ಬೆಳೆ ಕೀಟರೋಗಕ್ಷಿಪ್ರ ಸಂಚಾರಿ ಸಮೀಕ್ಷೆ

0
39

ಕಲಬುರಗಿ: ಜಿಲ್ಲೆಯ ಚಿಂಚೋಳಿ ಭಾಗದಲ್ಲಿ ಕೃಷಿ ವಿಜ್ಞಾನಕೇಂದ್ರ, ಕೃಷಿ ಸಂಶೋಧನಾಕೇಂದ್ರ ಮತ್ತು ಕೃಷಿ ಇಲಾಖೆ ಸಹಭಾಗಿತ್ವದಲ್ಲಿಕ್ಷಿಪ್ರ ಸಂಚಾರಿ ಬೆಳೆಗಳ ಕೀಟರೋಗ ಸಮೀಕ್ಷೆ ನಡೆಸಲಾಯಿತು.

ಗ್ರಾಮಗಳಾದ ಮಹಾಗಾಂವ, ನಾಗೂರ, ಕಂದಗೂಳ, ನಾವದಗಿ, ರಟಕಲ್, ಕೋಡ್ಲಿ, ದಸ್ತಾಪುರ, ಸುಲೇಪೇಟ್, ಪೆಂಚೆಂಪಳ್ಳಿ, ಚಿಂಚೋಳಿ ಅಣವಾರ್, ಐನೊಳ್ಳಿ, ದೇಗಲಮಡಿ ಭಾಗಗಳಲ್ಲಿ ತೊಗರಿ ಕಾಯಿ ಹಂತದಲ್ಲಿದ್ದು, ಮಳೆಯ ಹಾಗೂ ಮಂಜಿನ ಹಾನಿ, ಹವಾಮಾನ ವೈಪ್ಯರಿತ್ಯದಿಂದಾಗಿಅಲ್ಲಲ್ಲಿ ನೆಟೆ ಸೊರಗುರೋಗಕಂಡು ಬಂದಿದೆ.ಕಡಲೆ ಹಾಗೂ ಜೋಳದಲ್ಲಿ ಎಲೆತಿನ್ನುವಕೀಟ, ಭಾದೆ ಹತೋಟಿಗೆಇಮಾಮೆಕ್ಟಿನ್ ಬೆಂಜೋಯಟ್ ೧.೫ ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ರೈತರಿಗೆ ತಿಳಿಸಲಾಯಿತು.

Contact Your\'s Advertisement; 9902492681

ಅರಶಿನ ಎಲೆಚುಕ್ಕಿ ರೋಗಕಂಡುಬಂದಿದೆ.ಇದರ ನಿರ್ವಹಣೆಗೆ ಹೆಕ್ಸಾಕೊನಜಾಲ್ ೧ ಮಿಲಿ ಪ್ರತಿ ಲಿಟರ್ ನೀರಿಗೆ ಸಿಂಪಡಿಸಬೇಕು. ಪೇರಲ್ ಗಿಡಗಳು ನಿಧಾನವಾಗಿ ಸೊರಗುತ್ತಿದ್ದು, ಕಾಂಡದ ಕವಲುಗಳು ಹಾಗೂ ಹಣ್ಣುಗಳು ಒಣಗಿದಂತೆಕಾಣುತ್ತಿವೆ. ಮಣ್ಣಿನಿಂದ ಉದ್ಬವವಾಗುವ ಪ್ಯುಜೇರಿಯಂ ಶೀಲಿಂದ್ರ ರೋಗ ಹಾಗೂ ಬೇರುಜಂತು ಭಾದೆ ಹೆಚ್ಚಾಗುತ್ತಿದ್ದು, ಬೇರುಕಪ್ಪಾಗುವಿಕೆಯಿಂದ ಹೊಸ ಬೇರುಗಳ ರಚನೆಗೆಕಷ್ಟವಾಗುತ್ತಿದೆ.ಜೊತೆಗೆ ನೀರು ಮತ್ತುಆಹಾರ ಸರಬರಾಜು ಮಾಡುವ ಸಸ್ಯ ಅಂಗಾಂಶಗಳಿಗೆ ದಕ್ಕೆಆಗುತ್ತಿದೆ.

ಈ ರೋಗದ ನಿರ್ವಹಣೆಗೆ ವಾರಕ್ಕೊಂದು ಭಾರಿ ಸೂಕ್ತ ನೀರಾವರಿ, ಬೇಸಿಗೆಯಲ್ಲಿ ಕಾಂಡಕ್ಕೆ ಸುಣ್ಣದ ಲೇಪನ ಮಣ್ಣು ಪರೀಕ್ಷೆ ಆಧರಿಸಿ ಸೂಕ್ಷ್ಮ ಮತ್ತು ಮಧ್ಯಮ ಪೋಷಕಾಂಶಗಳ ಬಳಕೆ ಟ್ರೈಕೋಡ್ರಮಾಯುಕ್ತ ಬೇವಿನ ಹಿಂಡಿ ಭೂಮಿಗೆ ಸೇರಿಸುವುದು. ತೋಟದಲ್ಲಿಚೆಂಡು ಹೂವುಗಳನ್ನು ಅಲ್ಲಲ್ಲಿ ಹಾಕುವುದರಿಂದರೋಗವನ್ನು ಸಮಗ್ರವಾಗಿ ಹತೋಟಿ ಮಾಡಬಹುದು.

ಐಸಿಎಆರ್- ಕೃಷಿ ವಿಜ್ಞಾನಕೇಂದ್ರ, ಕಲಬುರಗಿಯ ಸಸ್ಯರೋಗದ ವಿಜ್ಞಾನಿಯವರಾದಡಾ. ಜಹೀರ್‌ಅಹೆಮದ್, ಚಿಂಚೋಳಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಅನೀಲ್‌ರಾಠೋಡ, ಸುಲೇಪೇಟ್‌ರೈತ ಸಂಪರ್ಕಕೇಂದ್ರದ ಕೃಷಿ ಅಧಿಕಾರಿಯದ ಶ್ರೀ ಇಮ್ರಾನ್ ಅಲಿ, ಗುರುಪಾದ, ಕೃಷಿ ಸಂಜೀವಿನ ತಾಂತ್ರಿಕ ಅಧಿಕಾರಿಗಳಾದ ವರುಣ, ಅನೀಲ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here