ಸುರಪುರ: ನಗರದ ವಕೀಲರ ಸಂಘದ ಕಚೇರಿಯಲ್ಲಿ ವಕೀಲರ ದಿನವನ್ನು ಆಚರಿಸಲಾಯಿತು.ವಕೀಲರ ದಿನದ ಅಂಗವಾಗಿ ಎಲ್ಲಾ ವಕೀಲರು ಕೇಕ್ ಕತ್ತರಿಸಿ ಪರಸ್ಪರ ಸಿಹಿ ಹಂಚಿ ಸಂತೋಷ ಹಂಚಿಕೊಂಡು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ನಿಂಗಣ್ಣ ಚಿಂಚೋಡಿ ಮಾತನಾಡಿ,ವಕೀಲರು ಈ ದೇಶದ ಸ್ವತಂತ್ರ್ಯದಲ್ಲಿ ಐತಿಹಾಸಿಕವಾದ ಬೆಳಕನ್ನು ಚೆಲ್ಲಿದ್ದಾರೆ.ಸ್ವತಂತ್ರ್ಯ ದೊರೆಯುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿತ್ತು ಎಂದರು.
ಮತ್ತೋರ್ವ ಹಿರಿಯ ವಕೀಲ ದೇವಿಂದ್ರಪ್ಪ ಬೇವಿನಕಟ್ಟಿ ಮಾತನಾಡಿ,ಈ ದೇಶದ ಪ್ರಫ್ರಥಮ ರಾಷ್ಟ್ರಪತಿಗಳಾಗಿದ್ದ ರಾಜೇಂದ್ರಪ್ರಸಾದವರ ಸವಿನೆನಪಿಗಾಗಿ ವಕೀಲರ ದಿನವನ್ನು ಆಚರಿಸಲಾಗುತ್ತಿದೆ.ಈ ದೇಶ ಅಭಿವೃಧ್ಧಿ ಪಥದಲ್ಲಿ ಸಾಗಬೇಕಾದರೆ ವಕೀಲರ ಪಾತ್ರ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ ಮಾತನಾಡಿದರು,ಹಿರಿಯ ವಕೀಲರಾದ ಬಸವಲಿಂಗಪ್ಪ ಪಾಟೀಲ್,ಜಿ.ಎಸ್.ಪಾಟೀಲ್,ಉದಯಸಿಂಗ್,ಮಹ್ಮದ್ ಹುಸೇನ್,ರಮಾನಂದ ಕವಲಿ,ಜಿ.ಆರ್.ಬನ್ನಾಳ,ವಕೀಲರ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಅಶೋಕ ಕವಲಿ,ಶ್ರೀದೇವಿ ಪಾಟೀಲ್,ಖಜಾಂಚಿ ಭೀಮಣ್ಣ ಹೊಸ್ಮನಿ,ಸಿದ್ರಾಮಪ್ಪ,ಸುರೇಂದ್ರ ದೊಡ್ಮನಿ,ಪ್ರಕಾಶ ಕವಲಿ,ಆದಪ್ಪ ಹೊಸ್ಮನಿ,ಸುಭಾಸ ಬಿರಾದಾರ್ ಇತರರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ತಳವಾರ ನಿರೂಪಿಸಿದರು,ಸಂತೋಷ ಗಾರಂಪಳ್ಳಿ ವಂದಿಸಿದರು.