ಸುರಪುರ: ತಹಸೀಲ್ ಕಚೇರಿ ಮುಂದೆ ಪದವಿ ವಿದ್ಯಾರ್ಥಿಳ ಪ್ರತಿಭಟನೆ

0
12

ಸುರಪುರ: ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಹತ್ತು ದಿನಗಳಿಂದ ರಾಜ್ಯಾದ್ಯಂತ ಅಲ್ಲದೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಧಾನಸೌಧದ ಬಳಿ ಧರಣಿ ನಡೆಸುತ್ತಿರುವುದರಿಂದ ಇಲ್ಲಿಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗಳು ನಡೆಯುತ್ತಿಲ್ಲವೆಂದು ಹಾಗು ಅತಿಥಿ ಉಪನ್ಯಾಸಕರ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ವಿದ್ಯಾರ್ಥಿಗಳು ಅತಿಥಿ ಉಪನ್ಯಾಸಕರ ಬೇಡಿಕಗಳನ್ನು ಈಡೇರಿಸದಿರುವುದರಿಂದ ಅದರ ಪರಿಣಾಮ ಇಂದು ನಮ್ಮೆಲ್ಲ ವಿದ್ಯಾರ್ಥಿಗಳ ಮೇಲಾಗುತ್ತಿದೆ.ಇನ್ನು ಕೆಲವೆ ದಿನಗಳಲ್ಲಿ ಪರೀಕ್ಷೆಗಳು ಬರುತ್ತಿದ್ದ ಆಗ ನಮಗೆ ತರಗತಿಗಳೆ ನಡೆಯದೇ ಏನು ಬರೆಯುವುದು ಎಂಬುದನ್ನು ಸರಕಾರ ಹೇಳಬೇಕಿದೆ.ಅತಿಥಿ ಉಪನ್ಯಾಸಕರು ೯ ರಿಂದ ೧೩ ಸಾವಿರ ಸಂಬಳದಲ್ಲಿ ಕೆಲಸ ಮಾಡುತ್ತಿದ್ದಾರೆ.ಇಂದಿನ ದುಬಾರಿ ದಿನಮಾನದಲ್ಲಿ ಇಷ್ಟೊಂದು ಕಡಿಮೆ ಸಂಬಳದಲ್ಲಿ ಕೆಲಸ ಮಾಡುವ ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ನೀಡುವಂತೆ ಮತ್ತು ಖಾಯಂಗೊಳಿಸುವಂತೆ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ.

Contact Your\'s Advertisement; 9902492681

ಆದರೆ ಸರಕಾರ ಅವರನ್ನು ಕೇವಲ ದುಡಿಸಿಕೊಳ್ಳುತ್ತವೆ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡದೆ ವಂಚಿಸುತ್ತವೆ.ಇದರಿಂದ ಅತಿಥಿ ಉಪನ್ಯಾಸಕರು ಜೀವನ ನಡೆಸುವುದು ಕಷ್ಟವಾಗಿದೆ.ಆದರೂ ನಮಗೆ ಪಾಠ ಮಾಡುತ್ತಾರೆ.ಸರಕಾರಕ್ಕೆ ಈಗ ಅವರ ಬೇಡಿಕಗಳಿಗಾಗಿ ಹೋರಾಟ ನಡೆಸುತ್ತಿದ್ದು ಕಳೆದ ಹತ್ತು ದಿನಗಳಿಂದ ನಮಗೆ ತರಗತಿ ನಡೆಯದೆ ಸಾವಿರಾರು ನೂರಾರು ವಿದ್ಯಾರ್ಥಿಗಳು ಓದಿನಿಂದ ವಂಚಿತರಾಗುತ್ತಿದ್ದೇವೆ.

ಸರಕಾರ ಕೂಡಲೇ ನಮ್ಮ ವೇದನೆಯನ್ನು ಅರ್ಥ ಮಾಡಿಕೊಂಡು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಮಾಡಿಕೊಡುವ ಮೂಲಕ ನಮ್ಮೆಲ್ಲ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಮ್ಮ ಮನವಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅತಿಥಿ ಉಪನ್ಯಾಸಕರಿಗಾಗಿ ಎಲ್ಲಾ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದರು.

ಅಲ್ಲದೆ ಕೂಡಲೇ ಅತಿಥಿ ಉಪನ್ಯಾಸಕರ ನೋವನ್ನು ಅರಿತು ಅವರಿಗೆ ೩೫ ರಿಂದ ೪೫ ಸಾವಿರ ಸಂಬಳ ಘೋಷಣೆ ಮಾಡಿ ಅವರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಭೀಮರಾಯ, ಮುತ್ತುರಾಜ, ಮುತ್ತಪ್ಪ, ಕೃಷ್ಣಾ, ಮಾಳಪ್ಪ, ಭೀಮಣ್ಣ, ಲಕ್ಷ್ಮಣ, ಬೀರಲಿಂಗ, ಶರಣಪ್ಪ, ಶರಣು, ವಿರೇಶ, ಸಂತೋಷ, ನಿಂಗಯ್ಯ, ರಾಜಕುಮಾರ, ಅಯ್ಯಪ್ಪ, ಮೈಲಾರಪ್ಪ, ಸಂಗಣ್ಣ, ಪ್ರಭುಸ್ವಾಮಿ, ಅಯ್ಯಣ್ಣ, ರಮೇಶ, ದೇವರಾಜ, ಬಸವರಾಜ, ಶರಣಬಸವ, ಹೊನ್ನಪ್ಪ ಸೇರಿದಂತೆ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here