ಕಲಬುರಗಿ: ಕೇಂದ್ರ ಸರಕಾರ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಿದ ಹಿನ್ನೆಲೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ ವತಿಯಿಂದ ರೈತರ ಗೆಲುವಿನ ಹೋರಾಟದ ವಿಜಯೋತ್ಸವ ಆಚರಿಸಲಾಯಿತು.
ನಾಯಕ ಮಾಜಿ ಶಾಸಕ ಬಿ ಆರ್ ಪಾಟೀಲ, ಹೋರಾಟಗಾರರಾದ ಎಚ್ ವಿ ದಿವಾಕರ್, ಸಾಹಿತಿ ಹೋರಾಟಗಾರ್ತಿ ನೀಲಾ ಕೆ, ಉಮಾಪತಿಮಾಲಿ ಪಾಟೀಲ, ಗಣಪತರಾವ ಮಾನೆ, ಎ.ಬಿ ಹೊಸಮನಿ, ವಿ.ಜಿ ದೇಸಾಯಿ, ಮಹೇಶ ಎಸ್ ಬಿ ಸೇರಿದಂತೆ ಇತರರಿದ್ದರು.