ಕಲಬುರಗಿ: ಗುಲಬರ್ಗಾ ಸ್ಥಳೀಯ ಸಂಸ್ಥೆಗಳು ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಇಂದು ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ. 99.73 ರಷ್ಟು ಮತದಾನವಾಗಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ನಾ ಅವರು ತಿಳಿಸಿದ್ದಾರೆ.
ಒಟ್ಟು 7088 ಮತದಾರರ ಪೈಕಿ 7070 ಮತದಾರರು ಮತಚಲಾಯಿಸಿದ್ದು, ಈ ಪೈಕಿ 3312 ಪುರುಷರು ಮತ್ತು 3758 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕಮಲಾಪುರ ತಾಲ್ಲೂಕು, ಚಿತ್ತಾಪುರ ತಾಲ್ಲೂಕು, ಜೇವರ್ಗಿ ತಾಲ್ಲೂಕು ಹಾಗೂ ವಡಗೇರಾ ತಾಲ್ಲೂಕುಗಳಲ್ಲಿ ಶೇ. 100 ರಷ್ಟು ಮತದಾನವಾಗಿದ್ದು, ಉಳಿದಂತೆ ಅಫಜಲಪುರ ತಾಲೂಕು ಶೇ. 99.81, ಆಳಂದ ಶೇ. 99.72, ಚಿಂಚೋಳಿ ಶೇ. 99.79, ಕಾಳಗಿ ಶೇ. 99.62, ಸೇಡಂ ಶೇ. 99.79, ಕಲಬುರಗಿ ತಾಲ್ಲೂಕು ಶೇ. 99.80, ಕಲಬುರಗಿ ಮಹಾನಗರ ಪಾಲಿಕೆ ಶೇ. 98.41, ಶಹಾಬಾದ್ ತಾಲ್ಲೂಕು ಶೇ. 99.18, ಯಡ್ರಾಮಿ ಶೇ. 99.28, ಗುರುಮಿಟಕಲ್ ಶೇ. 99.42, ಯಾದಗಿರಿ ತಾಲ್ಲೂಕು ಶೇ. 99.80, ಶಹಾಪೂರ ತಾಲ್ಲೂಕು ಶೇ. 99.62, ಶೋರಾಪುರ ಶೇ. 99.75 ಹಾಗೂ ಹುಣಸಗಿ ತಾಲ್ಲೂಕಿನಲ್ಲಿ ಶೇ. 99.73 ರಷ್ಟು ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.