ಕಲಬುರಗಿ: ನಗರದ ಖ್ವಾಜಾ ಬಂದೇ ನವಾಜ್ ದರ್ಗಾದ ಹತ್ತಿರ ಸುತ್ತಿಲಿನ ಪ್ರದೇಶದ ರಸ್ತೆ, ನೀರು ಹಾಗೂ ಒಳ ಚರಂಡಿ ಸೇರಿದಂತೆ ಮುಂತಾದ ಅಭಿವೃದ್ಧಿಗಳ ಕಾಮಗಾರಿಗೆ ಪೂರ್ಣಗೊಳಿಸಿಬೇಕೆಂದು ಆಗ್ರಹಿಸಿ ನಗರದ ಖ್ವಾಜಾ ಬಂದೇ ನವಾಜ್ ದರ್ಗಾದ ಜಲಾಲ್ ವಾಡಿ ಬಡಾವಣೆಯಲ್ಲಿ ಹತ್ತಿರ ಸರ್ಕಲ್ ಹತ್ತಿರ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ ಖ್ವಾಜಾ ಬಂದೇ ನವಾಜ್ ದರ್ಗಾದ ಪಿಠಾಧಿಪತಿಗಳ ಸಯದ್ ಖುಸ್ರು ಹುಸೈನ್ ಪ್ರತಿಭಟನೆಯ ನೇತೃತ್ವ ವಹಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ನಾಸಿರ್ ಉಸ್ತಾದ ಮಾತನಾಡಿ, 19 ರಂದು ದರ್ಗಾ ಜಾತ್ರೆ ಇದ್ದು, ಜಾತ್ರೆಗೆ ವಿವಿಧ ಜಿಲ್ಲೆ ರಾಜ್ಯ ಭಕ್ತರು ದರ್ಗಾದ ಜಾತ್ರೆ ಆಗಮಸಲಿದ್ದಾರೆ. ಆದರೆ ಮಹಾನಗರ ಪಾಲಿಕೆ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಕೆಗಳು ನಡೆಸಿಲ್ಲ. ಇದಕ್ಕಾಗಿ ದರ್ಗಾದ ಪಿಠಾಧಿಪತಿಗಳು ಮನವಿ ಮಾಡಿದರು ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೊರಿತಿದೆ ಎಂದು ಅವರು ಆರೋಪಿಸಿದರು.
ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಮ್ಮ ಬೇಡಿಕೆಗಳು ಈಡೇರಿಸದಿದರೆ ಮುಂದಿನ ಆಗುವ ಅನಾಹುತಗಳಿಗೆ ಪಾಲಿಕೆಯ ಆಯುಕ್ತರು ಹೊಣೆಗಾರರು ಎಂದು ನಾಸೀರ್ ಉಸ್ತಾದ್ ಎಚ್ಚರಿಕೆ ನೀಡಿದರು. ಜೆಡಿಎಸ್ ಮೈನಾರಿಟಿ ಸದಸ್ಯ ನಜೀರ್ ಅಹ್ಮದ್ ಮಾತನಾಡಿ ಪ್ರತಿ ವರ್ಷ ಜಾತ್ರೆ ಮಹತ್ಸೋವಕ್ಕು ಮುಂಚೆ ಬಡಾವಣೆ ಕಾಮಗಾರಿಗಳು ಪೂರ್ಣಗೊಳಿಸಲಾಗುತಿತ್ತು. ಆದರೆ ಈ ವರ್ಷ ಕಾಮಗಾರಿಗಳು ಪೂರ್ಣಗೊಳಿಸಿಲ್ಲ ಎಂದು ಮಹಾನಗರ ಪಾಲಿಕೆಯ ಆಯುಕ್ತರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿ ಮಜರ್ ಹುಸೈನ್, ಕುಡಾ ಮಾಜಿ ಅಧ್ಯಕ್ಷ ಅಜಗರ್ ಚುಲಬುಲ್, ನ್ಯಾಯವಾದಿ ಹಾಗೂ ಎಂಐಎಂ ಜಿಲ್ಲಾ ಮುಖಂಡ ವಾಹಾಜ್ ಬಾಬಾ ಸೇರಿದಂತೆ ಮುಂತಾದ ಮುಖಂಡರು ಹಾಗೂ ಸರ್ವಜನಿಕರು ಇದ್ದರು.