ಸುರಪುರ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಗಾಯತ್ರಿ ಶಿಕ್ಷಣ ಸಂಸ್ಥೆಗೆ ನೂತನ ಅಧ್ಯಕ್ಷರ ನೇಮಕಕ್ಕೆ ಸಭೆ ನಡೆಸಲಾಯಿತು. ನಿರ್ಗಮಿತ ಅಧ್ಯಕ್ಷ ಮಲ್ಲಾರಾವ ಯಾರಾದಿ ಅವರು ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ನಡೆಸಿದ ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಗುರುರಾಜ ಕುಲಕರ್ಣಿ ಚಾಮನಾಳ ಅವರನ್ನು ನೇಮಕಗೊಳಿಸಲಾಯಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಗುರುರಾಜ ಕಲುಕರ್ಣಿ ಮಾತನಾಡಿ, ೧೯೯೬ ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ವತಿಯಿಂದ ಕಳೆದ ೨೫ ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು ಸಂಸ್ಥೆಯ ಶಿಕ್ಷಕರು ಶ್ರಮಪಟ್ಟು ಕಲಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡಿದ್ದಾರೆ.
ಈ ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಹೊರ ಹೊಮ್ಮಿದ್ದು ಇಂದು ಅನೇಕ ದೊಡ್ಡ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ ಅವರು, ಈ ಸಂಸ್ಥೆಯನ್ನು ಹಿರಿಯರು ಶ್ರಮಪಟ್ಟು ಕಟ್ಟಿ ಬೆಳೆಸಿದ್ದು ಮುಂದಿನ ದಿನಗಳಲ್ಲಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಮತ್ತಷ್ಟು ಶ್ರಮಿಸಬೇಕಾಗಿದ್ದು ಇದಕ್ಕೆ ಎಲ್ಲರ ಸಹಕಾರ ತುಂಬಾ ಅಗತ್ಯ ಎಂದು ಹೇಳಿದರು.
ನಿರ್ಗಮಿತ ಅಧ್ಯಕ್ಷ ಮಲ್ಲಾರಾವ ಯಾರಾದಿ, ಸಂಸ್ಥೆಯ ಗೌರವಾಧ್ಯಕ್ಷ ತಿರುಮಲರಾವ ಕುಲಕರ್ಣಿ, ಉಪಾಧ್ಯಕ್ಷ ವೆಂಕೋಬಾಚಾರ್ಯ ಜೋಷಿ ಬೀರನೂರ, ಸದಸ್ಯರಾದ ನರಸಿಂಹರಾವ ಬಡಶೇಷಿ, ಶ್ರೀನಿವಾಸ ಕುಲಕರ್ಣಿ ಏವೂರು, ವ್ಯಾಸರಾವ ಏವೂರ, ಸುಧೀಂದ್ರ ಕುಲಕರ್ಣಿ, ರಾಜೇಶ ಭಟ್, ವಾಸುದೇವ ಕುಲಕರ್ಣಿ ದೇವಿಕೇರಿ, ಪ್ರ ಗು ಅಪ್ಪಣ್ಣ ಕುಲಕರ್ಣಿ ಹಾಗೂ ಶಿಕ್ಷಕರಾದ ಶ್ರೀನಾಥ ಸಿಂದಗೇರಿ ಇತರರಿದ್ದರು.