ಸ್ಲಂಗಳಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ವಿತರಿಸಲು ಆಗ್ರಹ

0
13

ಕಲಬುರಗಿ; ಸಿದ್ದಾರ್ಥ ನಗರ ಕೊಳಚೆ ಪ್ರದೇಶಕ್ಕೆ ಹಕ್ಕು ಪತ್ರ , ಪರಿಚಯ ಪತ್ರ ಬಿದ್ದಾಪೂರ ಕೋಳಚೆ ಪ್ರದೇಶವೆಂದು ಘೋಷಿಸಲು, ಈಗಾಗಲೇ ಸ್ಲಂ ಘೋಷಣೆಗೆ ಅರ್ಜಿ ಹಾಕಿದ ಸ್ಲಂಗಳನ್ನು ಸರ್ವೆ ಮಾಡಲು ನಗರದಲ್ಲಿನ ಹಕ್ಕು ಪತ್ರಗಳ ಸಮೀಕ್ಷೆ ಕಾಲಮೀತಿಯಲ್ಲಿ ಪೂರ್ಣಗೊಳಿಸಿ ಫಲಾನುಭವಿಗೆ ತಲುಪಿಸಲು ಪ್ರಧಾನ ಮಂತ್ರಿ ಅವ್ಹಾಸ್ ನಗರ ಯೋಜನೆಯ ಘಟಕದ ವೆಚ್ಚವನ್ನು ೬ ಲಕ್ಷಕ್ಕೆ ಹೆಚ್ಚಿಸಲು ಸ್ಲಂ ಜನಾಂದೋಲನಾ-ಕರ್ನಾಟಕ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟ ನೇತೃದ್ವದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಸಹಾಯಕ ಕಾರ್ಯಪಾಲಕ ಅಭೀಯಂತರಿಗೆ ಮನವಿ ಸಲ್ಲಿಸಲಾಯಿತು.

ಸಿದ್ದಾರ್ಥ ನಗರ ಕೊಳಚೆ ಪ್ರದೇಶವು ಸ್ಲಂ ಕಾಯ್ದೆ ೩ ಪಿ ಘೋಷಣೆಯಾಗಿ ಸುಮಾರು ೫ ರಿಂದ ೬ ವರ್ಷಗಳು ಕಳೆದರು, ಸ್ಥಳಿಯವಾಗಿ ವಾಸಮಾಡುವ ಅರ್ಧದಷ್ಟು ಜನರಿಗೆ ಪರಿಚಯ ಪತ್ರ, ಹಕ್ಕು ಪತ್ರ ನೀಡಿರುವುದಿಲ್ಲ. ಹಲವಾರು ಬಾರಿ ಮನವಿ ಪತ್ರ ಹಾಗೂ ಖುದ್ದಾಗಿ ಭೇಟಿಮಾಡಿದರು ಸಹಿತ ಇದುವರೆಗೂ ಪರಿಚಯ ಪತ್ರ ಹಕ್ಕು ಪತ್ರ ನೀಡಿರುವುದಿಲ್ಲ ಈ ಕೂಡಲೇ ಇವರಿಗೆ ಈ ಪತ್ರಗಳು ನೀಡಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಕಳೆದ ೫ ವರ್ಷಗಳಿಂದ ಬಿದ್ದಾಪೂರ ಕೊಳಚೆ ಪ್ರದೇಶವು ಸ್ಲಂ ಕಾಯ್ದೆ ೩ ಪಿ ಅಡಿಯಲ್ಲಿ ಸ್ಲಂ ಘೋಷಣೆಗೆ ಒತ್ತಾಯಿಸುತ್ತಾ ಬಂದರು ಕೂಡಾ ಅಧಿಕಾರಿಗಳ ನಿರ್ಲಕ್ಷತನದಿಂದ ಸ್ಲಂ ಘೋಷಣೆ ಮಾಡಿರುವುದಿಲ್ಲ. ಆದ್ದರಿಂದ ಈ ಕೂಡಲೇ ಸ್ಲಂ ಕಾಯ್ದೆ ೩ ಪಿ ಅಡಿಯಲ್ಲಿ ಸ್ಲಂ ಪ್ರದೇಶವೆಂದು ಈ ಕೂಡಲೇ ಘೋಷಣೆ ಮಾಡಿ ಅವರಿಗೆ ಹಕ್ಕು ಪತ್ರ ಈ ಕೂಡಲೇ ವಿತರಿಸಬೇಕು ಎಂದರು.

ಈಗಾಗಲೇ ಹೊಸ ಅಘೋಷಿತ ಸ್ಲಂ ಪ್ರದೇಶಗಳಾದ ಹೀರಾನಗರ, ತಾರಫೈಲ್ ಉತ್ತರ, ಗುಲ್ಲಾಬಾವಾಡಿ ಸ್ಲಂ ಪ್ರದೇಶಗಳನ್ನು ೩ ಪಿ ಅಡಿಯಲ್ಲಿ ಸ್ಲಂ ಘೋಷಿಣೆಗೆ ಅರ್ಜಿ ಸಲ್ಲಿಸಿ ಸುಮಾರು ತಿಂಗಳು ಕಳೆದರೂ ಕೂಡಾ ಇಲ್ಲಿಯವರೆಗೆ ಸರ್ವೆ ಕಾರ್ಯ ಕೈಗೊಂಡಿಲ್ಲಾ. ಈ ಕೂಡಲೇ ಈ ಪ್ರದೇಶಗಳನ್ನು ಸರ್ವೆ ಮಾಡಬೇಕು. ಈಗಾಗಲೇ ಕಲಬುರಗಿ ನಗರದಲ್ಲಿ ಹಲವಾರು ಸ್ಲಂ ಪ್ರದೇಶಗಳಲ್ಲಿ ಹಕ್ಕು ಪತ್ರಕ್ಕಾಗಿ ಸರ್ವೆ ಕಾರ್ಯ ನಡೆಯುತ್ತಿದ್ದು. ಇದು ತೀವ್ರವಾಗಿ ನಿಧಾನಗತಿಯಲ್ಲಿ ನಡೆಯುತ್ತಿದ್ದೆ. ಕೆಲವೊಂದು ಸ್ಲಂ ಪ್ರದೇಶಗಳಲ್ಲಿ ಅರ್ಧ ಪ್ರಮಾಣದಲ್ಲಿ ಸರ್ವೆ ಕಾರ್ಯ ಮಾಡಿದ್ದು, ಆದ್ದರಿಂದ ಕಲಬುರಗಿ ನಗರದಲ್ಲಿನ ಎಲ್ಲಾ ಸ್ಲಂಗಳಲ್ಲಿ ಸರ್ವೆ ಕಾರ್ಯ ನಿಗಧಿ ಸಮಯದೊಳಗೆ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಬೇಕೆಂದು ಒತ್ತಾಯಿಸಿದರು.

ಈಗಾಗಲೇ ಕಲಬುರಗಿ ನಗರದಲ್ಲಿ ಪ್ರಧಾನ ಮಂತ್ರಿ ಆವ್ಹಾಸ್ ನಗರ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ವಂತಿಗೆ ಶುಲ್ಕ ಹಾಗೂ ಸಾಲ ಪ್ರಕ್ರಿಯೆಗಳು ಕುಂಟಿತಗೊಂಡಿದ್ದು, ಕಾಮಗಾರಿಯು ಇದುವರೆಗೂ ಪ್ರಾರಂಭಿಸಿಲ್ಲ ಹಾಗೂ ಘಟಕದ ವೆಚ್ಚವನ್ನು ರೂ ೬ ಲಕ್ಷಕ್ಕೆ ಹೆಚ್ಚಿಸಲು ನಾವುಗಳು ಕೋರುತ್ತೇವೆ. ಈ ಎಲ್ಲಾ ಬೇಡಿಕೆಗಳನ್ನು ಇಡೇರಿಸಬೇಕೆಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನಾ-ಕರ್ನಾಟಕ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟದ ಕಾರ್ಯದರ್ಶಿ ವಿಕಾಸ ಸವಾರಿಕರ್, ಮುಖಂಡರಾದ ಅಲ್ಲಮಪ್ರಭು ನಿಂಬರ್ಗಾ, ಯಮನಪ್ಪ ಪ್ರಸಾದ, ಗಣೇಶ ಕಾಂಬಳೆ, ಸುನಂದಬಾಯಿ ಅವರಾದಕರ್, ಅನೀತಾಬಾಯಿ ಪಟ್ಟೆದಾರ, ಬ್ರಹ್ಮಾನಂದ ಮಿಂಚಾ, ಅಶೋಕ ರಾಠೋಡ, ಪಂಡಿತ ಶರ್ಮಾ, ಕಮಲಭಾಯಿ ಮೊರೆ, ಬಾಬುರಾವ ದಂಡಿನಕರ್, ಶಾಮರಾವ ಸಿಂಧೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here