ರಾಜಸ್ಥಾನ: ರಾಜಸ್ಥಾನದಲ್ಲಿ ಗುಂಪು ಹಿಂಸಾಚಾರ ಘಟನೆಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಲ್ಲಿನ ಗುಂಪು ಹಿಂಸಾಚಾರ ದೇವವನ್ನೆ ಬೆಚ್ಚು ಬಿಳಿಸುವಂತಾಗಿದೆ. ಜೈಪುರದಲ್ಲಿ ನಗರದ ಪೊಲೀಸ್ ಹೆಡ್ ಕಾನ್ಸಟೇಬಲ್ ಒಬ್ಬರನ್ನು ಪುಂಡರ ಗುಂಪೊಂದು ದೊಣ್ಣೆಗಳಿಂದ ಥಳಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜ್ಸಾಮಂಡ್ ಜಿಲ್ಲೆಯಲ್ಲಿ ಸಂಭವಿಸಿದೆ.
ಅಬ್ದುಲ್ ಗನಿ(48) ಮೃತ ಹೆಡ್ ಕಾನ್ಸಟೇಬಲ್, ಕುನ್ವಾರಿಯಾ ನಿವಾಸಿಯಾಗಿದ್ದ ಇವರು, ಆಸ್ತಿ ವಿವಾದದ ಬಗ್ಗೆ ತನಿಖೆ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್‍ನಲ್ಲಿ ಬಂದ ಗೊಂಪು ಏಕಾಏಕಿ ದೊಣ್ಣೆಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
Rajsamand: Head Constable Gani Mohammad who was allegedly attacked when he went to investigate a land dispute in Bhim today, has died during treatment at the hospital. Investigation underway. #Rajasthan pic.twitter.com/uYTPjrHnYx
— ANI (@ANI) July 13, 2019
ಘಟನೆಯಲ್ಲಿ ಕಾನ್ಸಟೇಬಲ್ ಗೆ ಗಂಭೀರವಾಗಿ ಗಾಯಗಳಾಗಿದ್ದು, ತಕ್ಷಣ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಅಬ್ದುಲ್ ಗನಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ರಾಜಸ್ಥಾನ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಹೆಡ್ ಕಾನ್‍ಸ್ಟೇಬಲ್ ಹತ್ಯೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.