ಸುರಪುರ:ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವಿಶ್ವಗುರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.ಅಲ್ಲದೆ ಕಳೆದ ಕೆಲ ತಿಂಗಳುಗಳ ಹಿಂದೆ ನಿಧನರಾದ ಸಂಘದ ಮಾಜಿ ಉಪಾಧ್ಯಕ್ಷ ಶಾಂತರಾಜ ಬಾರಿ,ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಸೇನಾ ಜನರಲ್ ಬಿಪಿನ್ ರಾವತ್ ಸೇರಿದಂತೆ ಅನೇಕರ ನಿಧನಕ್ಕೆ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ,ಕೋವಿಡ್ ಸಂದರ್ಭದಲ್ಲಿಯೂ ನಮ್ಮ ಬಸವೇಶ್ವರ ಪತ್ತಿನ ಸಹಕಾರ ಸಂಘ ಉತ್ತಮವಾಗಿ ವ್ಯವಹಾರವನ್ನು ನಡೆಸುವ ಮೂಲಕ ಲಾಭವನ್ನು ಗಳಿಸಿದೆ.ನಮ್ಮ ಸಂಘದ ಕೇಂದ್ರ ಕಚೇರಿ ಸೇರಿದಂತೆ ಕೆಂಭಾವಿ ಹುಣಸಗಿ ಕಕ್ಕೇರಾ ಮತ್ತು ಕೊಡೇಕಲ್ ಶಾಖೆಗಳ ಒಟ್ಟು ಲಾಭ ೬೮ ಲಕ್ಷ ೫೫ ಸಾವಿರ ೬೬೪ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ.ಮುಂದಿನ ವರ್ಷದಿಂದ ನಮ್ಮ ಬ್ಯಾಂಕ್‌ನಲ್ಲಿಯೂ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಲಾಗುತ್ತಿದೆ,ಅಲ್ಲದೆ ಬಂಗಾರ ಸೇರಿ ವಿವಿಧ ಸಾಲಗಳ ಮೇಲಿನ ಬಡ್ಡಿದರದಲ್ಲಿ ಶೇ ೩ ರಷ್ಟು ಇಳಿಕೆ ಮಾಡಲಾಗಿದ್ದು ಗ್ರಾಹಕರು ಇದರ ಲಾಭ ಪಡೆದುಕೊಳ್ಳಬಹುದು ಎಂದರು.
ನಂತರ ವಾರ್ಷಿಕ ವರದಿಯ ಮೇಲೆ ಆಯ ವ್ಯಯದ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮನೋಹರ ಜಾಲಹಳ್ಳಿ,ನಿರ್ದೇಶಕರಾದ ಹೆಚ್.ಸಿ ಪಾಟೀಲ್,ವಿಶ್ವರಾಧ್ಯ ಸತ್ಯಂಪೇಟೆ,ರವೀಂದ್ರ ಅಂಗಡಿ,ನಂದಯ್ಯ ಮಠಪತಿ,ಶರಣಪ್ಪ ಕಳ್ಳಿಮನಿ,ವಿಜಯಕುಮಾರ ಬಂಡೋಳಿ,ಜಗದೀಶ ಪಾಟೀಲ್,ಜಯಲಲಿತಾ ಪಾಟೀಲ್,ಶ್ವೇತಾ ಗುಳಗಿ,ವೀರಪ್ಪ ಆವಂಟಿ,ಬಸವರಾಜ ಬೂದಿಹಾಳ,ಕಾನೂನು ಸಲಹೆಗಾರ ಎಸ್.ಎಮ್ ಕನಕರಡ್ಡಿ ಸೇರಿದಂತೆ ಸೂಗೂರೇಶ ಮಡ್ಡಿ,ವಿರೇಶನಿಷ್ಠಿ ದೇಶಮುಖ,ಬಸವಲಿಂಗಯ್ಯ ಹಿರೇಮಠ,ಮಂಜುನಾಥ ಬಳಿ,ಶಿವರಾಜ ಬುದೂರು ಹಾಗು ಮುಖಂಡರಾದ ಬಸವರಾಜ ಜಮದ್ರಖಾನಿ,ಬಸವರಾಜಪ್ಪ ನಿಷ್ಠಿ ದೇಶಮುಖ,ಸೋಮಶೇಖರ ಶಾಬಾದಿ,ನಾಗರಾಜ ಜಮದ್ರಖಾನಿ,ಶಿವು ಸಾಹುಕಾರ ರುಕ್ಮಾಪುರ,ಮಂಜುನಾಥ ಜಾಲಹಳ್ಳಿ,ಸಿದ್ದನಗೌಡ ಹೆಬ್ಬಾಳ,ವಿರೇಶ ಪಂಚಾಂಗಮಠ,ಪ್ರದೀಪ ಕದರಾಪುರ ಸೇರಿದಂತೆ ಬ್ಯಾಂಕ್‌ನ ಉಪ ಸಮಿತಿ ಸದಸ್ಯರು,ಸಲಹಾ ಸಮಿತಿ ಸದಸ್ಯರು ಸೇರಿದಂತೆ ಅನೇಕರಿದ್ದರು.ಬ್ಯಾಂಕ್‌ನ ನಿರ್ದೇಶಕ ಡಿ.ಸಿ ಪಾಟೀಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.