ಪತ್ರಕರ್ತರ ಸಮಸ್ಯೆಗಳನ್ನು ಸರಕಾರ ಗಂಭಿರವಾಗಿ ಆಲಿಸಲಿ: ಹನುಮೇಶ ಯಾವಗಲ್

0
91

ಸುರಪುರ: ತಾಲ್ಲೂಕಿನ ಕಕ್ಕೇರಾ ಪಟ್ಟಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉದ್ಘಾಟನೆ ಹಾಗು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಂiiನ್ ರಾಜ್ಯ ಉಪಾಧ್ಯಕ್ಷ ಹನುಮೇಶ ಯಾವಗಲ್ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇಂದು ಪತ್ರಕರ್ತರು ಅನೇಕ ಸಮಸ್ಯೆಗಳನ್ನು ಹೆದರಿಸುತ್ತಿದ್ದಾರೆ.ಬೇರೆಯವರ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವ ಪತ್ರಕರ್ತರು ತಾವೆ ಅನೇಕ ಸಮಸ್ಯೆಗಳಿಂದ ನರಳುತ್ತಿದ್ದಾರೆ.ಆದರೆ ಸರಕಾರ ಇವರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಉಪಾಧ್ಯಕ್ಷ ಹನುಮೇಶ ಯಾವಗಲ್ ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಕೊಡೆಕಲ್ಲಿನ ದುರುದುಂಡೇಶ್ವರ ಮಠದ ಶಿವಕುಮಾರ ಸ್ವಾಮಿಜಿ ಮಾತನಾಡಿ,ಪತ್ರಕರ್ತರೆಂದರೆ ಸಮಾಜಕ್ಕಾಗಿ ದುಡಿಯುವವರೆಂದು ಗೊತ್ತಿತ್ತು.ಆದರೆ ಅವರಿಗು ಸಮಸ್ಯೆಗಳಿವೆ ಎನ್ನುವುದು ಇಂದು ಅರಿವಿಗೆ ಬಂದಿದೆ.ಎಲ್ಲರು ಪತ್ರಕರ್ತರ ಸಮಸ್ಯೆಗಳ ನಿವಾರಣೆಗೆ ಧ್ವನಿ ಎತ್ತಬೇಕೆಂದರು.
ಹೋರಾಟಗಾರ ಶರಣು ಗದ್ದುಗೆ ಮಾತನಾಡಿ,ಪತ್ರಕರ್ತರು ಸಮಾಜದ ಬೇಡಿಕೆಗಳಿಗೆ ಬರವಣಿಗೆ ಮೂಲಕ ಹೋರಾಟ ಮಾಡುತ್ತಾರೆ.ಆದರೆ ಅವರ ಹೋರಾಟಗಳಿಗೆ ಜನಸಾಮಾನ್ಯರು ಧ್ವನಿ ಎತ್ತಬೇಕು.ಅಲ್ಲದೆ ಹಲವಾರು ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸರಕಾರ ಮನೆಗಳ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು.ಅಲ್ಲದೆ ಪತ್ರಕರ್ತರ ಮೇಲೆ ಹಲ್ಲೆಗಳು ನಿರಂತರವಾಗಿ ನಡೆಯುತ್ತಿವೆ.ಇದನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು.ಸರಕಾರದ ನಾಲ್ಕನೆ ಅಂಗದಂತೆ ಕೆಲಸ ಮಾಡುವ ಮಾದ್ಯಮ ರಂಗದ ಬಗ್ಗೆ ಸರಕಾರದ ನಿರ್ಲಕ್ಷ್ಯ ಸರಿಯಲ್ಲ.ಇದರ ವಿರುಧ್ಧ ಎಂತಹ ಹೋರಾಟಕ್ಕು ಸಿದ್ಧ ಎಂದರು.

ತಹಸೀಲ್ದಾರ ಸುರೇಶ ಅಂಕಲಗಿ ಮಾತನಾಡಿ,ಪತ್ರಕರ್ತರ ಯಾವುದೆ ಬೇಡಿಕೆಗಳು ನಮ್ಮ ಗಮನಕ್ಕೆ ತಂದರೆ ಅವುಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಮಹೇಶ ಕಲಾಲ,ಲಕ್ಷ್ಮೀಕಾಂತ ಕುಲಕರ್ಣಿ ಹಾಗು ಕೆಜೆಯು ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂದರ್ಭದಲ್ಲಿ ಹೂಗಾರ ಸ್ಮಾರಕ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಕಾಂತ ಕುಲಕರ್ಣಿಗೆ ಹಾಗು ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಹಾಗು ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಸಲಾಯಿತು.

ವೇದಿಕೆ ಮೇಲೆ ಸೋಮನಾಥ ದೇವಸ್ಥಾನದ ಶ್ರೀ ನಂದಣ್ಣ ಪೂಜಾರಿ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕಾಧ್ಯಕ್ಷ ಪವನ ಕುಲಕರ್ಣಿ,ಮುಖಂಡ ಹನುಮಂತ್ರಾಯ ಜಹಾಗೀರದಾರ,ಸಪಪೂ ಕಾಲೇಜು ಪ್ರಾಂಶುಪಾಲ ಭೀಮಣ್ಣ ಬೋಸಗಿ,ಕೆಜೆಯು ಜಿಲ್ಲಾ ಗೌರವಾಧ್ಯಕ್ಷ ವೀರಣ್ಣ ಕಲಕೇರಿ,ಪತ್ರಕರ್ತರಾದ ನಾಗಪ್ಪ ಮಾಲಿಪಾಟೀಲ, ನಜ್ಮಿಯಾ,ಜಗನ್ನಾಥ ಪೂಜಾರ,ಮಂಜುನಾಥ ಕುಂದರಗಿ,ವೈದ್ಯಾಧಿಕಾರಿ ಸಯ್ಯದ ಮೋಸಿನ್ ನಜಿಮಾ, ಶರಣು ಸೋಲಾಪುರ,ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ನಾನಾಗೌಡ ವೇದಿಕೆ ಮೇಲಿದ್ದರು.ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಅಮರಲಿಂಗೇಶ್ವರ ಸಂಗೀತ ಶಾಲಾ ಬಳಗದಿಂದ ಸಂಗೀತ ಕಾರ್ಯಕ್ರಮ ಜರುಗಿತು.ರಹೀಮ ಹವಲ್ದಾರ ನಿರೂಪಿಸಿದರು,ರಾಜು ಕುಂಬಾರ ಸ್ವಾಗತಿಸಿದರು,ಮಹಾಂತೇಶ ಹೊಗರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಗವಿಸಿದ್ದೇಶ ಹೊಗರಿ,ಬಸವರಾಜ ಅಂಗಡಿ,ರವಿರಾಜ ಕಂದಳ್ಳಿ,ಜಯಚಾರ್ಯ ಪುರೋಹಿತ, ಪರಶುರಾಮ ಮಲ್ಲಿಬಾವಿ,ಮಲ್ಲು ಬಾದ್ಯಾಪುರ,ಪುರುಶೋತ್ತಮ ದೇವತ್ಕಲ್ ಸೇರಿದಂತೆ ಕೆಂಭಾವಿ, ಹುಣಸಗಿ, ಕೊಡೇಕಲ್,ಮುದ್ದೇಬಿಹಾಳ,ಸುರಪುರ ಮತ್ತಿತರೆ ಕಡೆಗಳಲ್ಲಿನ ಅನೇಕ ಜನ ಪತ್ರಕರ್ತರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here