ಭಾವೈಕ್ಯತೆಯಿಂದ ಬೆರೆತಾಗ ಮಾತ್ರ ವಿಶ್ವಧರ್ಮ ನಮ್ಮದಾಗುತ್ತದೆ: ಗುರುರಾಜ ಸಂಗಾವಿ

0
32

ಶಹಾಬಾದ: ಭಾವೈಕ್ಯತೆಯಿಂದ ಕೂಡಿ ಬೆರೆತಾಗ ಮಾತ್ರ ವಿಶ್ವಧರ್ಮ ನಮ್ಮದಾಗುತ್ತದೆ ಎಂದು ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಹೇಳಿದರು.

ಅವರು ಸೆಂಟ್ ಥಾಮಸ್ ಚರ್ಚನಲ್ಲಿ ಕ್ರಿಸ್‌ಮಸ್ ಹಬ್ಬದ ನಿಮಿತ್ತ ಆಯೋಜಿಸಲಾದ ಂತರ ಧರ್ಮಿಯರ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಆಯಾ ಧರ್ಮದವರ ಆಚಾರ ವಿಚಾರ ಸಂಸ್ಕಾರಗಳು ಬೇರೆ ಬೇರೆಯಾಗಿರಬಹುದು ಆದರೆ ಅವೆಲ್ಲವುಗಳ ಗುರಿ ಒಂದೇ ಅದುವೇ ಮಾನವೀಯತೆ.ಜಗತ್ತಿನಲ್ಲಿ ಇರುವ ಎಲ್ಲಾ ಧರ್ಮಗಳು ಮಾನವ ಸಮುದಾಯವನ್ನು ಒಳಿತನ್ನು ಬಯಸುತ್ತವೆ. ಧರ್ಮ ,ಜಾತಿ,ಮತ,ಪಂತಗಳು ಬೇರೆ ಬೇರೆಯಾದರೂ ಸಾರ ಒಂದೇ ಹೀಗಾಗಿ ಮಾನವ ಕಲ್ಯಾಣವೇ ಎಲ್ಲ ಧರ್ಮಗಳ ಮುಖ್ಯ ಉದ್ದೇಶವಾಗಿದೆ. ಸರ್ವಧರ್ಮ ಸಮನ್ವಯತೆ ಇದ್ದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸೆಂಟ್ ಥಾಮಸ್ ಚರ್ಚನ ಫಾದರ್ ಸ್ಟ್ಯಾನಿ ಗೋವಿಯಸ್ ಮಾತನಾಡಿ, ಸಂತರು , ಮಹಾತ್ಮರು , ಸೂಫಿಗಳು , ಏಸು , ಮಹ್ಮದ ಪೈಗಂಬರ ಹೀಗೆ ಮಹಾತ್ಮರು ತನಗಾಗಿ ಜನಿಸದೆ ಜನಕಲ್ಯಾಣಕ್ಕಾಗಿ ಜೀವಿಸಿ ಆದರ್ಶಗಳು ಬಿಟ್ಟು ಹೋಗಿದ್ದು , ಅದನ್ನು ನಾವುಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕವಾಗುತ್ತದೆ ..ಪರೋಪಕಾರ, ಸದ್ಗುಣ,ಸೌಹಾರ್ದತೆ,ಸಹನೆ,ತ್ಯಾಗ, ಬಲಿದಾನ,ತಾಳ್ಮೆ ವಿಶ್ವದ ಎಲ್ಲಾ ಧರ್ಮ ಗ್ರಂಥಗಳ ಸಾರವಾಗಿದೆ ಎಂದರು.

ಶಾಂತ ನಗರದ ಮಕ್ಕಾಮಜೀದ್ ಅಧ್ಯಕ್ಷ ರೌಫ್ ಸೇಠ ಮಾತನಾಡಿ, ನೊಂದವರ ಬದುಕಿನ ಆಶಾಕಿರಣವಾಗಿ ಬದುಕುವುದೇ ಧರ್ಮ. ಬದುಕಿನ ಸರಿಯಾದ ಮಾರ್ಗವೇ ಧರ್ಮವಾಗಿದ್ದು, ಅದು ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಿದೆ.ಎಲ್ಲಾ ಧರ್ಮದ ಸಾರ ಒಂದೇ ಆಗಿದೆ.ಅದರ ಸಂದೇಶ ಮಾತ್ರ ವಿಶ್ವ ಮಾನವೀಯತೆ ಆಗಿದೆ ಎಂದರು.

ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಜಗದಂಬಾ ಮಂದಿರದ ಅಧ್ಯಕ್ಷ ದತ್ತಾ ಜಿಂಗಾಡೆ ಮಾತನಾಡಿದರು. ಮೆಥೋಡಿಸ್ಟ ಚರ್ಚನ ಕಾರ್ಯದರ್ಶಿ ಇಮ್ಯಾನುವೆಲ್ ಜಾನಪಾಲ್, ಜೋ ಆನಂದ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here