ದಿವ್ಯಾಂಗರಿಗೆ ವಿಶಿಷ್ಟ ಗುರುತಿನ ಚೀಟಿ ತ್ವರಿತವಾಗಿ ನೀಡಬೇಕು: ಬಸವರಾಜ ಹೆಳವರ

0
52

ಕಲಬುರಗಿ: ಅಂಗವಿಕಲರ ಹಕ್ಕು ಮತ್ತು ಸಮಾನತೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ಡಿ.03 1992ರಿಂದ ವಿಶ್ವ ಅಂಗವಿಕಲರ ದಿನ ಆಚರಿಸುತ್ತಿದೆ.

ವಿಶೇಷಚೆತನರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು, ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

Contact Your\'s Advertisement; 9902492681

ಅಂಗವೈಕಲ್ಯ ಭವಿಷ್ಯದ ಸಾದನೆಗೆ ಅಡ್ಡಿಯಾಗುವುದಿಲ್ಲ. ದಿವ್ಯಾಂಗರು ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮಾರ್ಥ್ಯವೇನು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಕೇಂದ್ರ ಸರಕಾರ ಯು.ಡಿ.ಐ.ಡಿ ಯೋಜನೆ ಜಾರಿಗೊಳಿಸಿದ್ದು, ರಾಜ್ಯದಲ್ಲಿ ಕೇವಲ 23 ಪ್ರತಿಶತ ದಿವ್ಯಾಂಗರಿಗೆ ವಿಶಿಷ್ಟ ಗುರುತಿನ ಚೀಟಿ ವಿತರಿಸಲಾಗಿದೆ. ಇದನ್ನು ಪಡೆಯಲು ಬಹಳಷ್ಟು ಅಲೆದಾಡಬೇಕಾಗುತ್ತದೆ.

ಗುರುತಿನ ಚೀಟಿ ಮತ್ತು ಸರಕಾರದ ಎಲ್ಲಾ ಸೌಲಭ್ಯಗಳು ತ್ವರಿತಗತಿಯಲ್ಲಿ ಎಲ್ಲಾ ದಿವ್ಯಾಂಗರಿಗೆ ಸಿಗುವಂತಾಗಬೇಕು. ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ಎಲ್ಲಾ ದಿವ್ಯಾಂಗರು ವಿಶಿಷ್ಟ ಗುರುತಿನ (ಯು.ಡಿ.ಐ.ಡಿ ಸ್ಮಾರ್ಟ್ ಕಾರ್ಡ) ಚೀಟಿಯನ್ನು ಕೂಡಲೇ ಪಡೆದುಕೊಳ್ಳಬೇಕು ಎಂದರು.

ದಿವ್ಯಾಂಗರ ಸಾಮಾರ್ಥ್ಯವು ಅಂಗವೈಕಲ್ಯಕ್ಕಿಂತ ಪ್ರಭಲವಾಗಿರುತ್ತದೆ. ದಿವ್ಯಾಂಗರಿಗೆ ಅವಕಾಶ ನೀಡಿದರೆ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬಲ್ಲರು. ಅಂಗವಿಕಲರು ಅಂಗವೈಕಲ್ಯ ಹೊಂದಿದ್ದರೂ ಬುದ್ಧಿಶಕ್ತಿಯಲ್ಲಿ ಮೇಧಾವಿಗಳಾಗಿರುತ್ತಾರೆ ಎಂದು‌‌ ಡಿಸೆಬಲ್ಡ ಹೆಲ್ಪಲೈನ್ ಪೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here