ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಮತ್ತು ಪ್ರಯಾಣ ವಿಭಾಗವು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳ ಹೊಸ ಮಾರ್ಗಗಳನ್ನು ತೆರೆಯುವಲ್ಲಿ ಮುಂಚೂಣಿಯಲ್ಲಿದೆ ಮತ್ತು ಈ ವಿಭಾಗದದಿಂದ ಉತ್ತೀರ್ಣರಾದ ೨೯ ವಿದ್ಯಾರ್ಥಿಗಳು ವಿಮಾನಯಾನ, ಪ್ರಯಾಣ ಮತ್ತು ಹೋಟೆಲ್ ಉದ್ಯಮಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆದಿದ್ದಾರೆ ಹಾಗೂ ರಾಜ್ಯದ ಪ್ರವಾಸೋದ್ಯಮ ಇಲಾಖೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.
ವ್ಯಾಪಾರ ಅಧ್ಯಯನದಡಿ ಬರುವ ಶರಣಬಸವ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಮತ್ತು ಪ್ರಯಾಣ ವಿಭಾಗದ ಚೇರಪಸರ್ನರಾದ ಡಾ.ವಾಣಿಶ್ರೀ ಮಾತನಾಡಿ, ಯಶಸ್ವಿಯಾಗಿ ಸ್ಥಾನ ಪಡೆದ ವಿದ್ಯಾರ್ಥಿಗಳ ವಾರ್ಷಿಕ ಪ್ಯಾಕೇಜ್ ೨.೪ ಲಕ್ಷದಿಂದ ೪.೫ ಲಕ್ಷ ರೂ. ಆಗಿದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ (ಬಿಬಿಎ ಮತ್ತು ಎಂಬಿಎ) ಕೋರ್ಸ್‌ಗಳ ವಿಶಿ?ತೆಯೆಂದರೆ, ನಮ್ಮ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಮತ್ತು ಪ್ರಯಾಣ, ಹೋಟೆಲ್ ಉದ್ಯಮ, ಹಣಕಾಸು ಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ವಿವಿಧ ಕೈಗಾರಿಕೆಗಳಿಗೆ ಪ್ರಾಯೋಗಿಕ ಕಾರ್ಯಯೋಜನೆಗಳಿಗೆ ನಿಯಮಿತವಾಗಿ ಕಳುಹಿಸುವ ಮೂಲಕ ಉದ್ಯಮದ ಮಾನ್ಯತೆಯನ್ನು ಒದಗಿಸಲಾಗಿದೆ ಎಂದರು.
ಡಾ.ವಾಣಿಶ್ರೀ ಅವರ ಪ್ರಕಾರ ಎರಡು ಗುಂಪುಗಳನ್ನು ಒಳಗೊಂಡಿರುವ ವಿದ್ಯಾರ್ಥಿಗಳನ್ನು ಪ್ರಾಯೋಗಿಕವಾಗಿ ಕನಿ? ೧೫ ದಿನಗಳ ತರಬೇತಿಗಾಗಿ ಕೈಗಾರಿಕ ಉದ್ಯಮಕ್ಕೆ ಕಳುಹಿಸಲಾಗುತ್ತದೆ ಮತ್ತು ದೀರ್ಘಾವಧಿಯ ಇಂಟರ್ನ್‌ಶಿಪ್ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆಗಳಲ್ಲಿ ಮತ್ತು ವೈಯಕ್ತಿಕ ಸಂದರ್ಶನಗಳಲ್ಲಿ ಯಶಸ್ವಿಯಾಗಲು ಸಹಾಯ ಮಾಡಿದೆ.
ವಿಶೇ?ವಾಗಿ ವಿಮಾನ ನಿಲ್ದಾಣಗಳ ಕಾರ್ಯನಿರ್ವಹಣೆಯ ಬಗ್ಗೆ ತಿಳಿದುಕೊಳ್ಳುವುದು, ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅವಶ್ಯಕವಾಗಿದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ತರಬೇತಿಗಾಗಿ ೧೫ ದಿನಗಳ ಕಾಲ ತಲಾ ಇಬ್ಬರು ವಿದ್ಯಾರ್ಥಿಗಳ ಬ್ಯಾಚ್‌ಗಳಲ್ಲಿ ವಿಭಾಗದ ವಿದ್ಯಾರ್ಥಿಗಳಿಗೆ ವಿಮಾನ ನಿಲ್ದಾಣಗಳ ಕೆಲಸದ ಕುರಿತು ತರಬೇತಿ ನೀಡಲು ವಿಭಾಗವು ಕಲಬುರಗಿ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದೆ.
ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರರಾಗಿ ಶರಣಬಸವ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಮತ್ತು ಪ್ರಯಾಣ ವಿಭಾಗದ ಒಂಬತ್ತು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಿವಿಧ ಪ್ರವಾಸಿ ತಾಣಗಳಲ್ಲಿ ನಿಯೋಜಿಸಲಾಗಿದೆ.
ಅವರ ಆರಂಭಿಕ ವೇತನ ತಿಂಗಳಿಗೆ ೩೦,೦೦೦ ರೂ.ಯಾಗಿದೆ. ನೇಮಕಗೊಂಡ ಒಂಬತ್ತು ವಿದ್ಯಾರ್ಥಿಗಳಲ್ಲಿ ಪ್ರವೀಣ್ (ಬೀದರನಲ್ಲಿ ನಿಯೋಜನೆ), ಮಿಥುನ್ ರೆಡ್ಡಿ (ಬಾಗಲಕೋಟೆಯಲ್ಲಿ ನಿಯೋಜನೆ), ಪ್ರಯಾಗ್ ಕುಲಕರ್ಣಿ, ವೀರೇಂದ್ರ ಚೆನ್ನಿ ಮತ್ತು ಯೋಗೇಶ್ (ಬೆಂಗಳೂರಿನಲ್ಲಿ ನಿಯೋಜನೆ), ಶ್ರೀನಾಥ್ (ಬೆಂಗಳೂರು ಗ್ರಾಮಾಂತರದಲ್ಲಿ ನಿಯೋಜನೆ), ನಾಗರಾಜ್ ಚಿಟ್ಟಾ (ಚಿಕ್ಕಮಗಳೂರಿನಲ್ಲಿ ನಿಯೋಜನೆ) ಕಿರಣ್ ಪಾಟೀಲ್ (ರಾಮನಗರದಲ್ಲಿ ನಿಯೋಜನೆ) ಮತ್ತು ವಿಠಲ ಕುಲಕರ್ಣಿ (ಕೊಪ್ಪಳದಲ್ಲಿ ನಿಯೋಜನೆ) ಯಾಗಿದ್ದಾರೆ.
೨.೫ ಲಕ್ಷದಿಂದ ೩.೫ ಲಕ್ಷದವರೆಗಿನ ವಾರ್ಷಿಕ ಪ್ಯಾಕೇಜ್‌ನೊಂದಿಗೆ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋದಲ್ಲಿ ಐದು ವಿದ್ಯಾರ್ಥಿಗಳನ್ನು ವಿವಿಧ ಹುದ್ದೆಗಳಲ್ಲಿ ನೇಮಿಸಲಾಗಿದೆ. ಇಂಡಿಗೋದಲ್ಲಿ ನೇಮಕಗೊಂಡ ವಿದ್ಯಾರ್ಥಿಗಳಲ್ಲಿ ಗೌರಿ, ಅಕ್ಷಯ್, ವೀರೇಶ್, ಚೇತನ್ (ಎಲ್ಲರೂ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೇಮಕಗೊಂಡಿದ್ದಾರೆ), ಮತ್ತು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿನಿ ಪಾರ್ವತಿ ನೇಮಕಗೊಂಡಿದ್ದಾರೆ. ಸುನೀಲ್, ರಾಹುಲ್, ರವಿಚಂದ್ರ ಮತ್ತು ಬಸವರಾಜ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಪಾರ್ಲೆ ಆಗ್ರೋ ಇಂಡಸ್ಟ್ರೀಸ್‌ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದಲ್ಲಿ ವಾರ್ಷಿಕ ೩.೫ ಲಕ್ಷದಿಂದ ೪.೨೫ ಲಕ್ಷ ರೂಪಾಯಿಗಳ ಪ್ಯಾಕೇಜ್‌ನೊಂದಿಗೆ ನೇಮಕ ಮಾಡಿಕೊಳ್ಳಲಾಗಿದೆ.
ಟ್ರಾವೆಲ್ ಸೆಕ್ಟರ್‌ನಲ್ಲಿ ಮೇಕ್ ಮೈ ಟ್ರಿಪ್, ಗೊಗಾಗಾ ಸೇರಿದಂತೆ ಪ್ರಮುಖ ಕಂಪನಿಗಳಲ್ಲಿ ದಿವ್ಯಾ ಚವ್ಹಾಣ, ದಿಲೀಪ, ಪೂಜಾ ಬಿರಾದಾರ, ದಿವ್ಯಾ ಪಾಟೀ ಮತ್ತು ಅಮೋಘ ಸೇರಿದಂತೆ ಐವರು ವಿದ್ಯಾರ್ಥಿಗಳು ವಾರ್ಷಿಕ ೧.೮೦ ರಿಂದ ೩.೨ ಲಕ್ಷ ರೂಪಾಯಿಗಳ ವೇತನ ಪ್ಯಾಕೇಜ್‌ನೊಂದಿಗೆ ವಿವಿಧ ಹುದ್ದೆಗಳಲ್ಲಿ ನೇಮಕಗೊಂಡಿದ್ದಾರೆ.
ಹಣಕಾಸು ವಲಯದಲ್ಲಿ, ರಾಘವೇಂದ್ರ, ಸುನೀತಾ ಮತ್ತು ಕೃ? ಅವರು ವಾರ್ಷಿಕವಾಗಿ ೨.೨೦ ಲಕ್ಷದಿಂದ ೨.೮೦ ಲಕ್ಷ ವೇತನ ಪ್ಯಾಕೇಜ್‌ನೊಂದಿಗೆ ವಿವಿಧ ಕಂಪನಿಗಳಲ್ಲಿ ನೇಮಕಗೊಂಡಿದ್ದಾರೆ ಮತ್ತು ಮಾನವ ಸಂಪನ್ಮೂಲ ಇಲಾಖೆಯಲ್ಲಿ ಐಟಿ ಗ್ಲೋಬಲ್‌ನಿಂದ ರೂ. ೧.೮೦ ಲಕ್ಷ ವಾರ್ಷಿಕ ವೇತನದೊಂದಿಗೆ ನಿಕಿತಾ ಆಯ್ಕೆಯಾಗಿದ್ದಾರೆ.