ಅಂಗವಿಕಲರ ಕುಂದು ಕೊರತೆಗಳನ್ನು ಪರಿಹರಿಸಲು ಮನವಿ

0
76

ಶಹಾಬಾದ:ವಿಕಲಚೇತನರ ಕುಂದು ಕೊರತೆಗಳನ್ನು ನಿವಾರಿಸುವ ಕುರಿತು ಬೆಳಗಾವಿಯ ಅಧಿವೇಶನದಲ್ಲಿ ಚರ್ಚಿಸಿ ಪರಹಾರ ಒದಗಿಸಬೇಕೆಂದು ಆಗ್ರಹಿಸಿ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಮಲ್ಲೇಶಿ ಭಜಂತ್ರಿ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಆಗ್ರಹಿಸಿ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮನವಿ ಪತ್ರ ಸಲ್ಲಿಸಿದರು.

ಗ್ರಾಪಂ, ತಾಪಂ, ಜಿಪಂಗಳಿಂದ ಅಂಗವಿಕಲರಿಗೆ ನೀಡುವ ೫% ಅನುದಾನವನ್ನು ಈ ಹಿಂದೆ ವಿತರಿಸಿದಂತೆ ವಿತರಿಸಬೇಕು.ಅಲ್ಲದೇ ಮೂಲಸೌಲಭ್ಯ ಒದಗಿಸಬೇಕು. ಅಂಗವಿಕಲರಿಗೆ ಯುಡಿಐಡಿ ಕಾರ್ಡ ಸುಲಭವಾಗಿ ಸಿಗುವಂತೆ ಮಾಡಬೇಕು.ಅಂಗವಿಕಲತೆ ೪೦% ಇದ್ದವರಿಗೆ ಮಾಸಿಕ ಭತ್ಯೆ ೩ ಸಾವಿರ ಹಾಗೂ ೭೫% ಇದ್ದವರಿಗೆ ೫ ಸಾವಿರಗಳವರೆಗೆ ಹೆಚ್ಚಿಸಬೇಕು.ರಾಜ್ಯದಲ್ಲಿ ಅಂಗವಿಕಲರ ಮಾಶಾಸನ ನಿಲ್ಲಿಸಲಾಗಿದ್ದು, ಸರ್ಕಾರ ಮರು ಆದೇಶ ಮಾಡಿ ಮಾಶಾಸನ ಸಿಗುವಂತಾಗಬೇಕು. ವಿಕಲಚೇತನರಿಗೆ ವಿಶೇಷ ಪ್ಯಾಕೇಜ್ ಅನುದಾನ ಬಿಡುಗಡೆ ಮಾಡಿ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಬಸವರಾಜ ಕುಂಬಾರ ತೊನಸನಹಳ್ಳಿ, ಪ್ರಕಾಶ ವಾಲೀಕಾರ, ಸುಭಾಷಚಂದ್ರ ಗೋಳಾ(ಕೆ), ಬಸವರಾಜ ಶಿವರಶರಣಪ್ಪ ,ವಿಜಲಕ್ಷ್ಮಿ ವೀರಶೆಟ್ಟಿ, ಲಕ್ಷ್ಮಿಕಾಂತ ಗೊಬ್ಬೂರಕರ್, ಬಬಿತಾ ರಾಠೋಡ,ಮಲ್ಲಿಕಾರ್ಜುನ ಹಳ್ಳಿ, ಲಕ್ಷ್ಮಿಕಾಂತ ವಿಠ್ಠಲ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here