ಶಿಕ್ಷಣದಲ್ಲಿ ಸಮಗ್ರತೆ ಮತ್ತು ನೈಜತೆಗೆ ಆಧ್ಯತೆ ನೀಡಿ: ಡಾ. ನಿಷ್ಠಿ

0
61

ಕಲಬುರಗಿ: ವಿದ್ಯಾರ್ಥಿಗಳ ಸರ್ವಾಂಗೀಣ ಅಬಿವೃದ್ಧಿಗೆ ಶಿಕ್ಷಣ ಮಹತ್ವದಾಗಿದ್ದು, ಶಿಕ್ಷಣದಲ್ಲಿ ಸಮಗ್ರತೆ ಮತ್ತು ನೈಜತೆಗೆ ಆಧ್ಯತೆ ನೀಡಿ, ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆ ಸಮಾಜಮುಖಿ ಶಿಕ್ಷಣ ಹೊಂದಿರಬೇಕೆಂದು ಡಾ. ಮಲ್ಲಿಕಾರ್ಜುನ ವಿ ನಿಷ್ಟಿ ಹೇಳಿದರು.

ನಗರದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಉನ್ನತ ಶಿಕ್ಷಣದಲ್ಲಿ ಮೌಲ್ಯಮಾಪನ ಮತ್ತು ಮಾನ್ಯತೆಯಲ್ಲಿ ಸಮಗ್ರತೆ ಮತ್ತು ಮಾದರಿಗಳ ಸಾರ ಎಂಬ ವಿಷಯದ ಕುರಿತು ಎರಡು ದಿನ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.

Contact Your\'s Advertisement; 9902492681

ಯಾವುದೇ ವಿಷಯದ ಮೇಲೆ ಸಂಶೋಧನೆಗೆ ಮಾಡುವಾಗ ಹಿಂದೆ ಮಾಡಿದ ಸಮಶೋಧನೆಯನ್ನು ಗಣನೆಗೆ ತೆಗೆದುಕೊಂಡು ಭವಿಷ್ಯದಲ್ಲಿ ಬರುವ ಸಮಸ್ಯೆಗೆ ಸಲಹೆ ನೀಡುವ ಸಂಶೋಧನೆಯಾಗಿರಬೇಕೆಂದು ಶಿಕ್ಷಣದ ಪರಿಕಲ್ಪನೆ ಬಗ್ಗೆ ಮಾರ್ಮಿಕವಾಗಿ ನುಡಿದರು.

ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಡಿ.ಟಿ. ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಯಶಶ್ವಿಯಾಗಿ ನಡೆಯಬೇಕಾದರೆ ಸಂಸ್ಥಾನದ ಸಂಸ್ಥೆಯ ಬೆನ್ನುಲುಬು ಆಗಿರುವ ಅಧ್ಯಕ್ಷರಾದ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ನೇರ ಕಾರಣೀಭೂತರಾಗಿದ್ದಾರೆ.

ಪ್ರೊ. ಶರಣಮ್ಮ ವಾರದ್ ನಿರೂಪಿಸಿದ್ದರು. ಸಂಗೀತ ವಿಭಾಗದ ಪ್ರಾಧ್ಯಾಪಕಿ ಡಾ. ಛಾಯಾ ಭರತನೂರ ಪ್ರಾರ್ಥಿಸಿದರು. ಡಾ. ಜಗದೇವಿ ಕಲಶೆಟ್ಟಿ ಅತಿಥಿಯನ್ನು ಪರಿಚಯಿಸಿದ್ದರು. ಡಾ. ಶಿವರಾಜ ಶಾಸ್ತ್ರೀ ಹೆರೂರಸ್ವಾಗತಿಸಿದರು. ಡಾ. ವೆಂಕಣ್ಣ ಡೊಣ್ಣೆಗೌಡರ್ ವಂದಿಸಿದರು. ಡಾ. ಎಸ್.ಜಿ.ಡೊಳ್ಳೆಗೌಡ್‌ರ ಡಾ. ಶಾಂತಲ ನಿಷ್ಠಿ.ಇಂದಿರಾ ಶೆಟ್ಟಗಾರ ಇತರರು ಉಪಸ್ಥಿತರಿದ್ದರು. .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here