ಕಲಬುರಗಿ: ಶ್ರೀಮತಿ ವೀರಮ್ಮಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ೨೦೨೧-೨೦೨೨ ಸಾಲಿನ ಶೈಕ್ಷಣಿಕ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮಕ್ಕೆ ಸದರಿ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ.ಅಶೋಕ ಜೀವಣಗಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿಯರಿಗೆ ಕಾಲೇಜಿನ ಪ್ರಾಚಾರ್ಯ ಪ್ರತಿಜ್ಞಾವಿಧಿ ಭೋದಿಸಿದರು.ಡಾ. ಅಶೋಕ ಜೀವಣಗಿಯವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಸಮಯಾನುಸಾರವಾಗಿ ನಮ್ಮ ಜ್ಞಾನವನ್ನು ಆಗಾಗ್ಗೆ ನವೀಕರಿಸಬೇಕು,ನಮ್ಮ ದೇಶಕ್ಕಾಗಿ ನಾವು ದುಡಿಯಬೇಕು.ದೇಶದ ಪ್ರಗತಿಯಲ್ಲಿ ನಮ್ಮ ಕೊಡುಗೆ ಇರಬೇಕು” ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರು ವಹಿಸಿದ್ದರು.ಉಪ ಪ್ರಾಚಾರ್ಯರಾದ ಡಾ.ವೀಣಾ ಹೆಚ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಉಮಾ ರೇವೂರ ಮಿಣಜಗಿ,ಡಾ.ಮೀನಾಕ್ಷಿ ಬಾಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಇದೆ ಸಂದರ್ಭದಲ್ಲಿ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಯರಿಗೆ ಓರಿಯಂಟೇಶನ್ ಮಾಹಿತಿ ಕೊಡಲಾಯಿತು.