ಗೆಲ್ಲಲಿರುವ ಕಾಂಗ್ರೆಸ್ ನ ಸಲೀಂ ಅಹಮ್ಮದ್

0
22

ಧಾರವಾಡ ವಿಧಾನ ಪರಿಷತ್ ಕ್ಷೇತ್ರಕ್ಕೆ ಸ್ಥಳೀಯ ಸಂಸ್ಥೆಗಳಿಂದ ಎರಡನೆಯ ಬಾರಿಗೆ ಆಯ್ಕೆ ಬಯಸಿ ನಿಂತಿರುವ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಪ್ರದೀಪ್ ಶೆಟ್ಟರ್ ಅವರು ಒಂದನೆಯ ಬಾರಿಗೆ ಆಯ್ಕೆ ಆಗಿ ಹೋದ ನಂತರ ಇದೇ ಪ್ರದೀಪ ಶೆಟ್ಟರ್ ಅವರು ಜನರಿಗೆ ಮುಖ ತೋರಿಸಿದ್ದು ಈ ಎರಡನೇ ಬಾರಿಯ ಚುನಾವಣೆ ಬಂದ ನಂತರವೇ.

ಈಗ ಎರಡನೇ ಬಾರಿಯೂ ಆಯ್ಕೆ ಬಯಸಿರುವ ಪ್ರದೀಪ್ ಶೆಟ್ಟರ್ ರವರೆಗೆ ಜನರು ಅದು ಹೇಗೆ ಮತ ಹಾಕಬೇಕು ಎಂದು ಸ್ಥಳೀಯ ಸಂಸ್ಥೆಗಳ ಮತದಾರರು ಕೇಳುತ್ತಿದ್ದಾರೆ. ಏಕೆಂದರೆ ಈ ಪ್ರದೀಪ್ ಶೆಟ್ಟರ್ ವಿಧಾನ ಪರಿಷತ್ ಗೆ ಆಯ್ಕೆ ಆಗಿ ಈ ಕ್ಷೇತ್ರಕ್ಕೆ ಮಾಡಿದ ಕೆಲಸವೂ ಅಷ್ಟರಲ್ಲೇ ಇದೆ. ಹಾಗೆ ಆಯ್ಕೆ ಆಗಿ ಹೋದ ಪ್ರದೀಪ್ ಶೆಟ್ಟರ್ ಜನರನ್ನು ಮರೆತರು. ಅಲ್ಲದೇ ಬರೀ ತಮ್ಮ ಖಾಸಗಿ ಖಜಾನೆ ತುಂಬಿಸಿಕೊಳ್ಳಲೇ ವಿಧಾನ ಪರಿಷತ್ ಸದಸ್ಯರಾದರು. ಅದು ಬಿಟ್ಟು ಈ ಪ್ರದೀಪ್ ಶೆಟ್ಟರ್ ಮಾಡಿದ ಕೆಲಸವೇನೂ ಇಲ್ಲ.

Contact Your\'s Advertisement; 9902492681

ಇದು ಅಲ್ಲದೇ ತಮ್ಮ ಅಣ್ಣ ಜಗದೀಶ್ ಶೆಟ್ಟರ್ ರವರ ಹೆಸರು ಬಳಸಿ ಪೆಟ್ರೋಲ್ ಬಂಕ್ ಹಗರಣ ಮತ್ತು ಲೇವೌಟ್ ನಿಮಾರ್ಣದಲ್ಲಿ‌ ಕಾಲ ಕಳೆದರು ಮತ್ತು ಇನ್ನಿತರೆ ತಮ್ಮ ಅಣ್ಣನ ಆಮದಾನಿಯ ಏಜೆಂಟ್ ಆಗಿ ಕೆಲಸ ಮಾಡಿದರು.

ಅಷ್ಟೇ ಅಲ್ಲ ತಮ್ಮ ಅಣ್ಣ ಜಗದೀಶ್ ಶೆಟ್ಟರ್ ರಾದರೂ ಬರೀ ಒಬ್ಬ ರಬ್ಬರ್ ಸ್ಟ್ಯಾಂಪ್ ವಕೀಲರಾಗಿದ್ದವರು. ಈಗ ನೂರಾರು ಕೋಟ್ಯಾಂತರ ರೂಪಾಯಿ ಖಳವಾಗಿದ್ದು ಬರೀ ನ್ಯಾಯಯುತ ಕೆಲಸಗಳಿಂದಲ್ಲ, ಈ ಜಗದೀಶ್ ಶೆಟ್ಟರ್ ವಿರೋಧ ಪಕ್ಷದ ಮುಂಡರಾಗಿದ್ದಾಗ ಒಳೊಗಳೆಗೇ ವಿರೋಧ ಪಕ್ಷದ ಅಮಧಾನಿ ಪಡೆಯುತ್ತ ಬಂದು ಈಗ ಬರೋಬ್ಬರಿ ನೂರಾರು ಕೋಟಿ ರೂಪಾಯಿಗಳ ಒಡೆಯರಾದವರು ಜಗದೀಶ್ ಶೆಟ್ಟರ್. ಮೊದಲು ಬರೀ ರಬ್ಬರ್ ಸ್ಟ್ಯಾಂಪ್ ವಕೀಲರಾಗಿದ್ದವರು ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದು ತಮ್ಮ ಅರ್ಹತೆಯಿಂದಲ್ಲ. ಹೀಗೆಯೇ ತಮ್ಮ ಅಣ್ಣ ಜಗದೀಶ್ ಶೆಟ್ಟರ್ ಮಾಡುವ ಭ್ರಷ್ಟಾಚಾರದ ಕಾವಲುಗಾರ ಮತ್ತು ಭ್ರಷ್ಟಾಚಾರ ನಡೆಸುವ ಗಿರಾಕಿಯಾಗಿ ಇದೇ ಪ್ರದೀಪ್ ಶೆಟ್ಟರ್ ಇದ್ದರು.

ಇಷ್ಟೇಯಲ್ಲ ಈ ಜಗದೀಶ್ ಶೆಟ್ಟರ್ ಕೇವಲ ಈದ್ಗಾ ಮೈದಾನದಿಂದ ಅದೂ ಆಗ ಹುಚ್ಚು ಪಲ್ಲ್ಯಾ ಎಂದು ಕರೆಸಿಕೊಳ್ಳುವ ಪ್ರಹ್ಲಾದ ಜೋಶಿ ಈಗಿನ ಬಿಜೆಪಿಯ ಸಂಸದ ಪ್ರಹ್ಲಾದ ಜೋಶಿಯು ಹಚ್ಚಿದ ಈದ್ಗಾ ಬೆಂಕಿಯಿಂದ ಎದ್ದು ಬಂದ ಇದೇ ಜಗದೀಶ್ ಶೆಟ್ಟರ್ ಅವರು ಕೇವಲ ರಬ್ಬರ್ ಸ್ಟ್ಯಾಂಪ್ ಗಿರಾಕಿಯಾಗಿದ್ದರು ಮುಂದೆ ಈ ರಾಜ್ಯದ ಮುಖ್ಯಮಂತ್ರಿಯೂ ಆದದ್ದು ಬರೀ ಕೋಮುವೈಸಮ್ಯದ ಕಾರಣದ ಕಾರಣಕ್ಕೆ. ಅಲ್ಲದೇ ಬರೋಬ್ಬರಿ ನೂರಾರು ಕೋಟಿ ರೂಪಾಯಿಗಳ ಒಡೆಯನಾದದ್ದು ಕೇವಲ ಬೆಂಕಿ ಹಚ್ಚುವ ಕೆಲಸದಿಂದ. ಹೀಗಿರುವ ಜಗದೀಶ್ ಶೆಟ್ಟರ್ ತಮ್ಮನಾಗಿ ಇದೇ ಪ್ರದೀಪ್ ಶೆಟ್ಟರ್ ಬರೀ ವಸೂಲಿ ಗಿರಾಕಿಯಾಗಿದ್ದವನು ಮುಂದೆ ವಿಧಾನ ಪರಿಷತ್ ಸದಸ್ಯನಾದನು. ಈಗ ಮತ್ತೆ ಎರಡನೇ ಬಾರಿಗೆ ಆಯ್ಕೆ ಬಯಸಿ ಧಾರವಾಡ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಯಾಗಿದ್ದಾನೆ. ಇಂತಹ ಪರಮ ಭ್ರಷ್ಟ ಮನೆತನದ ಪ್ರದೀಪ್ ಶೆಟ್ಟರ್ ರನ್ನು ಅಲ್ಲದೇ ಸ್ವತಃ ಪರಮಭಷ್ಟನಾಗಿರುವ ಪ್ರದೀಪ್ ಶೆಟ್ಟರ್ ರನ್ನು ಮತ್ತೆ ಧಾರವಾಡ ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ಜನರಿಗೇನೂ ಉಪಯೋಗವಿಲ್ಲ.

ಅದಕ್ಕಾಗಿ ಈ ಬಾರಿ ಈ ಧಾರವಾಡ ವಿಧಾನ ಪರಿಷತ್ ಚುನಾವಣೆಯಲ್ಲಿ ಸಲೀಂ ಅಹಮ್ಮದ್ ರ ಬಗೆಗೆ ಜನರು ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿಯೇ ಈ ಬಾರಿ ಸಲೀಂ ಅಹಮ್ಮದ್ ಗೆಲುವು ಖಚಿತವೆಂದು ಹೇಳುತ್ತಿದ್ದಾರೆ..!

ಇದಿಷ್ಟೇ ಅಲ್ಲ, ಕಳೆದ ಎರಡು ವರ್ಷಗಳಿಂದ ಸರ್ಕಾರ ವಿಫಲವಾಗಿರುವುದೂ ಕಾರಣವಾಗಿದೆ. ಇದೊಂದು ನಿರ್ಜೀವ ಸರ್ಕಾರವಾಗಿದೆ. ಯಾವ ಪುರುಷಾರ್ಥಕ್ಕೆ ಜನರು ಮತ ನೀಡಬೇಕು ಬಿಜೆಪಿಯ ಪಕ್ಷದ ಭ್ರಷ್ಟಾಚಾರದ ಕೂಪವಾಗಿರುವ ಪ್ರದೀಪ್ ಶೆಟ್ಟರ್ ಗೆ ಎಂದು ಜನರು ಮಾತಾನಾಡಿಕೊಳ್ಳುತ್ತಿದ್ದರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಕ್ಕೆ ಮತ ನೀಡಬೇಕಾ? ಎಂದು ಜನರು ಕೇಳಿಕೊಳ್ಳುತ್ತಿದ್ದಾರೆ. ಈಗಲಾದರೂ ಸ್ಥಳೀಯ ಸಂಸ್ಥೆಗಳ ಜನಕ್ಕೆ ಬುದ್ದಿ ಬಂದಿದೆ.

“ಅಡುಗೆ ಅನಿಲ ಬೆಲೆ 400 ರಿಂದ 900 ರೂ.ಗೆ ಏರಿಕೆ ಮಾಡಿದ್ದಕ್ಕೆ ಮತ ನೀಡಬೇಕಾ?, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಕ್ಕೆ ಮತ ನೀಡಬೇಕಾ?, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಣ ಹಾಕುತ್ತೇವೆ ಎಂಬ ಸುಳ್ಳು ಭರವಸೆ ನೀಡಿದ ಪ್ರಧಾನಿಗೆ ಮತ ನೀಡಬೇಕಾ?, ಯುವಕರಿಗೆ ಉದ್ಯೋಗ ಕೊಡ್ತೀವಿ ಅಂದು, ಪಕೋಡ ಮಾರಿ ಎಂದಿದ್ದಕ್ಕೆ ಮತ ನೀಡಬೇಕಾ?, ಯಾವುದಕ್ಕೆ ಮತ ನೀಡಬೇಕು ಎಂದು ಕಾಂಗ್ರೆಸ್ ಪಕ್ಷವಷ್ಟೇಯಲ್ಲ ಜನರೇ ಕೇಳುತ್ತಿದ್ದಾರೆ.”

“ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದಿಂದ ಜನರು ಭ್ರಮನಿರಸನವಾಗಿದ್ದಾರೆ. ‌ಕೊರೊನಾ ಸಂದರ್ಭದಲ್ಲಿ ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಇತರೆ ವಸ್ತುಗಳ ಖರೀದಿಯಲ್ಲಿ 2 ಸಾವಿರ ಕೋಟಿ ಹಗರಣ ಮಾಡಿದ್ದಾರೆಂದು ಕಾಂಗ್ರೆಸ್ ಆರೋಪ ಮಾಡಿತ್ತು. ಖರೀದಿ ಬಗೆಗೆ ಲೆಕ್ಕ ಕೊಡಿ ಅಂತ ಕಾಂಗ್ರೆಸ್ ಪಕ್ಷ ಕೇಳಿತ್ತು. ಆದರೆ ಇದುವರೆಗೂ ಸರ್ಕಾರ ಲೆಕ್ಕ ಕೊಟ್ಟಿಲ್ಲ, ಇದಕ್ಕೆ ಜನರು ಮತ ನೀಡಬೇಕಾ?,” ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರು..!?

# ಲಕ್ಷಾಂತರ ಮಂದಿ ಬದುಕು ಕಳೆದುಕೊಂಡಿದ್ದಾರೆ–

“ಕೊರೊನಾ ಸಂದರ್ಭದಲ್ಲಿ ಸಾವಿರಾರು ಜನ ಸಾವನ್ನಪ್ಪುವುದರ ಜೊತೆಗೆ ಲಕ್ಷಾಂತರ ಮಂದಿ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನೂ ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿದ್ದಾರೆ. ಸರ್ಕಾರದ ಈ ವೈಫಲ್ಯತೆಗಳಿಂದ ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಜನರು ಯಾಕೆ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂಬ ಯಕ್ಷ ಪ್ರಶ್ನೆಯಾಗಿದೆ. ಅದಕ್ಕಾಗಿ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದು, ಈ ಎರಡು ಕ್ಷೇತ್ರಗಳಲ್ಲಿ ನಾವು ಜಯ ಗಳಿಸಲಿದ್ದೇವೆ ಎಂದು ಸಲೀಂ ಅಹಮ್ಮದ್ ಹೇಳುತ್ತಿರುವದರಲ್ಲಿ ಅರ್ಥವಿದೆ. ಎರಡು ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ನಿಮ್ಮ ಪರಿಚಯ ಹಾಗೂ ಸಂಬಂಧಿಕರಿಗೆ ಮತ ನೀಡುವಂತೆ ಹೇಳಿ,” ಎಂದು ಹಿರಿಯೂರು ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳುವಳಿಕೆ ಆಗಿದೆ.

# ಪ್ರಧಾನಿ ಜನರಿಗೆ ನರಕ ತೋರಿಸಿದ್ದಾರೆ–

ಇನ್ನು ಉತ್ತರ ಪ್ರದೇಶದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಲೀಂ ಅಹಮ್ಮದ್, “ಉತ್ತರ ಪ್ರದೇಶದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಅರ್ಥವಾಗುತ್ತಿಲ್ಲ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬರುವಾಗ ರಾಮರಾಜ್ಯ ಮಾಡ್ತೀವಿ ಅಂದು, ಈಗ ರಾವಣ ರಾಜ್ಯ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಸ್ವರ್ಗ ತೋರಿಸುತ್ತೇವೆ ಅಂದ ಪ್ರಧಾನಿ ಜನರಿಗೆ ನರಕ ತೋರಿಸಿದ್ದಾರೆ. ಈ ಎರಡು ವರ್ಷಗಳಲ್ಲಿ ಜನರು ನರಕ ಅನುಭವಿಸಿದ್ದಾರೆ,” ಎಂದು ಸಲೀಂ ಅಹಮ್ಮದ್ ಹೇಳಿದ್ದರಲ್ಲಿ ಯಾವ ತಪ್ಪು ಇಲ್ಲ.

“ಉತ್ತರ ಪ್ರದೇಶದಲ್ಲಿ ನಡೆದಿರುವಂತಹ ಈ ಘಟನೆ ಸಮಾಜಕ್ಕೆ ತಲೆ ತಗ್ಗಿಸುವಂತಹ ಕೆಲಸವಾಗಿದೆ. ಕೇಂದ್ರ ಮಂತ್ರಿಗಳ ಕಾರು ಹತ್ತಿಸಿ ನಾಲ್ಕು ಜನ ರೈತರನ್ನು ಕೊಂದು ಹಾಕಿದ್ದಾರೆ. ಇವರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋದ ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿದ್ದಾರೆ. ದೇಶದಲ್ಲಿ ಕಾನೂನು ಇದೆಯಾ ಎಂದು ಪ್ರಶ್ನೆ ಮಾಡಿದರು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಈ ಕೂಡಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯ ಯೋಗಿ ರಾಜೀನಾಮೆ ನೀಡಬೇಕು. ರೈತರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವರನ್ನು ಬಂಧಿಸಬೇಕು,” ಎಂದು ಜನರು ಹೇಳಿದ್ದರಲ್ಲಿ ಯಾವ ತಪ್ಪು ಇಲ್ಲ.

# ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ–

“ಇನ್ನು 40 ಜನ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯ ಬಗ್ಗೆ ಶಾಸಕ ರಾಜು ಕಾಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಲೀಂ ಅಹಮ್ಮದ್ ಅವರು, “”ನಾವು ಪಕ್ಷವನ್ನು ಗಟ್ಟಿ ಮಾಡುವಂತಹ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಹೋರಾಟಕ್ಕೆ ಸಿದ್ಧವಾಗಿದ್ದು, ಯಾವುದೇ ಸಂದರ್ಭದಲ್ಲೂ ಚುನಾವಣೆ ನಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಮತ್ತು ವಿಚಾರಧಾರೆಗಳನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಾಯಕತ್ವವನ್ನು ಒಪ್ಪಿಕೊಂಡು ಯಾರು ಬಂದರೂ ಸಮಿತಿಗೆ ಅರ್ಜಿ ಸಲ್ಲಿಸಬೇಕು. ನಂತರ ನಮ್ಮ ಪಕ್ಷದ ಹಿರಿಯರು, ಮುಖಂಡರು ಪರಿಶೀಲಿಸಿ ಪಕ್ಷ ಸೇರ್ಪಡೆಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ,” ಎಂದು ಸಲೀಂ ಅಹಮದ್ ಸುದ್ದಿಗಾರರಿಗೆ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ.

#ವಿಧಾನ ಪರಿಷತ್‌ ಚುನಾವಣೆ: ತಮ್ಮ ಪ್ರದೀಪ್ ಶೆಟ್ಟರ್ ಟಿಕೆಟ್‌ಗಾಗಿ ಜಗದೀಶ್ ಶೆಟ್ಟರ್‌ ದೆಹಲಿಗೆ?–

ಬೆಂಗಳೂರು/ದೆಹಲಿ: ಬಿಜೆಪಿಯ ಹಿರಿಯ ಶಾಸಕ ಜಗದೀಶ ಶೆಟ್ಟರ್‌ ಅವರು ಶುಕ್ರವಾರ ದಿಢೀರ್‌ ದೆಹಲಿಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ವಿಧಾನಪರಿಷತ್ ಚುನಾವಣೆಯಲ್ಲಿ ಸಚಿವರು, ಶಾಸಕರು ಮತ್ತು ಸಂಸದರ ಕುಟುಂಬದವರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಬಿಜೆಪಿಯ ವರಿಷ್ಠರು ಸೂಚನೆ ನೀಡಿರುವುದರಿಂದ, ತನ್ನ ತಮ್ಮ ವಿಧಾನ ಪರಿಷತ್‌ ಸದಸ್ಯ ಪ್ರದೀಪ್ ಶೆಟ್ಟರ್‌ ಅವರಿಗೆ ಟಿಕೆಟ್‌ ಖಾತರಿಪಡಿಸಲು ಶೆಟ್ಟರ್ ಅವರು ದೆಹಲಿಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿ ಬಂದ ಮರುದಿನವೇ ಜಗದೀಶ ಶೆಟ್ಟರ್‌ ಅವರು ದೆಹಲಿಗೆ ತೆರಳಿರುವುದಕ್ಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರದೀಪ ಶೆಟ್ಟರ್ ಪ್ರತಿನಿಧಿಸುತ್ತಿರುವ ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿದ್ದಾರೆ. ಅದಕ್ಕಾಗಿಯೇ ಜಗದೀಶ್ ಶೆಟ್ಟರ್ ತಮ್ಮ ತಮ್ಮನ ವಕಾಲತ್ತು ಹಿಡಿದುಕೊಂಡು ದೇಹಲಿಯ ಪ್ರವಾಸ ಮಾಡಿದ್ದರು ಜಗದೀಶ್ ಶೆಟ್ಟರ್. ಹೊರತುಪಡಿಸಿ ಯಾವ ಜನಹಿತಕ್ಕೆ ಈ ಜಗದೀಶ್ ಶೆಟ್ಟರ್ ದೇಹಲಿ ಪ್ರವಾಸ ಕೈಗೊಂಡಿರಲಿಲ್ಲ. ಏಕೆಂದರೆ ಈ ಬಾರಿ ಇದೇ ಪ್ರದೀಪ್ ಶೆಟ್ಟರ್ ಗೆ ಧಾರವಾಡ ವಿಧಾನ ಪರಿಷತ್ ಚುನಾವಣೆಯ ಟಿಕೆಟ್‌ ಕೊಡುವ ವಿಚಾರವಿರಲಿಲ್ಲಿ, ದೇಹಲಿ ಹೈಕಾಂಡ್ ಗೆ.

# ಮಾಜಿ ಸಿಎಂ ಬಿಎಸ್‌ವೈ ಭೇಟಿಯಾದ ಶೆಟ್ಟರ್; ಕಾರಿನಲ್ಲೇ ಮೀಟಿಂಗ್..!–

ದೆಹಲಿ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ನಿನ್ನೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಎಸ್‌ವೈ ಮದುವೆ ಕಾರ್ಯವೊಂದರಲ್ಲಿ ಭಾಗಿಯಾಗಲು ತೆರಳುತ್ತಿದ್ದ ಹಿನ್ನೆಲೆಯಲ್ಲಿ ಕಾವೇರಿ ನಿವಾಸದ ಆವರಣದಲ್ಲಿ ಯಡಿಯೂರಪ್ಪ ಅವರ ಕಾರಿನಲ್ಲೇ ಉಭಯ ನಾಯಕರು ಕೆಲಕಾಲ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿ ಬಿಟ್ ಕಾಯಿನ್ ವಿವಾದ ಬಿಜೆಪಿ ಸುತ್ತ ಸುತ್ತಿಕೊಳ್ಳುತ್ತಿರುವ ನಡುವೆ ಮಾಜಿ ಮುಖ್ಯಮಂತ್ರಿಗಳಿಬ್ಬರು ಸಭೆ ನಡೆಸಿದ್ದು, ಬಿಜೆಪಿ ಪಾಳಯದಲ್ಲಿ ಸಂಚಲನವನ್ನೂ ಮೂಡಿಸಿದೆ.

ದೆಹಲಿ ಪ್ರವಾಸದಿಂದ ವಾಪಸ್ಸಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾವೇರಿ ನಿವಾಸಕ್ಕೆ ಆಗಮಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಿಎಸ್‌ವೈ ಮದುವೆ ಕಾರ್ಯವೊಂದರಲ್ಲಿ ಭಾಗಿಯಾಗಲು ತೆರಳುತ್ತಿದ್ದ ಹಿನ್ನೆಲೆಯಲ್ಲಿ ಕಾವೇರಿ ಆವರಣದಲ್ಲಿ ಬಿಎಸ್‌ವೈ ಕಾರಿನಲ್ಲೇ ಉಭಯ ನಾಯಕರು ಕೆಲಕಾಲ ಮಾತುಕತೆ ನಡೆಸಿದರು.

ಇದಕ್ಕೆ ಕಾರಣ ತಮ್ಮ ಸಹೋದರ ಪ್ರದೀಪ್ ಶೆಟ್ಟರ್ ಗೆ ಈ ಬಾರಿ ವಿಧಾನ ಪರಿಷತ್ ಟಿಕೆಟ್‌ ತಪ್ಪುವ ಸಂಭವವಿತ್ತು ಅದಕ್ಕೆ ಜಗದೀಶ್ ಶೆಟ್ಟರ್ ಯಡಿಯೂರಪ್ಪರನ್ನು ಸತಾಯಗತಾಯ ತಮ್ಮ ಸಹೋದರನಿಗೇ ಧಾರವಾಡ ವಿಧಾನ ಪರಿಷತ್ ಚುನಾವಣೆಯ ಟಿಕೆಟ್‌ ಸಿಗುವಂತೆ ಮಾಡಿದರು.

ಈ ಎಲ್ಲಾ ಕಾರಣಗಳಿಂದ ಈ ಬಾರಿ ಜಗದೀಶ್ ಶೆಟ್ಟರ್ ತಮ್ಮ ಬಿಜೆಪಿಯ ಪ್ರದೀಪ್ ಶೆಟ್ಟರ್ ರೇ ಸೋಲುವ ಸಂಭವವಿದೆ. ಅದರ ಬದಲಾಗಿ ಕಾಂಗ್ರೆಸ್ ನ ಸಲೀಂ ಅಹಮ್ಮದ್ ರು ಗೆಲ್ಲುವ ಅವಕಾಶವಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ..!

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here