಪ್ರತಿನಿಧಿಗಳು ಸೇರಿ ಹಾನಿಯ ಕೊಂಚವಾದರು ಪರಿಹಾರ ಒದಗಿಸುವಲು ಮುಂದಾಗಬೇಕಾಗಿದೆ. ಇಲ್ಲವಾದಲ್ಲಿ ಅನ್ನ ಬೆಳೆಯುವ ರೈತರ ಸಂಕಷ್ಟದೊಂದಿಗೆ ಮುಂದಿನ ದಿನಗಳಲ್ಲಿ ಅನ್ನವಿಲ್ಲದೆ ಜನ ದಂಗೆ ಎಳುವ ಪರಿಸ್ಥಿತಿ ತಳಿಹಾಕಲಾಗದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here