ಮಡಿವಾಳ:ಯಲಹಂಕದ ಹತ್ತಿರವಿರುವ ರಮಣಶ್ರೀ ಕ್ಯಾಲಿಫೋರ್ನಿಯಾ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳ ಸಮ್ಮೇಳನ ನಡೆಯಿತು.
ಈ ಎಲ್ ಐ ಸಿ ಪ್ರತಿನಿಧಿಗಳ ಸಮ್ಮೇಳನದಲ್ಲಿ ಜನರಲ್ ಮ್ಯಾನೇಜರ್ ಎಂ.ಜಗನ್ನಾಥ್ ಮಾತನಾಡಿ ಎಲ್ ಐ ಸಿ ಪ್ರತಿನಿಧಿಗಳು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದರೆ ಉತ್ತಮ ವ್ಯವಹಾರ ಮಾಡಬಹುದು. ಎರಡು ವರ್ಷಗಳಿಂದ ಎಲ್ ಐ ಸಿ ಸಾರಿಗೆ, ಹೋಟೆಲ್, ಟೂರಿಸಂ ಕೋವಿಡ್ ಕಾರಣದಿಂದ ಗ್ರಾಹಕರ ಎಲ್ಲಾ ವ್ಯವಹಾರಗಳು ಕುಂಠಿತಗೊಂಡಿವೆ.
ಕೋವಿಡ್ ನಿಂದ ಎಲ್ ಐ ಸಿ ಗ್ರಾಹಕರು ಹೆಚ್ಚಿನದಾಗಿ ಮೃತಪಟ್ಟಿದ್ದಾರೆ. ಅಲ್ಲದೆ ಅವರಿಗೆ ಡೆತ್ ಕ್ಲೈಮ್ ಶೀಘ್ರವಾಗಿ ಇತ್ಯಾರ್ಥ ಮಾಡಲಾಗಿದೆ. ಆದ್ದರಿಂದ ಗ್ರಾಹಕರಿಗೆ ಎಲ್ ಐ ಸಿ ಪಾಲಿಸಿಯ ಮೇಲೆ ಉತ್ತಮ ನಂಬಿಕೆ ಬಂದಿದೆ. ಈಗ ಜನರಿಗೆ ಆರೋಗ್ಯ ವಿಮೆ, ಜೀವ ವಿಮೆ ಬಹಳ ಮುಖ್ಯವಾಗಿದೆ. ಇಂದಿನ ಯುವಕರಿಗೆ ಟರ್ಮ್ ಇಂಶೂರೆನ್ಸ್ ಪಾಲಿಸಿಗಳು ಅಗತ್ಯ ಇದೆ.
ಹೊಸದಾಗಿ ಧನರೇಖಾ ಪಾಲಿಸಿ ಬಂದಿದೆ, ಜೊತೆಗೆಹೆಣ್ಣು ಮಕ್ಕಳಿಗೆ, ಕಡಿಮೆ ವಯಸ್ಸಿನವರಿಗೆ ಉತ್ತಮವಾಗಿ ಮನಿಬ್ಯಾಕ್ ಪಾಲಿಸಿ ಗ್ಯಾರೆಂಟಿ ಬೆನಿಪಿಟ್ ಬರುತ್ತದೆ. ಪ್ರತಿನಿಧಿಗಳು 31/12/21ವರೆಗೆ ಎಂ ಡಿ ಆರ್ ಟಿ ಕ್ಲಬ್ ಸದಸ್ಯರಾಗಿ ವಿದೇಶದಲ್ಲಿ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸಬಹುದು.
ಪ್ರತಿನಿಧಿಗಳು ಹೆಚ್ಚಾಗಿ ಡಿಜಿಟಲ್ ಕಡೆ ಗಮನ ನೀಡಬೇಕು. ಗ್ರಾಹಕರಿಗೆ ಮೊಬೈಲ್ ನಂಬರ್, ಪಾನ್ ಕಾರ್ಡ್, ಈ ಮೇಲ್ ಐಡಿ ನೆಪ್ಟ್ ಪಾಲಿಸಿಗಳಿಗೆ ಪ್ರತಿನಿಧಿಗಳು ತಮ್ಮ ಎಲ್ ಐ ಸಿ ಕಚೇರಿಯಲ್ಲಿ ನೀಡಿದರೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಬಹುದು ಎಂದರು. ಎಲ್ ಐ ಸಿ ಯು ಪ್ರಪಂಚದಾದ್ಯಂತ ನಂಬರ್ ಒನ್ ವಿಮೆ ಕಂಪೆನಿಯಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರತಿನಿಧಿಗಳು ಮನೆಯಲ್ಲಿಯೇ ಕುಳಿತು ಗ್ರಾಹಕರಿಗೆ ಆನಂದ್ ಆಯಪ್ ಮೂಲಕ ಪಾಲಿಸಿಗಳನ್ನು ನೀಡಬಹುದು ಎಂದರು. ಈಗಿನ ಡಿಜಿಟಲ್ ಯುಗದಲ್ಲಿ ಗ್ರಾಹಕರು ಮನೆಯಲ್ಲಿಯೇ ಕುಳಿತು ಪ್ರೀಮಿಯಂ ಕಟ್ಟಬಹುದು. ಫೋನ್ ಪೇ, ಗೂಗಲ್ ಪೇ. ಪೇ ಟಿ ಎಂ ವ್ಯವಹಾರ ಮಾಡಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೋಲಾರ ಎಲ್ ಐ ಸಿ ಶಾಖೆಯಲ್ಲಿ ಉತ್ತಮ ವ್ಯವಹಾರ ಮಾಡಿದ ಜೀವವಿಮಾ ಸಲಹೆಗಾರರಾದ ನಂಜುಂಡಪ್ಪ ರವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಿಜಿನಲ್ ಮ್ಯಾನೇಜರ್ ಉದಯ್ ಕುಮಾರ್ ನವನಿ, ಬೆಂಗಳೂರು 2 ವಿಭಾಗಾಧಿಕಾರಿ ಆಶೀಶ್ ಕುಮಾರ್,ಮಾರುಕಟ್ಟೆ ಮ್ಯಾನೇಜರ್ ಡಿ. ಜಗದೀಶ್, ಮ್ಯಾನೇಜರ್ ಸೇಲ್ಸ್ ಮಹಮ್ಮದ್ ಇಸಾಕ್, ಸಿ ಎಲ್ ಐ ಎ ಮ್ಯಾನೇಜರ್ ಪ್ರಸಾದ್, ರವೀಂದ್ರ, ಶಾಖಾಧಿಕಾರಿಗಳು, ಹಾಗೂ ಪ್ರತಿನಿಧಿಗಳು ಹಾಜರಿದ್ದರು.