ಸುರಪುರ ಎಬಿವಿಪಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್‌ಗೆ ಶ್ರದ್ಧಾಂಜಲಿ

0
6

ಸುರಪುರ: ಬುಧವಾರ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದ ಸೇನಾ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್ ರಾವತ್,ಮಧುಲಿಕಾ ರಾವತ್ ಹಾಗು ಇತರೆ ಸೇನಾ ಸಿಬ್ಬಂದಿಗಳಿಗೆ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಗರದ ತಿಮ್ಮಾಪುರದಲ್ಲಿನ ಬೈಲ್ ಹನುಮಾನ ದೇವಸ್ಥಾನದ ಆವರಣದಲ್ಲಿ ಸೇರಿದ ಎಬಿವಿಪಿ ಅನೇಕ ಮುಖಂಡರು ಬಿಪಿನ್ ರಾವತ್ ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪರಿಷತ್ ಕಲಬುರ್ಗಿ ವಿಭಾಗ ಸಹ ಪ್ರಮುಖ ಡಾ:ಉಪೇಂದ್ರ ನಾಯಕ ಸುಬೇದಾರ್,ಜಿಲ್ಲಾ ಸಂಚಾಲಕ ಕ್ಯಾತಪ್ಪ ಮೇದಾ,ಅಯ್ಯಣ್ಣ,ಶರಣು ನಾಯಕ್ ರಂಗಂಪೇಟೆ,ಉಪನ್ಯಾಸಕರಾದ ಬಸವರಾಜ್ ನಡಕೂರ್,ರಾಜು,ಸಚಿನ್,ಅಯ್ಯಳಪ್ಪ ಸುಂಗಿ,ಮಲ್ಲು ವಿಷ್ಣು ಸೇನಾ,ಯಲ್ಲಪ್ಪ ತೆಲಗೂರು,ರಮೇಶ ಡೊಳ್ಳೆ,ಮಹೇಶ ಜಾಗಿರದಾರ್,ಕಾಂತಪ್ಪ ಎಲಿಗಾರ,ಚಂದ್ರು ಎಲಿಗಾರ,ಶಾಂತಪ್ಪ ಮಾಲಗತ್ತಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here