ಸುರಪುರ: ಕಳೆದ ನಾಲ್ಕುದಿನಗಳಿಂದ ಸುಪ್ರಸಿದ್ದ ರುಕ್ಮಾಯಿ ಪಾಂಡುರಂಗ ದೇವಸ್ಥಾನದಲ್ಲಿ ಜರುಗಿದ ಆಷಾಡ ಉತ್ಸವಕ್ಕೆ ಸೋಮವಾರ ರಂಗು ಪಡೆದುಕೊಂಡಿತು. ಉತ್ಸವದ ಮುಖ್ಯ ಆಕರ್ಷಣೆಯಾದ ಗೋಪಾಳ ಕಾವಲಿ ವೀಕ್ಷಸಲು ನೂರಾರು ಭಕ್ತರು ಮತ್ತು ಮಕ್ಕಳು ನೆರೆದಿದ್ದರು.
ಬೆಳ್ಳಿಗ್ಗೆ ವಿಶೇಷ ಪೊಜೆ ನಡೆದ ನಂತರ ಶ್ರೀ ರುಕ್ಮಾಯಿ ಪಾಂಡುರಂಗ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿ ಯಲ್ಲಿ ಹೊತ್ತು ನಗರದ ಪ್ರದಕ್ಷಿಣೆ ಮಾಡಿದರು ಮುಖ್ಯ ಅರ್ಚಕ ಗುರುರಾಜ ಪಾಲ್ಮೂರ ಪಲ್ಲಕ್ಕಿಯ ಪೂಜಾ ಕಂಕೈರ್ಯ ನೇರವೆರಿಸಿದರು. ಪ್ರತಿ ಮನೆ ಮುಂದೆ ಮಹಿಳೆಯರು ಉತ್ಸವ ಮೂರ್ತಿಗೆ ಕಾಯಿ,ಕರ್ಪೂರ ಅರ್ಪಿಸಿ ಭಕ್ತಿ ಸರ್ಮಪಿಸಿದರು. ಮೆರವಣಿಗೆಯೂದ್ದಕ್ಕೂ ಭಜನೆ ಆಕರ್ಷಕವಾಗಿತ್ತು. ಭಜನೆಗೆ ತಕ್ಕಂತೆ ಚಿಣ್ಣರ ಕುಣಿತವು ನೋಡುಗರ ಗಮನ ಸೆಳೆದವು ಹರೇ ವಿಠಲನ ಮಂತ್ರಘೋಷ ಮುಗಿಲು ಮುಟ್ಟಿತ್ತು.
ಪಲ್ಲಕ್ಕಿ ಉತ್ಸವ ಮತ್ತೆ ದೇವಸ್ಥಾನಕ್ಕೆ ಬಂದ ನಂತರ ವಿಶೇಷ ಮಂಗಳಾರತಿ ನೆರವೇರಿಸಲಾಯಿತು. ಬಣ್ಣಗಳಿಂದ ಚಿತ್ತರಿಸಿದ ಮಡಿಕೆಯನ್ನು ಪೂಜಿಸಿ ದೇವಸ್ಥಾನದ ನವರಂಗದಲ್ಲಿ ಇಡಲಾಯಿತು. ಮಹಿಳೆಯರು ಆಗಮಿಸಿ ಮೊಸರು ಮಡಿಕೆಯಲ್ಲಿ ಭಕ್ತಿಯಿಂದ ದೇವರಿಗೆ ಮೊಸರು ಹಾಕುವ ದೃಷ್ಯ ಕಂಡುಬಂತು. ನಂತರ ಮಡಿಕೆನ್ನು ದೇವಸ್ಥಾನದ ಮುಂದುಗಡೆ ಎತ್ತರದ ಸ್ಥಳದಲ್ಲಿ ಎರಡು ಕಡೆಯಿಂದ ಹಗ್ಗಬಿಗಿದು ಹಿಡಿಯಲಾಯಿತು ಗೋಪಾಳ ಕಾವಲಿಗೆ ಮುಂಚೆಯೆ ಯುವಕರು ರಂಗಿನಾಟ ಆಡುತ್ತಿದ್ದರು. ಸೂಮಾರು ಅರ್ಧಗಂಟೆಗಳ ಕಾಲ ಯುವಕರು ಒಬ್ಬರ ಮೇಲೂಬ್ಬರ ಹತ್ತಿ ಮಡಿಕೆ ಒಡೆಯಲು ಪ್ರಯತ್ನಿಸಿ ಮಡಿಕೆಯನ್ನು ಒಡೆಯುವ ದೃಷ್ಯ ನೇರೆದಿದ್ದ ಭಕ್ತಾದಿಗಳ ಮನಸೋರ್ಯಗೊಂಡಿತು.
ನಂತರ ದೇವರ ಉತ್ಸವ ಮೂರ್ತಿಗಳಿ ಪುಷ್ಕರ್ಣೀಯಲ್ಲಿ ಅವಭೃತ ಸ್ನಾನ ಕಾರ್ಯಕ್ರಮಗಳು ಜರುಗಿದವು.
ಶ್ರೀಪಾದಭಟ್ಟ್ ಗಡ್ಡದ್, ತಿಮ್ಮಣ್ಣ ಗುತ್ತೇದಾರ, ಶ್ರೀನಿವಾಸ ದೇವರು, ರಾಘವೇಂದ್ರ ಭಕರಿ, ಶ್ರೀಪಾದ ದೇಶಪಾಂಡೆ, ಶ್ರೀನಿವಾಸ ಪ್ರತಿನಿಧಿ, ನಗರಸಭೆ ಮಾಜಿಸದಸ್ಯ ಪಾರಪ್ಪ ಗುತ್ತೆದಾರ, ರವಿ ಗುತ್ತೆದಾರ, ಪ್ರಕಾಶ ಕುಲ್ಕರ್ಣೀ, ಪ್ರವೀಣ ಕುಲ್ಕರ್ಣಿ, ಸೂರಜ್ ವರ್ಮಾ, ಶ್ರೀನಿವಾಸ ದೇವಡಿ, ಪ್ರಕಾಶ ಕುಲ್ಕರ್ಣಿ, ರಮೇಶ ಕುಲ್ಕರ್ಣಿ, ಕೃಷ್ಣಪಾಟಿಲ್, ಅರುಣ ಜೈನ್, ವಿರೇಶ ಕೋಸ್ಗಿ, ವೆಂಕಟೇಶ ಹುದ್ದಾರ, ಪವನ ವಿಶ್ವಕರ್ಮಾ, ಶ್ರೀಕರ ಐ.ಜಿ, ಮಿಥುನ ಬಾಡಿಹಾಳ, ಕೇಶವಾಚಾರ ಗುಡಿ, ಶಿವುಕುಮಾರ ಬಿರಾದರ್, ವಿಶಾಲ ಮಸ್ಕಿ, ಅವಿನಾಶ ಕುಲ್ಕರ್ಣಿ, ರಾಘವೇಂದ್ರ ಗುತ್ತೆದಾರ, ಸೇರಿದಂತೆ ಇತರರಿದ್ದರು.