ಶಹಾಬಾದ:ದಿ. ವಿಠ್ಠಲ್ ಹೇರೂರ ಅವರು ಕೋಲಿ ಸಮಾಜ ಸೇರಿದಂತೆ ಶೋಷಿತ ಸಮುದಾಯಗಳ ಏಳ್ಗೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಕೋಲಿ ಸಮಾಜದ ಮುಖಂಡ ನಿಂಗಣ್ಣ ಹುಳಗೋಳಕರ್ ಹೇಳಿದರು.
ಅವರು ಶುಕ್ರವಾರ ಕೋಲಿ ಸಮಾಜದ ವತಿಯಿಂದ ಅಶೋಕ ನಗರದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಆಯೋಜಿಸಲಾದ ದಿ. ವಿಠ್ಠಲ ಹೇರೂರ ಅವರ ಪುಣ್ಯಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದುಳಿದ ಕೋಲಿ ಸಮಾಜದ ಜನರಲ್ಲಿ ಜಾಗೃತಿ ಹಾಗೂ ಶಿಕ್ಷಣ ಅರಿವು ಮೂಡಿಸುವ ಮೂಲಕ ಹೋರಾಟ ಮಾಡಿದ ಧೀಮಂತ ನಾಯಕ ದಿ.ವಿಠ್ಠಲ ಹೇರೂರರ ತತ್ತ್ವಾದರ್ಶಗಳು ಸಮಾಜಕ್ಕೆ ನೀಡಿರುವ ಕೊಡುಗೆಯಾಗಿದೆ. ವೈಚಾರಿಕತೆ ಬೆಳೆಸಲು, ಜನರಲ್ಲಿ ಜಾಗೃತಿ ಮೂಡಿಸಲು ತಮ್ಮ ಬದುಕನ್ನೆ ಮುಡುಪಾಗಿಟ್ಟು ಸಮಾಜದ ಏಳಿಗೆಗಾಗಿ ಹೋರಾಟ ನಡೆಸಿದ ಮುತ್ಸದ್ಧಿ ವಿಠ್ಠಲ್ ಹೇರೂರು ಎಂದು ಹೇಳಿದರು.
ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ್ ತಳವಾರ ಮಾತನಾಡಿ, ಕೋಲಿ ಸಮಾಜದ ದಿಮಂತ ನಾಯಕರಾಗಿದ್ದ ದಿ. ವಿಠ್ಠಲ ಹೇರೂರರವರು ಕೋಲಿ ಸಮಾಜದ ಜನತೆಯನ್ನು ಒಂದುಗೂಡಿಸಲು ಅವರು ಮಾಡಿರುವ ಪ್ರಯತ್ನ ಹಾಗೂ ಸಮಾಜದ ಜನರನ್ನು ಜಾಗೃತಿಗೊಳಿಸಿದ ಏಕೈಕ ನಾಯಕ ಎಂದು ಹೇಳಿದರು.
ನಿಂಗಣ್ಣ ಹುಳಗೊಳಕರ್, ತಿಪ್ಪಣ್ಣ ನಾಟಿಕಾರ,ಶಿವಕುಮಾರ ನಾಟಿಕಾರ್,ಸಂತೋ? ತಿಳಗುಳ,ವಿಜಯಕುಮಾರ್ ಮುತ್ತಗಿ,ಮಲ್ಲಿಕಾರ್ಜುನ ಇಟಗಿ,ವಿಶ್ವನಾಥ ಕಾನಾಪೂರ,ಚಂದ್ರಕಾಂತ ನಾಟಿಕಾರ್,ಮೌನೇಶ್ ಕೊಡ್ಲಿ,ಕಾಶಣ್ಣ ಚನ್ನೂರ್,ದೇವಿಂದ್ರಪ್ಪ ಯಲಗೋಡಕರ್,ಲಕ್ಷ್ಮಣ, ಲಕ್ಷ್ಮಿಕಾಂತ ಮಸಬೋ, ಮಹೇಶ್ ಎಲೇರಿ,ಪ್ರಶಾಂತ ಹದನೂರ್,ಮಹಾದೇವ,ಬಾಬು, ಭೀಮಯ್ಯ ಗುತ್ತೆದಾರ ಇತರರು ಇದ್ದರು.