ಹೇಡ್ ಲೈನ್: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 65 ನೇ ಮಹಾಪರಿನಿರ್ವಾಹಣ ದಿನ

0
15
  • ಶರಬು ಬಿ ನಾಟೇಕಾರ ಯಾದಗಿರಿ

ಯಾದಗಿರಿ: ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಹಾಕಿಕೊಟ್ಟ ದಾರಿಯಲ್ಲಿ ಯುವಜನತೆ ಸಾಗಬೇಕು. ಗುಣಮಟ್ಟದ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.ಅವರು ಅಭಿಪ್ರಾಯಪಟ್ಟರು.

ಯಾದಗಿರಿಯ ಅಂಬೇಡ್ಕರ್ ನಗರದಲ್ಲಿರುವ ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ ಪುತ್ಥಳಿಗೆ ಅವರ 65ನೇ “ಮಹಾಪರಿನಿರ್ವಾಣ ದಿನ”ದ ಹಿನ್ನೆಲೆಯಲ್ಲಿ ಹಾರ ಹಾಕಿ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಶಿಕ್ಷಣ, ಸಂಘಟನೆ, ಹಾಗೂ ಹೋರಾಟದ ನೆಲೆಗಟ್ಟಿನಲ್ಲಿ ಜೀವನ ರೂಪಿಸಿಕೊಂಡಿದ್ದ ಅಂಬೇಡ್ಕರ್ ಅವರ ಜೀವನಾದರ್ಶಗಳನ್ನು ಯುವ ಪೀಳಿಗೆ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾಭಿಮಾನದ ಜೀವನ ನಡೆಸಬೇಕು ಎಂದರು.

ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಎಂದು ಶ್ರಮಿಸಿದ ,ಸಾಮಾಜಿಕ ನ್ಯಾಯದ ಹರಿಕಾರ, ಪ್ರಜಾಪ್ರಭುತ್ವದ ಭಾಸ್ಕರ, ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ,ಮಹಾನ್ ಮಾನವತಾವಾದಿ ಬಾಬಾಸಾಹೇಬ ಅಂಬೇಡ್ಕರ್ ರವರ, ಮಹಾಪಾರಿನಿರ್ವಾಣದ ಗೌರವಪೂರ್ವಕ ನಮನಗಳು ಅರ್ಪಿಸೋಣ ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ರಾಮಚಂದ್ರಗೊಳಾ, ನಗರಸಭೆ ಪೌರಾಯುಕ್ತ ಬಕ್ಕಪ್ಪ, ಯಾದಗಿರಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ ಹಾಗೂ ದಲಿತ ಮುಖಂಡರಾದ ಮಲ್ಲಿಕಾರ್ಜುನ ಈಟೇ, ನಗರ ಸಭೆ ಸದಸ್ಯರಾದ ಬಸಮ್ಮ ಕುರಕುಂಬಳ, ಮಾಜಿ ನಗರ ಸಭೆ ಸದಸ್ಯ ಮರೆಪ್ಪ ಚಟ್ಟೆರಕರ್, ಶ್ಯಾಮಸನ್ ಮಾಳಿಕೇರಿ, ಡಾ. ಭಗವಂತ ಅನವಾರ, ಬಸವಲಿಂಗಪ್ಪ ಕುರಕುಂಬಳ, ಮರೆಪ್ಪ ಬುಕ್ಕಲ್, ಮಲ್ಲಿಕಾರ್ಜುನ ಕುರಕುಂಬಳ,ದೇವಿಂದ್ರಪ್ಪ ಈಟೇ, ಮಲ್ಲಿನಾಥ ಸುಂಗಲಕರ್, ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here