ಆರೋಗ್ಯವಂತ ಶಿಶು ದೇಶದ ಸಂಪತ್ತು: ಶಶಿಧರ್ ಬಳೆ ಕರೆ

0
52

ಕಿರ ಸಾವಳಗಿ: ಸಾಗನೂರು ಉಪಕೇಂದ್ರದ ಕಿರಿ ಸಾವಳಗಿ ಗ್ರಾಮದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಹಸರಗುಂಡಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೈಲಪ್ಪ ಪಟ್ಟದ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದ ಉದ್ದೇಶವನ್ನು ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೊಬ್ಬೂರು ಬಿ ಯ ಶಶಿಧರ್ ಬಳೆ ಮಾತನಾಡುತ್ತಾ ಇಲ್ಲಿ ಬಹುಮಾನ ಮುಖ್ಯವಲ್ಲ ಮಕ್ಕಳ ವಯಸ್ಸಿಗೆ ತಕ್ಕಂತೆ ತೂಕ, ಬೆಳವಣಿಗೆ ಎತ್ತರ ಹಾಗೂ ಕುಟುಂಬ ಕಲ್ಯಾಣ ಅಳವಡಿಸಿಕೊಂಡ ಮಾನದಂಡಗಳನ್ನು ನೋಡಿ ಮಕ್ಕಳನ್ನು ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

ಇಲ್ಲಿ ಯಾರು ಅನ್ಯತಾ ಭಾವಿಸದೆ ತಮ್ಮ ಮಗು ಬಹುಮಾನ ಬಂದಿಲ್ಲ ಎಂದು ಬೇಸರವಾಗಿದೆ ಈ ಕಾರ್ಯಕ್ರಮದ ಉದ್ದೇಶದಲ್ಲಿ ತಾವೆಲ್ಲ ತಾಯಿಂದಿರು ಭಾಗಿಯಾಗಿದ್ದು ಅದೇ ದೊಡ್ಡ ಬಹುಮಾನ ಎಂದು ನಾನು ತಮ್ಮ ಮುಂದೆ ತಿಳಿಯಪಡಿಸುತ್ತೇನೆ ಏಕೆಂದರೆ ಇಂದು ಗ್ರಾಮೀಣ ಪ್ರದೇಶದಲ್ಲಿ ತಾಯಂದಿರ ಮರಣ, ಶಿಶುಮರಣ ತಡೆಗಟ್ಟುವಲ್ಲಿ ತಾವೆಲ್ಲರೂ ಸದೃಡವಾದ ತಾಯಿ ಸದೃಡವಾದ ಮಗು ಬೆಳೆಯಲಿ ಎಂಬ ಉದ್ದೇಶದಿಂದ ಸರಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಮಾಡಿದೆ ಅದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭಾಗ್ಯಲಕ್ಷ್ಮಿ, ಮಾತೃಪೂರ್ಣ, ಮಾತೃ ವಂದನಾ ಕಾರ್ಯಕ್ರಮಗಳು ಇತ್ಯಾದಿ.

ಆರೋಗ್ಯ ಇಲಾಖೆಯಿಂದ ಅನೇಕ ಕಾರ್ಯಕ್ರಮಗಳು ಬಂದಿದ್ದು ಗರ್ಭಿಣಿ ಎಂದಕೂಡಲೇ ತಾಯಿ ಕಾರ್ಡ್ ಮಾಡಿಸುವುದು ನಾಲ್ಕು ಬಾರಿ ತಪಾಸಣೆ ಮಾಡುವುದು ಕಡ್ಡಾಯ. ತದನಂತರ ಪ್ರಧಾನಮಂತ್ರಿ ಮಾತೃತ್ವ ಸಂರಕ್ಷಣಾ ಅಭಿಯಾನ ಅಡಿಯಲ್ಲಿ ಪ್ರತಿ ತಿಂಗಳು 9ನೇ ತಾರೀಕಿನಂದು ಗರ್ಭಿಣಿಯರ ತಪಾಸಣೆಯನ್ನು ಕೈಗೊಳ್ಳಲಾಗುವುದು ಉಚಿತವಾಗಿ ಪ್ರಯೋಗಾಲಯ ತಪಾಸಣೆ ಚಿಕಿತ್ಸೆ ಸ್ಕ್ಯಾನಿಂಗ್ ನೀಡಲಾಗುವುದು ಅಲ್ಲದೆ ಏಳು ಗ್ರಾಮಿ ಗಿಂತ ಕಡಿಮೆ ಇರುವ ಗರ್ಭಿಣಿಯರಿಗೆ ರಕ್ತವನ್ನು ಉಚಿತವಾಗಿ ನೀಡಿ ಆಕೆಯನ್ನು ಗಂಡಾಂತರದಿಂದ ತಪ್ಪಿಸುವ ಸಲುವಾಗಿ ಈ ಕಾರ್ಯಕ್ರಮದ ಉದ್ದೇಶವಾಗಿದೆ, ನಂತರ ನವಜಾತ ಶಿಶುಗಳಿಗೆ ಕೂಡ ವಿಶೇಷ ವಾರ್ಡ್ ಗಳನ್ನು ಮಾಡಿದ್ದು ಅವುಗಳಿಗೂ ಕೂಡ ಚಿಕಿತ್ಸಾ ಸೌಲಭ್ಯವನ್ನು ನೀಡಲಾಗುವುದು.

ನಂತರ ಒಂದು ವರ್ಷ ತುಂಬುವುದರೊಳಗೆ ಮಗುವಿಗೆ ಮಾರಕ ರೋಗಗಳಿಂದ ರಕ್ಷಿಸಲು ಉಚಿತ ಸಾವರ್ತಿಕ ಲಸಿಕ ಕಾರ್ಯಕ್ರಮವು ಕೂಡ ತಮ್ಮ ಗ್ರಾಮಗಳಿಗೆ ಇಲಾಖೆಯು ಲಸಿಕೆಯನ್ನು ನೀಡುತ್ತಾ ಬಂದಿದ್ದು ಮಕ್ಕಳನ್ನು ಅದರಿಂದ ರಕ್ಷಿತ ಮಾಡಿ ಮಾರಕ ರೋಗಗಳ ಬಗ್ಗೆ ವಿವರಣೆಯನ್ನು ನೀಡಿದರು. ಅಲ್ಲದೆ ಗರ್ಭಿಣಿ ಹಾಗೂ ಬಾಣತಿ ತಾಯಂದಿರು ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲು ಯಾರು ಹೆದರದೆ ರಕ್ಷಿತ ರಾಗಿ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ನಂತರ ನಿನ್ನೆ ತಾನೇ ಜಾರಿಯಾದ ಹೆಣ್ಣು ಮಕ್ಕಳ ಮದುವೆಯ ವಯಸ್ಸು 21ಕ್ಕೆ ಮಾಡಿದ್ದು ತಾವೆಲ್ಲರೂ ಅದನ್ನು ಪಾಲಿಸಿ ತಮ್ಮ ಗ್ರಾಮದಲ್ಲಿ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ, ಕಾರಣ ತಾಯಿ ಮರಣದಲ್ಲಿ 18 ವರ್ಷ ಕಡಿಮೆ ಇರುವವರು ಮರಣ ಸಂಭವಿಸಿದ್ದು ಇದಕ್ಕೆ ಒಂದು ಪ್ರಮುಖ ಕಾರಣ ಅಲ್ಲದೆ ಅಂಗವಿಕಲರು, ಮಾಧ್ಯಮಗಳು ಜನಿಸುವುದು ತಪ್ಪಿಸಬೇಕಾದರೆ ಇದು ಸೂಕ್ತ ವಯಸ್ಸು ಎಂದು ಮಾಹಿತಿ ನೀಡಿದರು.

ತದನಂತರ ತಾಯಿ-ಮಗು ಸುರಕ್ಷಿತವಾಗಿರಲು ಕುಟುಂಬ ಕಲ್ಯಾಣ ಪದ್ಧತಿಗಳಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತಾ ಚಿಕ್ಕ ಕುಟುಂಬ ಸದೃಢ ಕುಟುಂಬ ಎಂಬುದನ್ನು ತಿಳಿದು ತಾವು ಇಲ್ಲವೇ ತಮ್ಮ ಮನೆಯವರಿಗೆ ಹೊಸದಾಗಿ ಸರಳವಾದ NSV ವಿಧಾನದ ಬಗ್ಗೆ ತಮ್ಮ ಮನೆಯವರಿಗೆ ಪ್ರೋತ್ಸಾಹಿಸಿ ಎಂದು ಕಿವಿಮಾತು ಹೇಳಿದರು.

ತದನಂತರ ವೇದಿಕೆಯಲ್ಲಿದ್ದ ಸಮುದಾಯ ಆರೋಗ್ಯ ಅಧಿಕಾರಿ ಶರಣು ದೊಡ್ಡಮನಿ ಪೌಷ್ಟಿಕ ಆಹಾರದ ಮಹತ್ವ ಹಾಗೂ ತಾಯಿ ಎದೆ ಹಾಲಿನ ಮಹತ್ವ, ಕಾಂಗ್ರೋ ವಿಧಾನಗಳ ಬಗ್ಗೆ ಮಾಹಿತಿ ತಿಳಿಸಿದರು.ನಂತರ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಿಕೊಳ್ಳುವಂತೆ ಸಭೆಯಲ್ಲಿ ತಿಳಿಸಿದರು.

ವೇದಿಕೆಯಲ್ಲಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೀನಾಕ್ಷಿ ಪಾಟೀಲ್ ಅವರು ಮಾತೃಪೂರ್ಣ ಹಾಗೂ ಮಾತ್ರಂ ದನಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು ಸಿಬ್ಬಂದಿಗಳು ಅಂಗನವಾಡಿ ಮೇಲ್ವಿಚಾರಕರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಜಿಮ್ ಪ್ರೇಮ್ಜಿ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸ್ವಸಾಯ ಸಂಘಗಳ ಸದಸ್ಯರು, ಗರ್ಭಿಣಿಯರು ಬಾಣಂತಿಯರು ಪಾಲ್ಗೊಂಡಿದ್ದರು,ನಂತರ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ವಿಜೇತರಾದ ಗ್ರಾಮದ ಲಿಖಿತ ವಿಜಯಲಕ್ಷ್ಮಿ ಬಾಬು ಅವರು ಪ್ರಥಮ ಬಹುಮಾನವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ವಿತರಿಸಿದರು,

೩೦೦ ರೂಪಾಯಿಗಳು, ದ್ವಿತೀಯ ಬಹುಮಾನ ೨೦೦ ನಗದು ರೂಪಾಯಿಗಳನ್ನು ತನುಜಾ ಪವಿತ್ರ ಬಸಣ್ಣ ಅವರಿಗೆ ಸಮುದಾಯ ಆರೋಗ್ಯ ಅಧಿಕಾರಿ ಶರಣು ದೊಡ್ಡಮನಿ ಹಾಗೂ ವಲಯ ಮೇಲ್ವಿಚಾರಕರಾದ ಮೀನಾಕ್ಷಿ ಪಾಟೀಲ್ ಅವರು ವಿತರಿಸಿದರು.

ತೃತೀಯ ಬಹುಮಾನ ೧೦೦ ನಗದು ರೂಪಾಯಿಗಳನ್ನು ಕಿರ್ ಸಾವಳಗಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ನರಸಪ್ಪ ದುಖಾನದಾರ ಅವರು ಗಂಗಾಧರ ಸಿದ್ದಣ್ಣ ಪ್ರಿಯಾಂಕ ರವರಿಗೆ ವಿತರಿಸಿದರು. ಹೀಗೆ ವಿಜೇತ ಮಕ್ಕಳಿಗೆ ವೇದಿಕೆಯ ಮೇಲಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಬಹುಮಾನವನ್ನು ನೀಡಿದಕ್ಕಾಗಿ ಕೊನೆಯದಾಗಿ ಶಾಂತ ಅಂಗನವಾಡಿ ಕಾರ್ಯಕರ್ತೆ ವಂದನೆಗಳೊಂದಿಗೆ ಮುಕ್ತಾಯಗೊಂಡಿತು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here