ಕೋಟಿ ವೆಚ್ಚದಲ್ಲಿ ನಿರಗುಡಿ ಪ್ರೌಢಶಾಲೆ ಕಟ್ಟಡ ಕಾಮಗಾರಿಗೆ ಚಾಲನೆ

0
19

ಆಳಂದ: ತಾಲೂಕಿನ ನಿರಗುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಜಿಪಂ ಅನುದಾನದ ಅಡಿಯಲ್ಲಿ ಒಂದು ಕೋಟಿ ವೆಚ್ಚದ ಕಾಮಗಾರಿ ಆರಂಭಕ್ಕೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗುಂಡಪ್ಪ ಎಸ್. ಅಣೂರೆ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅಣೂರೆ ಅವರು, ಗ್ರಾಮದ ಪ್ರೌಢಶಾಲೆಯ ಕಟ್ಟಡದ ಬಹುದಿನಗಳ ಬೇಡಿಕೆಯನ್ನು ಕ್ಷೇತ್ರದ ಶಾಸಕ ಸುಭಾಷ ಗುತ್ತೇದಾರ ಅವರು ಭರವಸೆ ನೀಡಿದಂತೆ ಜಿಪಂನಿಂದ ಅನುದಾನ ಒದಗಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಗ್ರಾಮಸ್ಥರು ಎಲ್ಲರು ಸೇರಿಕೊಂಡು ಕಾಮಗಾರಿಯ ಗುಣಮಟ್ಟತೆಗೆ ಒತ್ತು ನೀಡಬೇಕಾಗಿದೆ. ಮಕ್ಕಳ ಶಿಕ್ಷಣ ಇಂದಿನ ಅಗ್ಯವಾಗಿದೆ. ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಿದೆ ಇದನ್ನು ಸದ್ಭಳಕೆ ಮಾಡಿಕೊಳ್ಳಲು ಗ್ರಾಮೀಣ ಜನರ ಆದ್ಯ ಕರ್ತವ್ಯವಾಗಿದೆ. ಇನ್ನೂ ಗ್ರಾಮದಲ್ಲಿನ ಅನೇಕ ಬೇಡಿಕೆಗಳನ್ನು ಶಾಸಕರು ಅನುದಾನ ನೀಡಿ ಒದಗಿಸಿದ್ದಾರೆ. ಬಾಕಿ ಎಲ್ಲ ಕಾಮಗಾರಿಗಳನ್ನು ಅವರ ಗಮನಕ್ಕೆ ತಂದು ಹಂತ ಹಂತವಾಗಿ ಕೈಗೊಳ್ಳಲು ಪ್ರಯತ್ನಿಸೋಣಾ ಇದಕ್ಕೆ ಎಲ್ಲರು ಕೈಜೋಡಿಸಬೇಕು ಎಂದರು.

Contact Your\'s Advertisement; 9902492681

ಮುಖಂಡ ಮಂಜುನಾಥ ಮೂಲಗೆ ಅವರು ಮಾತನಾಡಿ, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಹಿನ್ನೆಲೆಯಲ್ಲಿ ಕಾಮಗಾರಿಗೆ ವಿಳಂಬ ಆಗದಿರಲಿ ಎಂದು ಚಾಲನೆ ನೀಡಲಾಗಿದೆ. ಸಂಬಂಧಿತ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ನಿಗದಿತ ಸಮಯದಲ್ಲಿ ಕೈಗೊಂಡು ಶಾಲೆಗೆ ಹಸ್ತಾಂತರಿಸಬೇಕು. ಇನ್ನೂ ಹೆಚ್ಚಿನ ಕಾಮಗಾರಿಯನ್ನು ಶಾಸಕರ ಕೈಗೊಳ್ಳುವ ಕುರಿತು ಈ ಹಿಂದೆ ನೀಡಿದ ಭರವಸೆಯಂತೆ ನಡೆದುಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡ ರಾಜು ದೇಶಮುಖ, ಚಂದ್ರಕಾಂತ ಅಣೂರೆ, ಚನ್ನಪ್ಪ ನಾಗೂರೆ, ಬಾಬುರಾವ್ ಬಿರಾದಾರ, ಪರಮೇಶ್ವರ ಹತ್ತಿಕಾಳೆ, ಪಂಡಿತ ಸೋನಕಂಟ್ಲೆ, ರೇವಣಸಿದ್ಧಪ್ಪ ಜಮಗಿ, ಮುಖ್ಯ ಶಿಕ್ಷಕ ಕೃಷ್ಣಾ ಪಾಟೀಲ, ಶಿಕ್ಷಕ ನೂಲಕರ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶಂಕರ ಮಗಿ, ಪ್ರಮುಖ ಅಶೋಕ ಸಿಮಿಕೋರೆ, ಶ್ರೀಶೈಲ ಜಮಗೆ ಮತ್ತು ಎಸ್‌ಡಿಎಂಸಿ ಸದಸ್ಯ ಸೂರ್ಯಕಾಂತ ತಳವಾರ, ಹಣಮಂತ ಗಾಡೆಕರ್, ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here