೨೦೨೧ ರ ಡಾ.ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿಗೆ ಆಯ್ಕೆ

0
9

ಭಾಲಿ: ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರರು. ಮರಾಠಿ ಮತ್ತು ಉರ್ದು ಭಾಷೆಯ ಪ್ರಾಬಲ್ಯದಲ್ಲಿಯೂ ಕನ್ನಡದ ಉಳಿವಿಗಾಗಿ ಹೊರಾಡಿದ ಕನ್ನಡದ ಪಟ್ಟದ್ದೇವರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಗಡಿಭಾಗದಲ್ಲಿ ಕನ್ನಡದ ರಣಭೇರಿ ಮುಳಗಿಸಿದ ಸಾಂಸ್ಕೃತಿಕ ರಾಯಭಾರಿಗಳು. ಬಸವಾದಿ ಶರಣರ ತತ್ವಾದರ್ಶಗಳನ್ನು ಜೀವನದುದ್ದಕ್ಕೂ ಆಚರಣೆಯಲ್ಲಿ ತರುವ ಮೂಲಕ ಕಲ್ಯಾಣ ಕರ್ನಾಟಕದ ಜನರಿಗೆ ಬಸವತತ್ವದ ದೀಕ್ಷೆ ನೀಡಿದ ಧರ್ಮಗುರುಗಳು.

ಬಸವಕಲ್ಯಾಣದಲ್ಲಿ ನೂತನ ಅನುಭವಮಂಟಪವನ್ನು ನಿರ್ಮಿಸುವ ಮೂಲಕ ಶರಣ ಸಂಸ್ಕೃತಿಯನ್ನು ಪುನರ್‌ಜೀವನಗೊಳಿಸಿದ ಮಹಾಚೇತನರು. ಕಾಯಕವೇ ಲಿಂಗಪೂಜೆ, ಜಂಗಮ ಸೇವೆ ಎಂದು ಕಾಯಕ ಪರಿಣಾಮಿಯಾದವರು. ಅವರ ಹೆಸರಿನಲ್ಲಿ ಪ್ರತಿವರ್ಷ ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಶರಣೆ ಶುಭಾಂಗಿ ಶರಣ ಚನ್ನಬಸವಣ್ಣ ಬಳತೆ ದಂಪತಿಗಳಿಗೆ ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

ಪ್ರಶಸ್ತಿ ಪುರಸ್ಕೃತರ ಪರಿಚಯ: ಭಾಲ್ಕಿಯ ಶರಣ ದಂಪತಿಗಳಾದ ಶರಣೆ ಪುಷ್ಪಾವತಿ ಶರಣ ಕಾಶಪ್ಪ ಬಳತೆ ಇವರ ಉದರದಲ್ಲಿ ಶರಣ ಚನ್ನಬಸವಣ್ಣ ಜನಿಸಿದ್ದಾರೆ. ಚಿಕ್ಕಂದಿನಿಂದಲೇ ಧಾರ್ಮಿಕ ವಾತಾವರಣದಲ್ಲಿ ಬೆಳೆದ ಇವರು ಉನ್ನತ ಶಿಕ್ಷಣ ಪಡೆದು ೧೨ ವರ್ಷ ಸರ್ಕಾರಿ ನೌಕರಿಯಾದ ಇಂಜನೀಯರ್ ಹುದ್ದೆ ಪ್ರಾಮಾಣಿಕವಾಗಿ ನಿಭಾಯಿಸಿ ಆ ಹುದ್ದೆಗೆ ರಾಜಿನಾಮೆ ನೀಡಿ ಸ್ವಂತ ಗುತ್ತೇದಾರಿಕೆ ಪ್ರಾರಂಭಿಸಿ ಸಾವಿರಾರು ಕೈಗಳಿಗೆ ಕಾಯಕ ನೀಡಿದವರು.

ಶರಣೆ ಶುಭಾಂಗಿ ಚನ್ನಬಸವಣ್ಣ ಬಳತೆ ಅವರು ಪತಿಗೆ ತಕ್ಕ ಸತಿಯಾಗಿದ್ದಾರೆ. ಸತಿಪತಿಗಳಲೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬ ಬಸವವಾಣಿ ಇವರು ದಾಂಪತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಇವರಿಗೆ ಕು.ಬಸವವೈಭವ ಮತ್ತು ಕು.ಸಮೃದ್ಧಿ ಎಂಬ ಇಬ್ಬರು ಮಕ್ಕಳಿದ್ದಾರೆ.

ಬಳತೆ ದಂಪತಿಗಳು ಗುರು-ಲಿಂಗ-ಜಂಗಮ ಪ್ರೇಮಿಗಳು. ವಿಶೇಷವಾಗಿ ಭಾಲ್ಕಿ ಹಿರೇಮಠದ ಪೂಜ್ಯರು ಹಾಗೂ ವಿಜಯಪುರದ ಪರಮಪೂಜ್ಯ ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳವರ ಪ್ರಭಾವದಿಂದ ಆಧ್ಯಾತ್ಮಿಕ ಕುಟುಂಬವಾಗಿ ಬೆಳೆಸಿಕೊಂಡು ಬರುತ್ತಿದ್ದಾರೆ. ಅವರು ಸಮಯ ಪರಿಪಾಲಕರು, ಕಾಯಕಯೋಗಿಗಳು, ಹೃದಯವಂತರು, ಸದಾ ಹಸ್ಮುಖಿಗಳು. ‘ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿಸಿತ್ತು ಶಿವನ ಡಂಗೂರ’ ಎಂಬ ಶರಣರ ವಾಣಿಯಂತೆ ದಾಸೋಹಂಭಾವ ಬೆಳೆಸಿಕೊಂಡಿದ್ದಾರೆ.

ಅವರ ಹಣದ ಶ್ರೀಮಂತಿಗೆಕೆಗಿಂತಲೂ ಭಕ್ತಿಶ್ರೀಮಂತರು ಎಂದು ಹೇಳಲು ಅತ್ಯಂತ ಸಂತೋಷವಾಗುತ್ತದೆ. ಅವರು ಮಾಡಿರುವ ಸಾಧನೆ ಅಚ್ಚರಿ ಮೂಡಿಸುವಂತಹದ್ದು. ಅವರ ದಾಂಪತ್ಯ ಜೀವನ ನಾಡಿನ ಜನತೆಗೆ ಪ್ರೇರಣೆಯಾಗಲೆಂದು ೨೦೨೧ ರ ಡಾ.ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here