ಕಲಬುರಗಿ: ಜೈ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

0
15

ಕಲಬುರಗಿ: ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯವರು ಕನ್ನಡ ಧ್ವಜವನ್ನು ಸುಟ್ಟುಹಾಕಿದ ಕೃತ್ಯವನ್ನು ಜೈ ಕನ್ನಡಿಗರ ರಕ್ಷಣಾ ವೇದಿಕೆ ಖಂಡಿಸಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿದ ವೇದಿಕೆಯಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಧ್ವಜ ಸುಟ್ಟ ಪುಂಡರನ್ನು ಪತ್ತೆಮಾಡಿ ಅವರನ್ನು ಗಡಿಪಾರು ಮಾಡಬೇಕು.ಇಂತಹ ಪುಂಡಾಟಿಕೆಯಿಂದ ಭಾಷೆಭಾಷೆಗಳ ನಡುವೆ ವೈಮನಸ್ಸು ಮೂಡುತ್ತಿದೆ.ಇಂತಹ ಕೃತ್ಯಗಳನ್ನು ತಡೆಯಲು ಸರಕಾರ ಮುಂದಾಗದಿದ್ದರೆ ಉಗ್ರ ಹೋರಾಟ ನಡೆಸಲಾಗುವದು ಎಂದು ಪ್ರತಿಭಟನಾಕಾರರು ಹೇಳಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಸಚಿನ್ ಫರತಾಬಾದ, ಕಾಶೀನಾಥ ಮಾಳಗಿ, ಸುರೇಶ ಹನಗುಡಿ, ಅಂಬು ಮಸ್ಕಿ, ಅಕ್ಷಯ, ರಾಹುಲ ಫರತಾಬಾದ, ಅರ್ಜುನ ಸಿಂಗೆ, ಸುನೀಲ ಜಾಧವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here