ಶಹಾಬಾದ: ಗ್ರಾಮದಲ್ಲಿ ಜಲ್ ಜೀವನ್ ಮಿ?ನ್ ಅಡಿಯಲ್ಲಿ ಹರ್ ಘರ್ ನಲ್ ಎಂಬ ಕೇಂದ್ರ ಸರ್ಕಾರದ ೨ ಕೋಟಿ ೪೩ ಲಕ್ಷ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ರಜನಿಕಾಂತ ಕಂಬಾನೂರ ಹೇಳಿದರು.
ಅವರು ಶುಕ್ರವಾರ ಭಂಕೂರ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆ ಮೂಲಕ ಗ್ರಾಮಗಳಲ್ಲಿ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಮಹಾತ್ವಾಕಾಂಕ್ಷಿ ಜಲ ಜೀವನ ಮಿಷನ್ ಯೋಜನೆ ಮೂಲಕ ಮನೆ ಮನೆಗೂ ನೀರನ್ನು ಪೂರೈಸುತ್ತಿದ್ದು, ಇದರ ಉಪಯೋಗ ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಹೇಳಿದರು.ಅಲ್ಲದೇ ಗುಣಮಟ್ಟದ ಕಾಮಗಾರಿಗಳನ್ನು ಮಾಡುವುದಲ್ಲದೇ, ಸಮಯದ ಅವಧಿಯೊಳಗೆ ಕಾಮಗಾರಿಯನ್ನು ಮುಗಿಸಬೇಕೆಂದು ತಿಳಿಸಿದರು.
ಬಿಜೆಪಿ ಚಿತ್ತಾಪೂರ ತಾಲೂಕಾಧ್ಯಕ್ಷ ನೀಲಕಂಠ ಪಾಟೀಲ್,ಗ್ರಾಪಂ ಸದಸ್ಯರಾದ ಶರಣಬಸಪ್ಪ ಧನ್ನಾ, ಲಕ್ಷ್ಮಿಕಾಂತ್ ಕಂದಗೋಳ, ಈರಣ್ಣ ಕಾರ್ಗಿಲ್, ವೀಣಾ ನಾರಾಯಣ, ಶಿವಯೋಗಿ ಬಣ್ಣಾಕರ್, ಮಹ್ಮದ್ ಜಾಕೀರ್, ಶರಣಗೌಡ ಕೊಡದೂರ, ಮುಜಾಹಿದ್ ಹುಸೇನ್, ಜೆಇ ರುಕುಂ ಪಟೇಲ್, ಯಲ್ಲಾಲಿಂಗ ನಾಗೂರ್, ಪಿಡಿಓ ರೇವಣಸಿದ್ದಪ್ಪ ಕಲಶೆಟ್ಟಿ ಇನ್ನೂ ಅನೇಕರು ಇದ್ದರು.
ಉಪಸ್ಥಿತರಿದ್ದರೂ.