ಕಲಬುರಗಿ- ಯಾದಗಿರಿ ಪರಿಷತ್ ಅಂಗಳದಲ್ಲಿ ಕಾಂಗ್ರೆಸ್ ಅಲೆ- ಡಾ. ಅಜಯ್ ಸಿಂಗ್

0
18

ಜೇವರ್ಗಿ: ಕಲಬುರಗಿ- ಯಾದಗಿರಿ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‍ಗೆ ನಡೆಯಲಿರುವ ಚುನಾವಣೆಯ ಕಣದಲ್ಲೆಲ್ಲಾ ಕಾಂಗ್ರೆಸ್ ಪರ ಅಲೆ ಎದ್ದಿದೆ. ಈ ಬಾರಿ ಪಂಚಾಯ್ತಿಯಿಂದ ಹಿಡಿದು  ಲ್ಲಾ ಹಂತದ ಸ್ಥಳೀಯ ಸಂಸ್ಥೆಗಳ ಮತದಾರರು ಕಾಂಗ್ರೆಸ್‍ನ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿರುವ ಹಾಗೂ ಪಂಚಾಯ್ತಿ ಅನುಭವವಿರುವಂತಹ ಶಿವಾನಂದ ಪಾಟೀಲ ಮರತೂರ ಇವರನ್ನು ಗೆಲ್ಲಿಸುವ ನಿರ್ಣಯ ಕೈಗೊಂಡಿದ್ದಾರೆ ಎಂದು ಜೇವರ್ಗಿ ಶಾಕರು ಹಾಗೂ ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಆಗಿರುವ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಸೋಮವಾರ ಜೇವರ್ಗಿ ತಾಲೂಕಿನ ಆಲೂರ, ಯಲಗೋಡ, ಕರಕೆಹಳ್ಳಿ, ಕಡಕೋಳ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿನ ಸದಸ್ಯರೊಂದಿಗೆ ನೇರಾನೇರ ಸಂವಾದ ನಡೆಸಿ ಪರಿಷತ್‍ನಲ್ಲಿ ಬೆಂಬಲಿಸುವಂತೆ ಅವರೆಲ್ಲರನ್ನು ಕೋರಿದ್ದಾರೆ.

Contact Your\'s Advertisement; 9902492681

ಗ್ರಾಪಂಗಳಿಗೆ ಕಾಂಗ್ರೆಸ್ ನೀಡಿದಷ್ಟೂ ಬಲ ಬಿಜೆಪಿ ನೀಡಿಲ್ಲ ಎಂಬ ಮನವರಿಕೆ ಸದಸ್ಯರಿಗೆಲ್ಲರಿಗೂ ಆಗಿದೆ. ಇದಲ್ಲದೆ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕು ಪಂಚಾಯ್ತಿಯ ಸದಸ್ಯರಿಗೆ ನೀಡಿz್ದÉೀ ಕಾಂಗ್ರೆಸ್ ಪಕ್ಷ ಎಂಬ ಅರಿವು ಇದೀಗ ಪಂಚಾಯ್ತಿ ಸದಸ್ಯರಿಗೆ ಬಂದಿದೆ. ಹೀಗಾಗಿ ಮತದಾನದ ಹಕ್ಕು ಕಲ್ಪಿಸಿಕೊಟ್ಟಂತಹ ಕಾಂಗ್ರೆಸ್‍ಗೆ ಬೆಂಬಲಿಸಲಿದು ಸಕಾಲವೆಂದು ಮತದಾರರೆಲ್ಲರೂ ಕೈ ಹಿಡಿಯಲಿದ್ದಾರೆಂಬ ವಿಶ್ವಾಸ ಡಾ. ಅಜಯ್ ಸಿಂಗ್ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಸಾಮಾನ್ಯ ಕಾಯರ್Àಕರ್ತನಿಗೆ ಕಣಕ್ಕಿಳಿಸಿದೆ. ಹೀಗಾಗಿ ಈ ಬಾರಿ ನಮ್ಮ ಪರ ಮತದಾರರ ವಿಶ್ವಾಸ ಹೆಚ್ಚಿದೆ. ಹೀಗಗಿ ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಡಾ. ಅಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರು ಮಲ್ಲಿಕಾರ್ಜುನ ಸಾಹೂ ಆಲೂರ, ಸಿದ್ದಲಿಂಗರೆಡ್ಡಿ ಇಟಗಾ, ರುಕ್ಕುಂ ಪಟೇಲ್ ಇಜೇರಿ, ಹನುಮಂತ ರೈ ಹೆಡಗಿಜೋಳ, ಮಲಕಣ್ಣ ಸಿಡ್ಲಿ, ಕಾಶಿಂ ಪಟೇಲ್ ಮುದಬಾಳ, ರಾಜಶೇರ್ಖ ಸಿರಿ, ಶಾಂತಪ್ಪ ಕೂಡಲಗಿ, ಶೌಕತ್ ಅಲಿ ಆಲೂರ, ಹಯ್ಯಾಳಪ್ಪ ಪುಜಾರಿ, ನಾಗಪ್ಪ ದೊಡಮನಿ, ಚಂದ್ರಶೇರ್ಖ ಹರನಾಳ, ಚಂದ್ರಶೇಖರ್ ನೆರಡಗಿ, ಶಿವಾನಂದ , ಸಿದ್ದಣ್ಣ ಕವಾಲ್ದಾರ, ಮಡಿವಾಳಪ್ಪ ಸಜ್ಜನ, ನೀಲಕಂಠ ಪಾಟಿಲ್ ಕಟ್ಟಿ ಸಂಗಾವಿ, ರೆಹಮಾನ ಪಟೇಲ್,ಶರಣಬಸಪ್ಪ ಜೋಗುರ, ರೇವಣ್ಣ ಸಿದ್ದಪ್ಪ ಕಮಾನಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here