ಕಲಬುರಗಿ: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಅವರ ಭಾವಚಿತ್ರಕ್ಕೆ ಪೂಜೆಯನ್ನು ವಿಶ್ವಕರ್ಮ ಏಕದಂಡಗಿ ಮಠದ ಪರಮ ಪೂಜ್ಯ ಶ್ರೀ ಸುರೇಂದ್ರ ಮಹಾ ಸ್ವಾಮೀಜಿಗಳು ಹಾಗೂ ಶ್ರೀ ದೇವೇಂದ್ರ ಮಹಾಸ್ವಾಮಿಜೀ ಇವರ ಅಮೃತ ಹಸ್ತ ದಿಂದ ನೆರವೇರಿತು.
ಈ ಸಭೆಯಲ್ಲಿ ಇತ್ತೀಚಿಗೆ ನಿಧನರಾದ ಬಿಜೆಪಿ ಕಲಬುರಗಿ ಮಾಧ್ಯಮ ಪ್ರಮುಖರಾದ ಅರುಣ ಕುಲಕರ್ಣಿ ಅವರ ಆತ್ಮಕ್ಕೆ ಶಾಂತಿ ಕೋರಿ ಏರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ನಗರ ಜಿಲ್ಲಾ ಅಧ್ಯಕ್ಷ ಅರವಿಂದ ಪೋದ್ದಾರ, ರಾಜ್ಯ ಕಾರ್ಯಕಾರಿಣಿಯ ಸದಸ್ಯ ಅಂಬು ಡಿಗ್ಗಿ, ಉಪಾಧ್ಯಕ್ಷ ಅಶೋಕ ಇಂಗೋಳೆ, ಹಣಮಂತ ಪೂಜಾರಿ, ಶ್ರೀಕಾಂತ ಆಲೂರ, ಮಲ್ಲಣ್ಣಾ ಕುಲಕರ್ಣಿ, ಪ್ರಮೋದ ದುಮಾಲೆ, ವಿಶ್ವಂಬರ ದುತ್ತರಗಾಂವ, ಕರಬಸಪ್ಪಾ ಪೋದ್ದಾರ, ಕಾಳಪ್ಪ ಪಂಚಾಳ,ವಿಜಯ ಕೊಂಡಂಮಪಳ್ಳಿ, ಜಯಪ್ಪ ಬಡಿಗೇರ, ಪ್ರಶಾಂತ ನಿಂಭಾಳಕರ, ಪಿತಾಂಬರ ಕಲಗುರ್ತಿ ಇದ್ದರು.