ಸುರಪುರ: ಭಾವಸಾರ ಕ್ಷತ್ರೀಯ ಸಮಾಜ ಮತ್ತು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ರಂಗಂಪೇಟೆಯ ಅಂಬಾಭವಾನಿ ದೇವಸ್ಥಾನದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಪಂಡೀತ ಜನಾರ್ಧನರಾವ್ ಪಾಣಿಭಾತೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,ಸಂಗೀತದ ಹುಟ್ಟು ಹಾಗು ರಾಗ,ತಾಳ,ಭಾವಗಳ ಕುರಿತು ವಿವರಣೆ ನೀಡಿ ಸಂಗೀತ ಒಂದು ಗಂಧರ್ವ ವಿದ್ಯೆ ಇದ್ದಂತೆ ಅದನ್ನು ಶ್ರದ್ಧೆಯಿಂದ ಕಲಿತಾಗ ಮಾತ್ರ ಸಿದ್ಧಿಸಲಿದೆ ಎಂದರು.
ಮುಖಂಡರಾದ ಅರುಣಕುಮಾರ ಪುಲ್ಸೆ,ಶಂಕರರಾವ್ ಮಹೇಂದ್ರಕರ್,ವೀಣಾ ಟಿ ಮಾಳದಕರ್,ಸಾವಿತ್ರಿಬಾಯಿ ಅಂಬುರೆ ವೇದಿಕೆ ಮೇಲಿದ್ದರು.ಭೂಮದೇವ್ ಮಹೇಂದ್ರಕರ್,ವಿಶ್ವನಾಥ ಅಂಬುರೆ,ಭೀಮರಾವ್ ಪತಂಗೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲಾವಿದರಾದ ಶಿವಶರಣಯ್ಯ ಬಳುಂಡಗಿಮಠ,ಮೋಹನ ಮಾಳದಕರ್,ಉಮೇಶ ಯಾದವ್,ಸುರೇಶ ಅಂಬುರೆ ಇವರುಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಚಂದ್ರಹಾಸ್ ಮಿಠ್ಠಾ,ಮಹಾಂತೇಶ ಶಹಾಪುರಕರ್,ಜಗದೀಶ ಮಾನು,ಪ್ರಾಣೇಶ ಕುಲಕರ್ಣಿ,ಶಿವಶಂಕರ ಅಲ್ಲೂರ್,ಚನ್ನಮಲ್ಲಿಕಾರ್ಜುನ ಗುಂಡಾನೂರ್,ರಮೇಶ ಕುಲಕರ್ಣಿ ಭಾಗವಹಿಸಿದ್ದರು.ಜಗದೀಶ ಪತ್ತಾರ ನಿರೂಪಿಸಿದರು,ಶ್ರೀನಿವಾಸ ದಾಯಫುಲ್ ವಂದಿಸಿದರು.