ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್‌ಗಳ ಬಗ್ಗೆ ತನಿಖೆ ಮಾಡಿ: ದೇವಿಂದ್ರಪ್ಪ ಪತ್ತಾರ

0
11

ಸುರಪುರ:ರಾಜ್ಯದಲ್ಲಿ ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್‌ಗಳು ಹೆಚ್ಚಾಗಿದ್ದು ಇದರಿಂದ ನಿಜವಾದ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಅನ್ಯರ ಪಾಲಾಗುತ್ತಿವೆ.ಆದ್ದರಿಂದ ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್‌ಗಳ ಬಗ್ಗೆ ತನಿಖೆಯಾಗಬೇಕು ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಒತ್ತಾಯಿಸಿದರು.

ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ದೇವಿಕೇರಾ ಗ್ರಾಮ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ರಾಜ್ಯದಲ್ಲಿ ಕಾರ್ಮಿಕರ ಭದ್ರತಾ ನಿಧಿಯ ಸುಮಾರು ೮ ಸಾವಿರ ಕೋಟಿ ರೂಪಾಯಿ ಅನುದಾನವಿದ್ದು ಅದನ್ನು ಸರಿಯಾದ ಫಲಾನುಭವಿಗಳಿಗೆ ದೊರೆಯುವಂತೆ ಸರಕಾರ ಯೋಜನೆ ರೂಪಿಸಬೇಕು ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖಂಡ ರಂಗನಗೌಡ ಪಾಟೀಲ್ ಮಾತನಾಡಿ,ಕಟ್ಟಡ ಕಾರ್ಮಿಕರು ನಿಜವಾದ ಶ್ರಮಿಜೀವಿಗಳಾಗಿದ್ದಾರೆ. ಸರಕಾರಗಳು ಅವರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕಿದೆ.ಕಾರ್ಮಿಕರ ಯಾವುದೇ ರೀತಿಯ ಸೇವೆಗೆ ನಾನು ಕೈಜೋಡಿಸುವುದಾಗಿ ತಿಳಿಸಿದರು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ತಳವಾರ ಮಾತನಾಡಿ,ರಾಜ್ಯದಲ್ಲಿನ ಕಟ್ಟಡ ಕಾರ್ಮಿಕರಿಗೆ ಸರಕಾರ ಸರಿಯಾದ ಯೋಜನೆಗಳನ್ನು ರೂಪಿಸುತ್ತಿಲ್ಲಾ,ಅಲ್ಲದೆ ನಮಗೆ ಸಿಗಬೇಕಾದ ಸೌಲಭ್ಯಗಳನ್ನು ನಾವು ಪಡೆದುಕೊಳ್ಳಬೇಕಾದಲ್ಲಿ ಹೋರಾಟ ಅನಿವಾರ್ಯವಾಗಿದೆ.ಆದ್ದರಿಂದ ಇಂದು ನಾವೆಲ್ಲರೂ ಸಂಘಟಿತರಾಗಿ ಹೋರಾಟ ನಡೆಸಿದಾಗ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಿದೆ. ಅಲ್ಲದೆ ರಾಜ್ಯದಲ್ಲಿ ಹೆಚ್ಚುತ್ತಿರುವ ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್‌ಗಳಿಗೆ ಕಡಿವಾಣ ಹಾಕಲು ಸರಕಾರಕ್ಕೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ದೇವಿಕೇರಾ ಗ್ರಾಮ ಶಾಖೆಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕಲ್ಪನಾ ಸೇರಿದಂತೆ ಅನೇಕರು ಮಾತನಾಡಿದರು.ಮುಖಂಡರಾದ ಬಸ್ಸಮ್ಮ ಮೇಡಾ ತಳಬಿಡಿ,ಸಂಘದ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ನಗರಗುಂಡ,ಮುಖಂಡ ಮಲ್ಲನಗೌಡ ಮಾಲಿ ಪಾಟೀಲ್, ಮಲ್ಲನಗೌಡ, ಸಾಯಿಬಣ್ಣ ದೊರೆ, ತಿಮ್ಮಯ್ಯ ದೊರೆ,ಪರಶುರಾಮ ಹುಲಕಲ್,ಮರೆಪ್ಪ ದೇಸಾಯಿ,ಹಣಮಂತ ಕುಂಬಾರಪೇಟ,ಭೀಮಣ್ಣ ಸಗರ,ಆನಂದ ಕಟ್ಟಿಮನಿ,ಬಸವರಾಜ ರಡ್ಡಿ,ದೇವಿಂದ್ರಪ್ಪ ತಳವಾರ,ಗೋಪಾಲ ಪೂಜಾರಿ,ರಾಘು ಕುಲಕರ್ಣಿ,ಹಣಮಂತ ಬಿಲ್ಲವ್,ಮಲ್ಕಣ್ಣ ದುಸ್ತುರಿ,ಅಬ್ದುಲ್ ರೌಫ್,ಅಬೀದ್ ಹುಸೇನ್ ವಿಷ್ಣು ಟೋಣೆ ಸೇರಿದಂತೆ ಅನೇಕರಿದ್ದರು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here