ನ್ಯಾಯಾಂಗ ವ್ಯವಸ್ಥೆಯ ಸಫಲತೆಗೆ ನ್ಯಾಯವಾದಿಗಳ ಕೊಡುಗೆ ಅನನ್ಯ

0
59

ಕಲಬುರಗಿ: ವ್ಯಕ್ತಿಯು ತಪ್ಪು ಮಾಡಿದರೆ ನ್ಯಾಯಾಂಗದ ಅಡಿಯಲ್ಲಿ ಶಿಕ್ಷೆ, ಆತನಿಗೆ ಅನ್ಯಾಯವಾಗಿದ್ದರೆ ನ್ಯಾಯವನ್ನು ಒದಗಿಸಿಕೊಡುವಲ್ಲಿ ನ್ಯಾಯವಾದಿಗಳು ಅನನ್ಯವಾದ ಕೊಡುಗೆಯನ್ನು ನೀಡಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಮತ್ತು ಅದರ ಸಫಲತೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ’ಎಂ.ಎಂ.ಎನ್ ಟ್ಯುಟೋರಿಯಲ್ಸ್’ನಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ’ರಾಷ್ಟ್ರೀಯ ನ್ಯಾಯವಾದಿಗಳ ದಿನಾಚರಣೆ’ಯ ಕಾರ್ಯಕ್ರಮವನ್ನು ಡಾ.ಬಾಬು ರಾಜೇಂದ್ರ ಪ್ರಸಾದ್‌ರ ಭಾವಚಿತ್ರಕ್ಕೆ ಪುಷ್ಪ ನಮಗಳನ್ನು ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ನ್ಯಾಯವಾದಿಗಳು ಅಪಾರವಾದ ಜ್ಞಾನ ಹೊಂದಿರಬೇಕಾಗಿರುವದರಿಂದ ನಿರಂತರವಾಗಿ ಅಧ್ಯಯನಶೀಲರಾಗಿರುತ್ತಾರೆ ಎಂದರು.

Contact Your\'s Advertisement; 9902492681

ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಸಮಾಜದಲ್ಲಿರುವ ಅಶಕ್ತ ವರ್ಗದವರಿಗೆ ಉಚಿತ ಕಾನೂನು ದೊರೆಯಬೇಕೆಂಬ ಉದ್ದೇಶದಿಂದ ಲಭ್ಯವಿರುವ ಕಾಯ್ದೆ-ಕಾನೂನಗಳ ಬಗ್ಗೆ ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ಜಾಗೃತಿಯನ್ನು ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ. ಡಾ.ಬಾಬು ರಾಜೇಂದ್ರ ಪ್ರಸಾದ್‌ರ ಜನ್ಮದಿನಾಚರಣೆಯನ್ನು ’ರಾಷ್ಟ್ರೀಯ ನ್ಯಾಯವಾದಿಗಳ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ. ಅವರು ಶ್ರೇಷ್ಠ ನ್ಯಾಯವಾದಿಗಳಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಮತ್ತು ದೇಶದ ರಾಷ್ಟ್ರಪತಿಯಾಗಿ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸೂರ್ಯಕಾಂತ ಸಾವಳಗಿ, ಬಸವರಾಜ ಹೆಳವರ ಯಾಳಗಿ, ಶರಣಬಸಪ್ಪ ನರೋಣಿ, ಪ್ರಭುಲಿಂಗ ಮೂಲಗೆ, ಸಂಗಣ್ಣ ಮುಗಳಿ, ಮಲ್ಲಿನಾಥ ಹೂಗಾರ, ಎಸ್.ಎಸ್.ಪಾಟೀಲ ಬಡದಾಳ, ಪ್ರಕಾಶ ಸರಸಂಬಿ, ಶಿವಶರಣಪ್ಪ ಹಡಪದ, ರವಿ ಬಿರಾಜಾದಾರ, ಶಾಂತಪ್ಪ ಪಾಟೀಲ, ಓಂಕಾರ ಗೌಳಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here