ಅಂಬೇಡ್ಕರ್ ಪೂಜಿಸುವುದಲ್ಲ, ಅವರ ತತ್ವಗಳು ಪಾಲಿಸೋಣ

0
129

ಕಲಬುರಗಿ: ನನ್ನ ಆರಾಧೀಸ ಬೇಡಿ ನನ್ನ ಅನುಯಾಯಿ ಆಗಿ ಎಂದು ಡಾ. ಬಾಬಾ ಸಾಹೇಬ್ ಭೀಮರಾವ ಅಂಬೇಡ್ಕರ್ ಹೇಳಿದ್ದಾರೆ ಆದರೆ ನಾವು ಇಂದು ಅವರನ್ನು ಆರಾಧನೆ ಮಾಡುತ್ತಿದ್ದೇವೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 65ನೇ ಮಹಾಪರಿನಿಬ್ಬಾಣ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರನ್ನು ಪೂಜಿಸಿದರೆ ಸಾಲದು ಅವರ ತತ್ವಗಳು, ಚಿಂತನೆಗಳನ್ನು ಪಾಲಿಸಬೇಕು.

Contact Your\'s Advertisement; 9902492681

ಅಂಬೇಡ್ಕರ್ ಎಂಬ ಆ ಮಹಾನ್ ದೇಶಪ್ರೇಮಿಯ ಅಂತಹ ದೇಶಪ್ರೇಮದ ಸಾಂಧರ್ಭಿಕ ನಿಲುವುಗಳಿಂದ ಭಾರತ ದೇಶ ಸಧ್ಯ ಇಂದು ಇಡೀ ವಿಶ್ವದ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮೈದಳೆದಿದೆ. ಈ ನಿಟ್ಟಿನಲಿ ಅಂಬೇಡ್ಕರರ ದೇಶಪ್ರೇಮ ಸದಾ ಪ್ರಾತಃಸ್ಮರಣೀಯ. . ಬಾಬಾಸಾಹೇಬ್‌ ಅಂಬೇಡ್ಕರ್‌. ಈ ಹೆಸರೇ ಕೋಟ್ಯಂತರ ಜನರಿಗೆ ಸ್ಪೂರ್ತಿ. ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ, ಅವರೆಲ್ಲರಿಗೂ ಸ್ವಾಭಿಮಾನ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕ ಆಗಿದ್ದಾರೆ.

ಅನ್ಯಾಯ, ಅಸಮಾನತೆ ಹಾಗೂ ಶೋಷಣೆಗಳ ವಿರುದ್ಧದ ಎಲ್ಲ ಚಳವಳಿಗಳಿಗೆ ಇಂದಿಗೂ ಡಾ. ಅಂಬೇಡ್ಕರ್‌ ಅವರ ಚಿಂತನೆಗಳೇ ಬಳುವಳಿ. ಬಾಬಾಸಾಹೇಬ್ ರವರ ಸ್ವಂತ ಗ್ರಂಥಾಲಯವಾದ ” ರಾಜಗ್ರಿಹ” ಸುಮಾರು 50,000ಕ್ಕೂ ಸಂಖ್ಯೆಗಿಂತ ಅಧಿಕ ಪುಸ್ತಕಗಳನ್ನು ಹೊಂದಿದ್ದು, ಇಡೀ ವಿಶ್ವದ ಅತಿ ದೊಡ್ಡ ಖಾಸಗಿ ಗ್ರಂಥಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಗ್ರಂಥಾಲಯನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಡಾ. ಖೇಮಣ್ಣ ಅಲ್ದಿ, ಡಾ. ಪ್ರವೀಣ್ ಕುಮಾರ್ ಕುಂಬಾರ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ. ರಾಜಕುಮಾರ ಎಂ. ದಣ್ಣೂರ ನಿಂಗಪ್ಪ ಕರನಾಳ ಮತ್ತು ಗ್ರಂಥಾಲಯ ಸಿಬ್ಬಂದಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here