ಕೊಳಸಾ ಫೈಲ್‌ನಲ್ಲಿ ಸತ್ತರೇ ಸಾವಿನ ಶೋಕಕ್ಕಿಂತ ಸ್ಮಶಾನಕ್ಕೆ ಶವ ಸಾಗಿಸುವ ನೋವೇ ಹೆಚ್ಚು

0
64

ಶಹಾಬಾದ: ಇಲ್ಲಿನ ಸ್ಮಶಾನಕ್ಕೆ ಅನೇಕ ವರ್ಷಗಳಿಂದ ದಾರಿಯೇ ಇಲ್ಲ. ಹೀಗಾಗಿ ಈ ಬಡಾವಣೆಯಲ್ಲಿ ಯಾರಾದರೂ ಸತ್ತರೇ ಸಾವಿನ ನೋವಿಗಿಂತ ಸ್ಮಶಾನಕ್ಕೆ ಶವ ಸಾಗಿಸುವ ನೋವೇ ಹೆಚ್ಚು.ಇದು ನಗರಸಭೆಯ ವ್ಯಾಪ್ತಿಯ ಕೊಳಸಾ ಫೈಲ್ ಬಡಾವಣೆಯ ಸಂಬಂಧಿಸಿದ ದಲಿತರ ಸ್ಮಶಾನದ ಕಥೆ.

ಇಲ್ಲಿನ ಬಡಾವಣೆಯಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ಹಾಗೂ ಬಡವರೇ ಹೆಚ್ಚಾಗಿ ಇದ್ದಾರೆ. ದಾರಿಯಿಲ್ಲ ಸ್ಮಶಾನಕ್ಕೆ ದಾರಿ ಮಾಡಿ ಮಾಡಿಕೊಡಿ ಎಂದು ಈ ಬಗ್ಗೆ ಅನೇಕ ಬಾರಿ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ.ಸ್ಮಶಾನಕ್ಕೆ ದಾರಿಯಿಲ್ಲದೇ ಅನೇಕ ವರ್ಷಗಳಿಂದ ಇಲ್ಲಿನ ಜನರು ತೊಂದರೆಪಡುತ್ತಿದ್ದಾರೆ.ಸ್ಮಶಾನಕ್ಕೆ ಹೋಗಬೇಕಾದರೆ ಸರ್ಕಸ್ ಮಾಡುತ್ತಾ ಶವನ್ನು ಎತ್ತಿಕೊಂಡು ಹೋಗಬೇಕಾಗಿದೆ.

Contact Your\'s Advertisement; 9902492681

ಈ ರುದ್ರಭೂಮಿಯಲ್ಲಿ ಕೊಳವೆ ಬಾವಿಯಿಲ್ಲ. ಕೋಣೆಗಳಿಲ್ಲ. ಅರ್ಧ ಕಂಪೌಂಡ ಕಟ್ಟಿ ಇನ್ನು ಅರ್ಧ ಹಾಗೇ ಬಿಡಲಾಗಿದೆ.ಅಲ್ಲದೇ ಮಳೆಗಾಲದಲ್ಲಿ ಇಲ್ಲಿ ಯಾರಾದರೂ ಸತ್ತರೇ ಸ್ಮಶಾನಕ್ಕೆ ಹೋಗಲು ಭಯ ಬರುತ್ತದೆ.ಮೊಣಕಾಲುದ್ಧ ನೀರು, ಕಾಲು ಜಾರುವ ಭಯದಲ್ಲಿ ಹೆಣ ಹೊತ್ತು ಸಾಗುವಂಥ ಪರಿಸ್ಥಿತಿ ಇಲ್ಲಿದೆ. ಶವ ಹೂಳಲು ಮೊದಲು ತೆಗ್ಗು ತೋಡಲು ಹಾಗೂ ಮುಳ್ಳು ಕಂಟಿಗಳು ತೆಗೆಯಲು ಹೆಚ್ಚಿನ ಹಣ ಪಾವತಿಸಬೇಕಾದ ಪ್ರಸಂಗ ಇಲ್ಲಿನ ಬಡ ಕುಟುಂಬಗಳಿಗೆ ಬಂದಿದೆ.ಗ್ರಾಮಕ್ಕೊಂದು ಸ್ಮಶಾನ ಎಂದು ಹೇಳುವ ಬದಲು ಇದ್ದ ಸ್ಮಶಾನಕ್ಕೆ ದಾರಿ ಒದಗಿಸಿ, ಮೂಲ ಸೌಲಭ್ಯ ಒದಗಿಸಿದರೇ ಸಾಕಾಗಿದೆ ಎಂದು ಬಡಾವಣೆಯ ಜನರು ಅಳಲು ತೋಡಿಕೊಳ್ಳುತ್ತಾರೆ.ಸ್ಮಶಾನದಲ್ಲಿನ ಮುಳ್ಳು ಕಂಟಿಗಳನ್ನು ತೆರವುಗೊಳಿಸಿ, ಮೂಲಸೌಲಭ್ಯ ಒದಗಿಸಿ ಕೊಡಬೇಕು.ಅಲ್ಲದೇ ಸ್ಮಶಾನಕ್ಕೆ ದಾರಿ ಮಾಡಿಕೊಡುವ ಮೂಲಕ ದಲಿತರಿಗೆ ಕೂಗಿಗೆ ನಗರಸಭೆಯ ಅಧಿಕಾರಿಗಳು ಧ್ವನಿಯಾಗುವರೇ ಎಂದು ಕಾದು ನೋಡಬೇಕಿದೆ.

ಕೊಳಸಾ ಫೈಲ್ ದಲಿತರ ರುದ್ರಭೂಮಿಗೆ ಹೋಗಲು ದಾರಿಯಿಲ್ಲದೇ ಸಂಕಷ್ಟ ಪಡುವಂತಾಗಿದೆ.ಸತ್ತ ಮೇಲೂ ಶವದ ಅಂತ್ಯ ಸಂಸ್ಕಾರಕ್ಕೂ ತೊಡಕು ಉಂಟಾಗುತ್ತಿದೆ.ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ.ಕೂಡಲೇ ರುದ್ರಭೂಮಿಯನ್ನು ಸ್ವಚ್ಛಗೊಳಿಸಿ, ದಾರಿ ಮಾಡಕೊಡಬೇಕು – ಮನೋಹರ್ ಮೇತ್ರೆ ಕೊಳಸಾ ಫೈಲ್ ಬಡಾವಣೆಯ ನಿವಾಸಿ.

ಈಗಾಗಲೇ ನಗರದ ಕೆಲವೊಂದು ರುದ್ರಭೂಮಿಗಳನ್ನು ಅಭಿವೃದ್ಧಿ ಪಡಿಸಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಉಳಿದ ಇನ್ನೂ ಕೆಲವು ರುದ್ರಭೂಮಿಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು- ಡಾ.ಕೆ.ಗುರಲಿಂಗಪ್ಪ ಪೌರಾಯುಕ್ತರು ನಗರಸಭೆ ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here