ಹಾರಕೂಡ ಶ್ರೀಗಳಿಂದ ವಿಜಯಮುಖಿ ಕೃತಿ ಲೋಕಾರ್ಪಣೆ

0
57

ಕಲಬುರಗಿ: ತಾವು ಸ್ಥಾಪಿಸಿದ ವಿಶ್ವಜ್ಯೋತಿ ಪ್ರತಿಷ್ಠಾನಕ್ಕೆ 11 ವರ್ಷ. ತಮ್ಮ ಹುಟ್ಟಿನ 40 ವರ್ಷದ ಅಂಗವಾಗಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡ ವಿಜಯಕುಮಾರ ತೇಗಲತಿಪ್ಪಿ ಅವರ ಕುರಿತು 11 ಜನ ಲೇಖಕರು ಬರೆದ ವಿಜಯಮುಖಿ ಕೃತಿಯಲ್ಲಿ ತೇಗಲತಿಪ್ಪಿ ಅವರ ಸಾಮಾಜಿಕ, ಸಾಹಿತ್ಯ ಸಂಘಟನೆಗಳ ಸಮಗ್ರ ಚಿತ್ರಣ ವಿದೆ ಎಂದು ಹಾರಕೂಡದ ಡಾ. ಚನ್ದನವೀರ ಸ್ವಾಮಿಯವರು ಅಭಿಪ್ರಾಯಪಟ್ಟರು.

ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನ ಹಾರಕೂಡ ಸುಕ್ಷೇತ್ರದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ವಿಜಯಮುಖಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ವಿಜಯಕುಮಾರ ತೇಗಲತಿಪ್ಪಿ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

Contact Your\'s Advertisement; 9902492681

ನಾಡಿನಾದ್ಯಂತ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ವಚನ ಸಾಹಿತ್ಯದ ಪರಿಮಳ ಉಣಬಡಿಸುವ ವಿಜಯಕುಮಾರ ಅವರ ಸಾಹಿತ್ಯ ಕ್ಷೇತ್ರದ ಯಾತ್ರೆ ಯಶಸ್ಸು ಕಾಣಲಿ ಎಂದು ನುಡಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ ಮಾತನಾಡಿದರು.

ಪುಸ್ತಕ ಬಿಡುಗಡೆ ಮಾಡುವುದು ಎಂದರೆ ಸಾಮಾನ್ಯವಾಗಿ ಪ್ಯಾಕ್ ಮಾಡಿರುವುದನ್ನು ಬಿಚ್ಚಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಇಲ್ಲಿ ಮಾತ್ರ ಶ್ರೀಗಳ ಇಚ್ಚೆಯಂತೆ ತಟ್ಟೆಯೊಂದರಲ್ಲಿ ಗುಲಾಬಿ ಹೂವಿನ ಪಕಳೆಯಲ್ಲಿ ಇಟ್ಟ ಪುಸ್ತಕಗಳನ್ನು ಹೊರ ತೆಗೆದು ಜನಾರ್ಪಣೆ ಮಾಡಿರುವುದು ವಿಶೇಷ ಅನಿಸಿತು.

ಪತ್ರಕರ್ತ ಶಿವರಂಜನ್ ಸತ್ಯಂಪೇಟೆ, ವಿಜಯಮುಖಿ ಕೃತಿ ಸಂಪಾದಕ ಜಗನ್ನಾಥ ತರನಳ್ಳಿ, ಕಲ್ಯಾಣಕುಮಾರ ಶೀಲವಂತ, ರವೀಂದ್ರಕುಮಾರ ಭಂಟನಳ್ಳಿ ವೇದಿಕೆಯಲ್ಲಿದ್ದರು. ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶಿವರಾಜ ಅಂಡಗಿ ನಿರೂಪಿಸಿದರು. ಪರಮೇಶ್ವರ ಶೆಟಕಾರ ವಂದಿಸಿದರು.

ಶಕುಂತಲಾ ಪಾಟೀಲ ಜವಳಿ, ನರಸಿಂಗರಾವ ಹೇಮನೂರ, ಪ್ರಸನ್ನ ವಾಂಜರಖೇಡ, ದೇವಿಂದ್ರಪ್ಪ ಆವಂಟಿ, ಹಣಂತರಾವ ಭೈರಾಮಡಗಿ, ಚನ್ನಬಸವ ಹಿರೇಮಠ, ಸತೀಶ ಸಜ್ಜನ್, ಡಾ. ನಾಗರಾಜ ಹೆಬ್ಬಾಳ, ಶ್ರೀಕಾಂತಗೌಡ ತಿಳಗೂಳ, ಬಾಬುರಾವ ಶೇರಿಕಾರ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here