ಕಾನೂನನ್ನು ಪಾಲಿಸಿದರೆ ನೆಮ್ಮ ಜೀವನ ನಡೆಸಲು ಸಾಧ್ಯ: ಸಂತೋಷ ಹಳ್ಳೂರ್

0
63

ಶಹಾಬಾದ: ಕಾನೂನನ್ನು ಯಾರು ಗೌರವಿಸಿ, ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸುತ್ತಾರೋ ಅವರು ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ನಗರ ಪೊಲೀಸ್ ಠಾಣೆಯ ಪಿಐ ಸಂತೋಷ ಹಳ್ಳೂರ್ ಹೇಳಿದರು.

ಅವರು ಸೋಮವಾರ ನಗರದ ಶಿವಯೋಗೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಕಾನೂನು ಅರಿವು ಹಾಗೂ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಕಾನೂನುಗಳನ್ನು ಇನ್ನೊಬ್ಬರ ಒತ್ತಾಯಕ್ಕಾಗಿ ಆಗಲಿ, ಪೊಲೀಸರಿಗೆ ಭಯಪಟ್ಟು ಪಾಲಿಸುವುದಲ್ಲ.ಅದು ನಿಮ್ಮ ನಮ್ಮ ಒಳ್ಳೆಯದಕ್ಕಾಗಿ ಇದೆ.ಎಲ್ಲರ ಸುರಕ್ಷತೆ, ಸಮಾಜದಲ್ಲಿ ಶಾಂತಿ ಕಾಪಾಡಲು ಕಾನೂನುಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ತಂತ್ರಜ್ಞಾನ ಬೆಳೆದಿದ್ದು ಶಾಲಾ-ಕಾಲೇಜು ಹಂತದ ಮಕ್ಕಳ ಬೆರಳ ತುದಿಯಲ್ಲೇ ಎಲ್ಲಾ ಮಾಹಿತಿಗಳು ಸಿಗುತ್ತಿದ್ದು, ಇದು ತಮ್ಮ ಜ್ಞಾನದ ಬೆಳವಣಿಗೆಗೆ ಎಷ್ಟು ಸಹಕಾರಿಯೋ, ಹಾದಿ ತಪ್ಪಲು ಅಷ್ಟೇ ಕಾರಣವಾಗುತ್ತಿದೆ.ವಿಜ್ಞಾನ ತಂತ್ರಜ್ಞಾನವನ್ನು ವಿದ್ಯಾರ್ಜನೆಗೆ ಬಳಸಿಕೊಂಡವರು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದರೇ, ಅದನ್ನು ದುರ್ಬಳಕೆ ಮಾಡಿಕೊಂಡವರು ತಪ್ಪು ಮಾಡಿ ಕಾನೂನಿನ ಕುಣಿಕೆಗೆ ಸಿಲುಕಿ ನಲಗುತ್ತಿದ್ದಾರೆ ಎಂದರು.

ಪಿಎಸ್‌ಐ ಗಂಗಮ್ಮ ಮಾತನಾಡಿ, ಎಲ್ಲಿಯೇ ಆಗಲಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುವುದು ಕಂಡು ಬಂದರೆ ಯಾವುದಕ್ಕೂ ಭಯ ಪಡದೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ.ಅಲ್ಲದೇ ಯಾರೇ ಅಪರಿಚಿತರು ಕರೆದಾಗ ಹೋಗುವುದು, ಅವರೊಂದಿಗೆ ಮಾತನಾಡುವುದು ತಪ್ಪು. ಅದರಿಂದ ದೂರವಿರಿ.ಆದಷ್ಟು ಒಂಟಿಯಾಗಿ ಬರದೇ ಸಮೂಹದೊಂದಿಗೆ ಶಾಲಾ-ಕಾಲೇಜಿಗೆ ಬರುವುದನ್ನು ರೂಢಿಸಿಕೊಳ್ಳಿ. ಹಬ್ಬ ಹರಿದಿನ ಹಾಗೂ ಸಮಾರಂಭಗಳಿಗೆ ಹೋಗುವಾಗ ಆದಷ್ಟು ಬೆಲೆ ಬಾಳುವ ಆಭರಣಗಳನ್ನು ಹಾಕಿಕೊಳ್ಳದೇ ಇರುವುದು ಸೂಕ್ತ. ಒಂದು ವೇಳೆ ಅನಿವಾರ್ಯತೆ ಇದ್ದಲ್ಲಿ ನಿಮ್ಮ ಕುಟುಂಬ ಸದಸ್ಯರೊಂದಿಗೆ ತೆರಳಬೇಕು.ಆದಷ್ಟು ತಮ್ಮ ತಮ್ಮ ಸುರಕ್ಷತೆ ಕಡೆಗೂ ಹೆಚ್ಚಿನ ಗಮನ ವಹಿಸುವುದಲ್ಲದೇ ಕಾನೂನನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಶಾಂತಿ ನಿರ್ಮಾಣ ಮಾಡಲು ಎಲ್ಲರ ಸಹಕಾರ ಮುಖ್ಯ ಎಂದರು.

ದಿಲೀಪ ಸಾಕ್ರೆ ಮಾತನಾಡಿ, ಯುವ ಸಮೂಹ ಮೋಜುಮಸ್ತಿಯ ಗೀಳಿಗೆ ಬಿದ್ದು, ಕಾನೂನು ಪರಿಪಾಲನೆಯ ಅರಿವಿಲ್ಲದೆ ಜೀವನ ಹಾಳು ಗೆಡವಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ನಮ್ಮದೇಶದ ಕಾನೂನಿಗೆ ಗೌರವಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು.ಸಮಾಜದಲ್ಲಿ ಅಪರಾಧ ಚಟುವಟಿಕೆ ನಡೆಯುವ ಬಗ್ಗೆ ಸಾರ್ವಜನಿಕರುಜಾಗೃತೆ ವಹಿಸಿ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು . ಅಪರಾದ ನಡೆಯುವ ಮುನ್ನವೇಜಾಗೃತಿ ಮೂಡಿಸುವ ಕಾರ್ಯಕ್ರಮವೇ ಅಪರಾದ ತಡೆ ಮಾಸಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಶಿವಯೋಗೇಶ್ವರ ಪ್ರೌಢಶಾಲೆಯ ಮುಖ್ಯಗುರು ಶಿವಯೋಗಿ ಕಟ್ಟಿಮನಿ, ಸುಧಾಬಾಯಿ ಕುಲಕರ್ಣಿ, ಸುರೇಶ ಕುಲಕರ್ಣಿ, ಗಣೇಶ ಜಾಯಿ,ನಾಗವೇಣಿ ಕಂಬಾನೂರ, ಸವಿತಾ.ಆರ್, ಸುನೀತಾ ಬಿರಾದಾರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here