ಮಹಿಳೆಗೂ ಸಮಾನ ಹಕ್ಕುಗಳಿವೆ: ಡಾ.ನಿಶಾತ್ ಆರೀಫ ಹುಸ್ಸೇನಿ

0
111

ಕಲಬುರಗಿ: ಮಹಿಳೆ ಸ್ವತಂತ್ರಳು. ಅವಳಿಗೂ ಬದುಕಲು, ತನ್ನ ಕನಸುಗಳನ್ನು ಈಡೇರಿಸಲು ಸಮಾನ ಹಕ್ಕುಗಳಿವೆ. ತನಗೆ ಇಷ್ಟವಾದ ವೃತ್ತಿ ಆಯ್ಕೆಮಾಡುವ ಸ್ವತಂತ್ರ ಮತ್ತು ಅವಕಾಶಗಳು ಅವಳಿಗೆ ಸಿಗಬೇಕು ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲದ ಭಾಷಾ, ಕಲಾ, ಮಾನವಿಕತೆ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ನಿಕಾಯರಾದ ಡಾ. ನಿಶಾತ್ ಹುಸ್ಸೇನಿ ಹೇಳಿದರು.

ಖಾಜಾ ಬಂದಾನವಾಜ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಮಹಿಳಾ ಲೈಂಗಿಕ ಕಿರುಕುಳ ವಿಷಯ ಕುರಿತ ಅಭಿಶಿಕ್ಷಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

Contact Your\'s Advertisement; 9902492681

ಮಹಿಳೆ ತನ್ನ ಜೀವನದನಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಅವಳಿಗೆ ಮನೆ ಮತ್ತು ಕೆಲಸದ ಸ್ಥಳದಲ್ಲಿ ಸಮಾನ ಅವಕಾಶ ಮತ್ತು ಸಮಾನ ಗೌರವ ದೊರೆಯಬೇಕು. ಪುರುಷ ಕೂಡ ಮನೆಕೆಲಸದ ನಿರ್ವಹಣೆಯಲ್ಲಿ ಸಮಭಾಗಿಯಾಗಬೇಕು. ತನ್ನ ಮೇಲೆ ಜರಗುವ ಲೈಂಗಿಕ ದೌರ್ಜನ್ಯ ವಿರುದ್ಧ ಹೋರಾಡಲು ಸ್ವಯಂಪ್ರೇರಿತವಾಗಿ ಮಹಿಳೆ ಮುಂದೆ ಬರಬೇಕು. ತನ್ನಲ್ಲಿರುವ ಸಾಮರ್ಥ್ಯವನ್ನು ಅವಳು ಗುರುತಿಸಿಕೊಂಡು ಪ್ರಗತಿ ಪಡೆಯಬೇಕು ಕರೆ ನೀಡಿದರು.

ಇತ್ತೀಚೆಗೆ ಮಹಿಳೆಯರ ಕಾರ್ಯನಿರ್ವಹಿಸುವ ಸ್ಥಳದಲ್ಲಿ ಹೆಚ್ಚಾಗುತ್ತಿರುವ ಕಿರುಕುಳಗಳು ಅವರ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನುಂಟು ಮಾಡುತ್ತವೆ. ಶಾಲಾ ಕಾಲೇಜುಗಳಲ್ಲಿ ಸ್ವಯಂ ರಕ್ಷಣೆ ತರಬೇತಿ ದೊರೆತಲ್ಲಿ ಅವಳ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದು ಅಭಿಪ್ರಾಯ ಪಟ್ಟರು.

ಡಾ. ಶಕೀಲ, ಸಹಾಯಕ ಪ್ರಾದ್ಯಾಪಕರು, ಆಹಾರ ಮತ್ತು ಪೋಷಣಾಶಾಸ್ತ್ರ ವಿಭಾಗ, ಇವರು ಮಹಿಳೆ ತನ್ನ ಮೇಲೆ ದೌರ್ಜನ್ಯವೆಸಗಿದರ ವಿರುದ್ಧ ಮಾತನಾಡದೇ ಸುಮ್ಮನೇ ಕೂರುವುದು ಸರಿಯಲ್ಲ. ಅವಳು ಅದನ್ನು ಪ್ರತಿರೋಧಿಸಬೇಕು. ಅವಳಿಗೆ ಹೆದರುವ ಅವಶ್ಯಕತೆ ಇಲ್ಲ. ಅಪರಾಧ ನಡೆದ ನಂತರ ಏನು ಮಾಡಬೇಕು  ಎನ್ನುವ ಬದಲು ಅಪರಾಧ ನಡೆಯದಂತೆ ನೋಡಿಕೊಳ್ಳುವುದು ಮುಖ್ಯ ಎಂದರು.

ಗಣಿತ ವಿಭಾಗ ಸಹಾಯಕ ಪ್ರಾದ್ಯಾಪಕರಾದ ಸನಾ ಇಜಾಜ್ ಮಾತನಾಡಿ, ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯ ಮಹತ್ವವನ್ನು ಒತ್ತಿ ಹೇಳಿದರು. ಕುಟುಂಬದ ಸಮಸ್ತ ಜವಾಬ್ದಾರಿ ಹೊತ್ತು ಹಗಲಿರುಳು ಎನ್ನದೇ ಕಷ್ಟಪಡುವಳು ಹೆಣ್ಣು. ಅವಳ ಮೇಲೆ ಯಾವುದೇ ಅಪರಾಧ ಮತ್ತು ದೌರ್ಜನ್ಯ ಸಲ್ಲ ಎಂದು ನುಡಿದರು.

ಸಮೂಹ ಸಂವಹನ ಮತ್ತು ಮಾಧ್ಯಮ ಅಧ್ಯಯನ ವಿಭಾಗ ಸಹಾಯಕ ಪ್ರಾದ್ಯಾಪಕ ಡಾ. ಜಾವೇದ್ ಅಖ್ತರ್ ಮಾತನಾಡಿ ಎಲ್ಲ ಪುರುಷರಿಗೆ ಮಹಿಳೆಯರನ್ನು ಗೌರವಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿಗಳಾದ ಸನಾ ಮುಬಶೀರಾ, ಝಬ್ರೀನ ನಿಶತ್, ಗೌಸಿಯಾ, ಫರ್ಜಾನಾ, ಸೈಯದಾ ಐಮನ್, ಬರೀಹಾ, ಜುಬೈರ ಅಹ್ಮದ, ತೆಹಸೀನ ಬೆಗಂ, ಐಮನ್, ಫೈಜಾ, ಗೌಸಿಯಾ ಬೇಗಂ, ಪ್ರಿಯಾಂಕಾ ದೇವರ ಇವರೆಲ್ಲ ಲೈಂಗಿಕ ದೌರ್ಜನ್ಯದ ಅರ್ಥ, ವಿಧಗಳು, ಪರಿಣಾಮಗಳು, ಅವುಗಳನ್ನು ತಡೆಯಲು ಇರುವ ಕಾನೂನುಗಳ ಬಗ್ಗೆ ಮಾತನಾಡಿದರು.

ಪ್ರಾರಂಭದಲ್ಲಿ ಖುರಾನ್ ಪಾರಾಯಣವನ್ನು ವಿದ್ಯಾರ್ಥಿನಿಯರಾದ ಮಾರಿಯಾ ಮತ್ತು ಸುಮಯ್ಯಾ ಹಾಗೂ  ಜುಬೈರ್ ಅಹ್ಮದ ನಾತ ಅರ್ಪಿಸಿದರು. ಡಾ. ಆತಿಯಾ ಸುಲ್ತಾನಾ, ಸಹಾಯಕ ಪ್ರಾದ್ಯಾಪಕರು, ಇಂಗ್ಲೀಷ ವಿಭಾಗ ಇವರು ಅತಿಥಿಯರನ್ನು ಸ್ವಾಗತಿಸಿದರು. ಡಾ. ನಮ್ರತಾ ರಾವುತ, ಸಹಾಯಕ ಪ್ರಾದ್ಯಾಪಕರು, ಸಮೂಹ ಸಂವಹನ ಮತ್ತು ಮಾಧ್ಯಮ ಅಧ್ಯಯನ ವಿಭಾಗ ನಿರೂಪಿಸಿದರೆ, ಡಾ. ಜಾವೇದ್ ಅಖ್ತರ್, ಸಹಾಯಕ ಪ್ರಾದ್ಯಾಪಕರು, ಸಮೂಹ ಸಂವಹನ ಮತ್ತು ಮಾಧ್ಯಮ ಅಧ್ಯಯನ ವಿಭಾಗ, ವಂದಿಸಿದರು.

ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಾದ ಸಮೂಹ ಸಂವಹನ ಮತ್ತು ಮಾದ್ಯಮ ಅದ್ಯಯನ, ಇಂಗ್ಲೀಷ, ಉರ್ದು, ಜೈವಿಕ ತಂತ್ರಜ್ಞಾನ, ಪ್ರಾಣಿಶಾಸ್ತ್ರ, ಆಹಾರ ಮತ್ತು ಪೋಷಣಾಶಾಸ್ತ್ರ, ಭೌತಿಕ ಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಭಾಗಗಳ ಎಲ್ಲ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here