ರೈತರಿಗೆ ಶಕ್ತಿಯಾಗಿ ಕೆಲಸ ಮಾಡುತ್ತಿರುವ ಯುವ ಶಕ್ತಿ ಸಂಘಟನೆ: ಷ.ಬ್ರ. ಪೂಜ್ಯ ಶ್ರೀ ವೀರ ಮಹಾಂತ ಶಿವಾಚಾರ್ಯರು 

0
83

ಕಲಬುರಗಿ : ಈ ಭಾಗದ ರೈತರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲಕರ ಹೋರಾಟ ಮಾಡುತ್ತಾ ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ಯುವ ಶಕ್ತಿ ಸಂಘನಟೆ ಎಂದು ಚಿನ್ಮಯಗಿರಿ ಮಹಾಂತ ಮಠದ ಪೀಠಾಧಿಪತಿಯಾದ ಷ.ಬ್ರ. ಪೂಜ್ಯ ಶ್ರೀ ವೀರಮಹಾಂತ ಶಿವಾಚಾರ್ಯರು ನುಡಿದರು.

ಅಫಜಲಪುರ ತಾಲ್ಲೂಕಿನ ತಾಲ್ಲೂಕಿನ ಗೊಬ್ಬರ(ಬಿ) ಗ್ರಾಮದಲ್ಲಿ  ಕರ್ನಾಟಕ ಯುವ ಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆ ವತಿಯಿಂದ  ಹಮ್ಮಿಕೊಂಡ ” ರೈತ ಜಾಗೃತಿ ಸಮಾರಂಭದಲ್ಲಿ ” ಸಾನಿದ್ಯ ವಹಿಸಿ ಪ್ರತಿಭಾವಂತ ನೂರಾರು ವಿದ್ಯಾರ್ಥಿಗಳಿಗೆ ಹಾಗೂ ಸೇವಾ ಸಾಧಕರಿಗೆ ಹೆಮ್ಮೆಯ ಕನ್ನಡಿಗರೆಂಬ ಪ್ರಶಸ್ತಿ ಪುರಸ್ಕಾರ ಮಾಡಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಅನ್ಯಾಯದ ವಿರುದ್ಧ ಹೋರಾಟ ಮಾಡುವುದರ ಜೊತೆಗೆ  ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಕರಿಗೆ ಯಾವುದೇ ಆಪೇಕ್ಷ ಪಡದೆ ಅವರನ್ನು ಗುರುತಿಸಿ ಪ್ರಶಸ್ತಿ ಪತ್ರ ನೀಡಿ ಗಭರವಿಸುವ ಕಾರ್ಯ ಶ್ಲಾಘನೀಯವಾದದ್ದು ಎಂದು  ಶ್ರೀಗಳು ಅಭಿನಂದಿಸಿದರು.

Contact Your\'s Advertisement; 9902492681

ತೊನಸನಹಳ್ಳಿಯ ಪೀಠಾಧಿಪತಿ ಧರ್ಮ ರತ್ನ ಪರಮಪೂಜ್ಯ ಶ್ರೀ ಮಲ್ಲಣ್ಣಪ್ಪಾ ಮಹಾಸ್ವಾಮಿಗಳು  ಸಾನಿದ್ಯ ವಹಿಸಿ ಆಶಿರ್ವಚನ ಮಾಡಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಬೆಂಗಳೂರಿನ ಖ್ಯಾತ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಚಿನ್ನಸ್ವಾಮಿ ಕನಪೂರ ಮಾತನಾಡಿ, ಇಲ್ಲಿಯವರೆಗೂ ಹಲವಾರು ಸಮಸ್ಯೆಗಳ ಗಮನಿಸಿ ಕರ್ನಾಟಕ ಯುವ ಶಕ್ತಿ  ಅನ್ಯಾಯದ ವಿರುದ್ಧ ಹೋರಾಟ ಮಾಡಿ ಕಟ್ಟ ಕಡೆಯ ವ್ಯಕ್ತಿಗಳಿಗೆ ನ್ಯಾಯ ಕೊಡಿಸುವಂತ ಕೆಲಸ ಶ್ಲಾಘನೀಯವಾದದ್ದು ಮತ್ತು ರಾಜ್ಯ ಮಟ್ಟದಲ್ಲಿ ಸಂಘಟನೆಗೆ ನನ್ನ ಬೆಂಬವಿದೆ ಎಂದು ಹೇಳಿದರು.

ಕರ್ನಾಟಕ ಯುವ ಶಕ್ತಿ ರೈತರ ಮಕ್ಕಳ ಮಹಾಶಕ್ತಿ  ಸಂಸ್ಥಾಪಕರಾದ ಅವ್ವಣ್ಣಗೌಡ ಎನ್. ಪಾಟೀಲ ಸ್ವಾಗತಿಸಿ ಮಾತನಾಡಿದ ಅವರು,  ನಮ್ಮ ಸಂಘಟನೆ ಇಲ್ಲಿಯವರೆಗೂ ಈ ಭಾಗದ ರೈತರು, ವಿದ್ಯಾರ್ಥಿಗಳು ಹಾಗೂ  ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮಹನೀಯರ ಪರವಾಗಿ  ಹಗಲಿರುಳು ಸಾಮಾಜಿಕ ಕಳಕಳಿಯಿಂದ ಸೇವೆ ಮತ್ತು ಹೋರಾಟ ಮಾಡುತ್ತಾ ಬಂದಿದೆ.  ಮುಂದೆ ಬರುವ  ದಿನಗಳಲ್ಲಿಯೂ ಕೂಡಾ ಸಾರ್ವಜನಿಕರ ಪರವಾಗಿ ಸತ್ಯ, ನ್ಯಾಯದ ದೃಷ್ಟಿಕೋನದಲ್ಲಿ ಸಂಘಟನೆ ಮತ್ತು ಸಂಘಟನೆ ಮುಖಂಡರು ಕಾರ್ಯನಿರ್ವಹಿಸುವರೆಂದು ಪಾಟೀಲ ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಡ್ರಾಸಿನ್ ಪುನೀತರಾಜಕುಮಾರ್ ಕರಾಟೆ ಗುರುಗಳಾದ   ಬಿ. ಎಮ್‌. ನರಸಿಂಹನ್, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ನಿತೀನ್ ವ್ಹಿ. ಗುತ್ತೇದಾರ, ಜೆಡಿಎಸ್ ನಾಯಕರಾದ ಶಿವಕುಮಾರ್ ನಾಟೀಕಾರ, ದ್ರಾಕ್ಷಿ ಬೆಳೆಗಾರ ಸಂಘದ ಅಧ್ಯಕ್ಷ ಲಚ್ಚಪ್ಪ ಜಮಾದಾರ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲು ಬಿ. ದೇವತ್ಕಲ್,ಅಫಜಲಪುರ ಎಪಿಎಂಸಿ  ಮಾಜಿ ಅಧ್ಯಕ್ಷ ಕಲ್ಯಾಣರಾವ ಬಿರಾದರ, ಮಾಜಿ ತಾ.ಪಂ‌. ಸದಸ್ಯ ದೇವಿಂದ್ರ ಚೌಡಾಪೂರ, ಕಾಡಾ ನಿರ್ದೇಶಕರಾದ ಭಾಗೇಶ ಹೋತಿನಮಡಿ, ಭೂಸನೂರ ಸಕ್ಕರೆ ಕಾರ್ಖಾನೆ ಯುನಿಟ್ ಹೆಡ್ ಪಿ. ದೇವರಾಜಲು, ಗೊಬ್ಬುರ(ಬಿ) ಗ್ರಾ.ಪಂ.ಅದ್ಯಕ್ಷೆ  ಈರಮ್ಮ ಕೆ. ದೇವತ್ಕಲ್, ಹಸರಗುಂಡಗಿ ಗ್ರಾ.ಪಂ‌. ಅಧ್ಯಕ್ಷ ಬೈಲಪ್ಪ ಪಟ್ಟೇದಾರ, ರವಿಶಂಕರ್ ಕುಲಾಲಿ,  ಅಯ್ಯಪ್ಪ ಪೂಜಾರಿ, ಅರುಣ ಹರಳಯ್ಯ, ಶರಣು ನವಲೇಕರ್, ಕುಪೇಂದ್ರ ಪೂಜಾರಿ, ರಮೇಶ‌ ನಾಟೀಕಾರ, ಬಸಯ್ಯ ಗಣಾಚಾರಿ,  ಶಶಿಧರ ರೋಗಿ, ಶರಣು ಜಮಾದಾರ, ಗುರುನಾಥ  ಕೊರಬಾ, ದೇವಿಂದ್ರ ಜೈನಾಪೂರ, ಅಂಬರೀಶ ಜೋಗಿ,ಶಿವಾನಂದ ಕೂಟನೂರ,ದೇವಿಂದ್ರ ಜೋಗೂರ,ಮೈಬೂಬ ತಾಂಬೋಳಿ ಸೇರಿದಂತೆ ಹಲವಾರು ಹಿರಿಯರು, ತಾಯಂದಿರು ಹಾಗೂ ಯುವಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here