ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ರವರು ಅಧ್ಯಕ್ಷತೆಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ೬೫ ನೇ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ದಿನಾಚರಣೆಯ ಅಂಗವಾಗಿ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಚಂದ್ರಕಾಂತ ಎಂ. ಯಾತನೂರ, ನಿರ್ದೇಶಕರು, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವದುದ್ದಕ್ಕೂ ಅಸ್ಪ್ರಶ್ಯತೆ, ಅನ್ಯಾಯ, ಅವಮಾನಗಳನ್ನು ಅನುಭವಿಸಿ ತಮ್ಮ ಜೀವನದ ಕೊನೆ ದಿನಗಳಲ್ಲಿ ಒಂದು ಪ್ರಮುಖ ನಿರ್ಣಯವನ್ನು ತೆಗೆದುಕೊಂಡರು. ನಾನು ಹಿಂದೂವಾಗಿ ಹುಟ್ಟಿದ್ದೇ, ಹಿಂದೂವಾಗಿ ಸಾಯಲಾರೆ. ಸಾಮಾಜಿಕ ಬದಲವಣೆಗಾಗಿ ಪ್ರಬುದ್ಧ ಭಾರತದ ಕನಸು ಕಂಡಿದ್ದ ಅಂಬೇಡ್ಕರ್‌ರು ಸಾಮಾಜಿಕ ನ್ಯಾಯ ಒದಗಿಸಿಕೊಡಲು ಬೌದ್ಧ ಧರ್ಮ ಸ್ವೀಕರಿಸಿದರು.
ಮುಖ್ಯ ಅತಿಥಿಗಳಾಗಿ ಪ್ರೊ. ಎಚ್.ಟಿ. ಪೋತೆ, ಪ್ರಾಧ್ಯಪಕರು ಹಾಗೂ ನಿದೇರ್ಶಕರು, ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಅವರು ಮಾತನಾಡುತ್ತ, ಡಾ. ಅಂಬೇಡ್ಕರ್ ಒಬ್ಬ ರಾಷ್ಟ್ರ ಪ್ರೇಮಿ, ಅಷ್ಟೇ ಅಲ್ಲ ಅವರು ಜಾಗತೀಕ ನಾಯಕರಾಗಿದ್ದಾರೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಡಾ. ಅಂಬೇಡ್ಕರ್ ರವರ ಜ್ಞಾನಕ್ಕೆ ಗೌರವ ನೀಡುತ್ತಿವೆ, ಇದು ನಮ್ಮ ಹೆಮ್ಮೆ. ದುರದೃಷ್ಟಕರ ಸಂಗತಿ ಎಂದರೆ, ಭಾರತೀಯರಲ್ಲಿ ಡಾ. ಅಂಬೇಡ್ಕರ್ ರವರಿಗೆ ತಾರತಮ್ಮೆ ಮಾಡಿ ಅಂಬೇಡ್ಕರ್ ರವರಿಗೆ ಒಂದು ಜಾತಿಗೆ ಸೀಮಿತಗೊಳಿಸಿ ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಡಾ. ಬಾಬಾ ಸಾಹೇಬರು ತಮ್ಮ ಕೊನೆಯ ದಿನಗಳು ನೋವಿನ ಸಂಗತಿಗಳನ್ನು ತಮ್ಮ ಆಪ್ತರಾದ ನಾನಕ್ ಚಂದ ರತ್ತು ಅವರೊಂದಿಗೆ ಹಂಚಿಕೊಂಡಿದ್ದಾರೆ. ಶೋಷಿತ ಸಮಾಜದ ಏಳಿಗೆಗಾಗಿ ನಿರಂತರ ಚಿಂತನೆ ಮಾಡಿದರು. ಸಂವಿಧಾನದ ಮೂಲಕ ಅಸ್ಪ್ರಶ್ಯತೆ, ಮಹಿಳೆಯರಿಗಾಗಿ ರಾಜಕೀಯ ಹಕ್ಕು, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರಿಗಾಗಿ ಕಾನೂನು ಜಾರಿಗೆ ಮಾಡಿ ಮಹಾ ನಾಯಕರಾಗಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳು ಪ್ರೋ. ದಯಾನಂದ ಅಗಸರ್ ರವರು ಅಧ್ಯಕ್ಷೀಯ ನುಡಿಗಳನ್ನು ಹೇಳುತ್ತಾ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂದೇಶ ಅವರ ಜೀವನದ ಶಿಸ್ತು ವಿಚಾರಗಳನ್ನು ಪ್ರತಿಯೋಬ್ಬ ವ್ಯಕ್ತಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಅಂಬೇಡ್ಕರ್ ರವರಿಗೆ ಸಲ್ಲುವ ಗೌರವ ಎಂದು ಹೇಳಿದರು. ಡಾ. ಅಂಬೇಡ್ಕರ್ ರವರ ಜ್ಞಾನಕ್ಕೆ ಎಲ್ಲರೂ ತಲೆಬಾಗಬೇಕು ಅವರ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಪ್ರಬುದ್ಧ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಸ್ವಾಗತ ಗೀತೆ ಡಾ. ಪ್ರದೀಪ್ ಕಡೂನ ನೇರೆವರಿಸಿದರು. ವಂದನಾರ್ಪಣೆ ಡಾ. ಬುದ್ದಭಾರತ ಎಸ್. ಭೇಂಡೆ, ನಿರ್ವಹಣೆ ಡಾ. ಕಾಶಿನಾಥ ನೂಲಕರ್ ನಿರ್ವಹಿಸಿದರು.