ಸುರಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ರುಕ್ಮಾಪುರ ವಲಯದ ರುಕ್ಮಾಪುರ ಕಾರ್ಯ ಕ್ಷೇತ್ರದಲ್ಲಿ ಗಂಗೋತ್ರಿ ಜ್ಞಾನ ವಿಕಾಸ ಕೇಂದ್ರ ಸಭೆಯಲ್ಲಿ ಚಲನಚಿತ್ರ ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮವನ್ನು ಜೀವೇಶ್ವರ ಕಲ್ಯಾಣಮಂಟಪದ ಅಧ್ಯಕ್ಷರಾದ ಮಲ್ಲಯ್ಯ ಭಂಡಾರಿ, ಕಲಬುರ್ಗಿಯ ಪ್ರಾದೇಶಿಕ ನಿರ್ದೇಶಕರಾದ ಗೌರವಾನ್ವಿತ ಶಿವರಾಯ ಪ್ರಭು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಯೋಜನೆಯ ಕಾರ್ಯಕ್ರಮಗಳು, ಜ್ಞಾನವಿಕಾಸದ ಆಶಯ ,ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ,ಜ್ಞಾನ ವಿಕಾಸ ಕಾರ್ಯಕ್ರಮದ ಆರು ವಿಷಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸಂಗೀತ ಮೇಡಂ ಗ್ರಾಮ ಪಂಚಾಯಿತಿಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಊರಿನ ಗಣ್ಯರಾದ ಹನುಮಂತಗೌಡ ಪೋಲೀಸ್ ಪಾಟೀಲ ಶೌಚಾಲಯ ಮತ್ತು ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು, ಈ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಕಮಲಾಕ್ಷ ,ಸುರಪುರ ತಾಲೂಕಿನ ಯೋಜನಾಧಿಕಾರಿ ಸಂತೋಷ ಮತ್ತು ಜ್ಞಾನ ವಿಕಾಸದ ಸಮನ್ವಯಾಧಿಕರಿ ಸವಿತಾ ಮತ್ತು ವಲಯದ ಮೇಲ್ವಿಚಾರಕರು ಅನಿಲ್ ಕುಮಾರ್, ಸೇವಾ ಪ್ರತಿನಿಧಿಗಳು ಜ್ಞಾನ ವಿಕಾಸ ಮತ್ತು ಸಂಘದ ಸದಸ್ಯರು ಹಾಜರಿದ್ದರು.