ಕಲಬುರಗಿ: ವೀರಮ್ಮ ಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲದ ವತಿಯಿಂದ ರಾಷ್ಟ್ರೀಯ ಪರಿಸರ ಮಾಲಿನ್ಯ ದಿವಸ ಆಚರಿಷಲಾಯಿತು.
ಪ್ಲಾಷ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಎಲ್ಲ ವಿದ್ಯಾರ್ಥಿನಿಯರು ಕೈಯಿಂದ ಕಾಗದದ ಕೈಚೀಲಗಳು ಮಾಡಿದ್ದರು ಅದರ ಮೇಲೆ ಮಾಲಿನ್ಯ ನಿಯಂತ್ರಣ ಕುರಿತು ಜಾಗೃತಿ ಘೋಷಣೆಗಳು ಬರೆದಿದ್ದರು.
ವಿ.ಜಿ ಮಹಾವಿದ್ಯಾಲಯದಿಂದ ಎಸ್ ವಿ ಪಿ ಚೌಕದವರೆಗೆ ಆ ಕೈಚಿಲಗಳು ಹಿಡಿದುಕೊಂಡು ಘೋಷಣೆ ಕೂಗುತ ಅಂಗಡಿಯವರಿಗೆ ಹಂಚುತ ಪರಿಸರ ಮಾಲಿನ್ಯ ನಿಯಂತ್ರಣ ಕುರಿತು ಅಂಗಡಿಯವರಲ್ಲಿ ಮತ್ತು ಗ್ರಾಹಕರಲ್ಲಿ ಜಾಗೃತಿ ಮೂಡಿಸಿದರು.
ಈ ಜಾತಕ್ಕೆ ಕಾಲೇಜಿನ ಪ್ರಾಂಶುಪಾಲರು ಚಾಲನೆ ನೀಡಿದರು,ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಕಲಾ ಪಾಟೀಲ್ ಮಾರ್ಗದರ್ಶನ ಮಾಡಿದರು.
ಉಪ ಪ್ರಾಂಶುಪಾಲರಾದ ಡಾ.ವೀಣಾ.ಹೆಚ್,ಡಾ.ವಿಜಯಕುಮಾರ ಪರುತೆ,ಡಾ.ನಾಗೇಂದ್ರ ಮಸೂತಿ, ಡಾ.ದೇವಿದಾಸ ಚೆಟ್ಟಿ,ಶ್ರೀವೀರೇಶ ಕುಮಾರ ಪಾಟೀಲ್,ಪ್ರೋ.ಸುಹಾಸಿನಿಯವರು ಉಪಸ್ಥಿತರಿದ್ದರು.