ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸಕ್ಕೆ ಖಂಡನೆ ರೈತ ಸಂಘ ಪ್ರತಿಭಟನೆ

0
12

ಸುರಪುರ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಧ್ವಂಸ ಹಾಗು ಬಸವೇಶ್ವರರ ನಾಮಫಲಕ ಅವಮಾನ ಖಂಡಿಸಿ ನಗರದ ತಹಸೀಲ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಮಾತನಾಡಿ,ಎಮ್‌ಇಎಸ್ ಸಂಘಟನೆ ಪದೆ ಪದೆ ಕನ್ನಡಕ್ಕೆ ಅವಮಾನಿಸುವ ಕೆಲಸ ಮಾಡುತ್ತಿದೆ.ಈಗ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಧ್ವಂಸಗೊಳಿಸಿರುವುದು ಮತ್ತು ಬಸವೇಶ್ವರರ ನಾಮಫಲಕಕ್ಕೆ ಅವಮಾನಿಸಿರುವುದು ಖಂಡನಿಯ ಸಂಗತಿಯಾಗಿದೆ.ಅಲ್ಲದೆ ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟಿದ್ದಾರೆ ಮತ್ತು ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್‌ಗೆ ಕಲ್ಲೆಸೆದು ದುಸ್ಕೃತ್ಯ ನಡೆಸಿದ್ದಾರೆ.ಇಂತಹ ಕಿಡಗೇಡಿತನ ನಡೆಸಿರುವ ಎಮ್‌ಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ರಾಜ್ಯದಿಂದ ನಿಷೇಧಿಸಬೇಕು ಮತ್ತು ಮೂರ್ತಿ ಧ್ವಂಸಗೊಳಿಸಿದ ಗೂಂಡಾಗಳನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ ಸಿಬ್ಬಂದಿ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ,ಮುಖಂಡರಾದ ವೆಂಕಟೇಶ ಕುಪಗಲ್,ರಾಘು ಕುಪಗಲ್,ತಿಪ್ಪಣ್ಣ ಜಂಪಾ,ಪ್ರಭು ದೊರೆ,ಮಾನಪ್ಪ ಕೊಂಬಿನ್,ಅವಿನಾಶ ಕೊಡೇಕಲ್,ಭೀಮಣ್ಣ ತಿಪ್ಪನಟಗಿ,ಮೌನೇಶ ಅರಳಹಳ್ಳಿ,ಯಂಕೋಬ ದೊರೆ,ಯಂಕಪ್ಪ ದಾಸರ,ಹಣಮಂತ್ರಾಯ ಕರ್ನಾಳ,ಮರೆಪ್ಪ ಹೆಮನೂರ,ಮರೆಪ್ಪ ನಗರಗುಂಡ,ದೇವಪ್ಪ ಪೂಜಾರಿ,ಲಕ್ಷ್ಮಣ ನಾಯಕ,ರಂಗಯ್ಯ ಸುರಪುರ,ಬಸಣ್ಣ ಬೋವಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here